ಬೆಂಗಳೂರು: ನನ್ನ ಕರ್ತದಲ್ಲೇ ಗುಂಪುಗಾರಿಕೆ ಅನ್ನೋದು ಇಲ್ಲ. ನಾನು ಯಾವುದೇ ಬಣದ ನಾಯಕನೂ ಅಲ್ಲ. ನಾನು ಪಕ್ಷದ ಕಟ್ಟಾಳು. ನಾನು 140 ಮಂದಿ ಶಾಸಕರ ಅಧ್ಯಕ್ಷ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ದೆಹಲಿಗೆ ಶಾಸಕರು ತೆರಳಿರೋ ಬಗ್ಗೆ ಸುದ್ದಿಗಾರರು ಕೇಳಿದಂತ ಪ್ರಶ್ನೆಗೆ ಉತ್ತರಿಸಿದಂತ ಅವರು, ಸಂಪುಟ ಪುನಾರಚನೆಯ ಬಗ್ಗೆ ಸಿಎಂ ಸಿದ್ಧರಾಮಯ್ಯ ಹೇಳಿದ್ದರು. ಆ ಕಾರಣಕ್ಕಾಗಿ ಅವರು ಮಂತ್ರಿ ಸ್ಥಾನ ಕೇಳೋದಕ್ಕೆ ದೆಹಲಿಗೆ ತೆರಳಿರಬೇಕೇನೋ ಎಂದರು.
ಶಾಸಕರಂದ ಮೇಲೆ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡೋದು ಸಾಮಾನ್ಯವಾಗಿದೆ. ಅದೇ ಕಾರಣಕ್ಕಾಗಿ ಅವರು ದೆಹಲಿಗೆ ಹೋಗಿರಬಹುದು. ಕಾಂಗ್ರೆಸ್ ಹೈಕಮಾಂಡ್ ಭೇಟಿಯಾಗಲು ಕಾಂಗ್ರೆಸ್ ಶಾಸಕರು ದೆಹಲಿಗೆ ಹೋದ್ರೆ ತಪ್ಪೇನು? ಈ ಹಿಂದೆ ಸಿದ್ದರಾಮಯ್ಯ ಜೊತೆಗೆ ಕೆಲವರು ದೆಹಲಿಗೆ ಹೋಗಿರಲಿಲ್ಲವೇ ಎಂದರು.
ನಾನು ಯಾರನ್ನು ದೆಹಲಿಗೆ ಕರೆದುಕೊಂಡು ಹೋಗಿಲ್ಲ. ಮುಖ್ಯಮಂತ್ರಿ ಹೈಕಮಾಂಡ್ ಹೇಳಿದಂತೆ ಕೇಳುತ್ತಾರೆ. ಸಿದ್ಧರಾಮಯ್ಯ ಅವರ ವಿಚಾರ ಹೇಳಿದ್ದಾರೆ. ನಾನೇ ಐದು ವರ್ಷ ಸಿಎಂ ಎಂದಿದ್ದಾರೆ. ಅವರಿಗೆ ಆಲ್ ದಿ ಬೆಸ್ಟ್. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂಬುದಾಗಿ ತಿಳಿಸಿದರು.
ಸಾಗರ ತಾಲ್ಲೂಕು KUWJ ಸಂಘದ ‘ನಿಕಟಪೂರ್ವ ಅಧ್ಯಕ್ಷ ಜಿ.ನಾಗೇಶ್’ಗೆ ಸಮಾಜಸೇವಾ ರತ್ನ ಪ್ರಶಸ್ತಿ ಪ್ರದಾನ








