ಬೆಂಗಳೂರು : ದ್ವಿತೀಯ ಪಿಯುಸಿ 2023 ರ ವಾರ್ಷಿಕ ಪರೀಕ್ಷೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುತ್ತಿರುವ ರಾಜ್ಯದ ಎಲ್ಲಾ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಮಾತ್ರ ಖಾಸಗಿ ಅಭ್ಯರ್ಥಿಯಾಗಿ ನೊಂದಾಯಿಸಿಕೊಂಡು ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದ್ದು, ಅಕ್ಟೋಬರ್ 10 ರಿಂದ ಖಾಸಗಿ ಅಭ್ಯರ್ಥಿಗಳಾಗಿ ನೊಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಪರೀಕ್ಷೆ ಸಲ್ಲಿಸಲು ಅರ್ಹತೆ
1) ಕರ್ನಾಟಕದಲ್ಲಿ ಎಸ್ ಎಸ್ ಎಲ್ ಸಿ/ ಸಿಬಿಎಸ್ಇ/ ಐಸಿಎಸ್ಇ/ಎನ್ಐಒಎಸ್ ಗಳಲ್ಲಿ ವ್ಯಾಸಂಗ ಮಾಡಿ 2022 ರ ಜೂನ್ ಅಥವಾ ಅದಕ್ಕೂ ಹಿಂದಿನ ವರ್ಷಗಳಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮಾತ್ರಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
2) ದಿನಾಂಕ 31:03:2023 ಕ್ಕೆ 17 ವರ್ಷಗಳು ತುಂಬಿರಬೇಕು ( 31:03:2006 ರಂದು ಅಥವಾ ಅದಕ್ಕಿಂತ ಹಿಂದೆ ಜನಿಸಿರಬೇಕು
3) ಇತರೆ ರಾಜ್ಯಗಳಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ /10 ನೇ ತರಗತಿ ಪರೀಕ್ಷೆ ತೆಗೆದುಕೊಂಡು , ಪರೀಕ್ಷೆಯನ್ನು ಕನ್ನಡವನ್ನು ಒಂದು ಭಾಷೆಯನ್ನಾಗಿ ಅಥವಾ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿ ತೇರ್ಗಡೆ ಹೊಂದಿಬೇಕು ಹಾಗೂ 2022 ರ ಜೂನ್ ಅಥವಾ ಅದಕ್ಕೂ ಹಿಂದಿನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು.
ಶುಲ್ಕದ ವಿವರ
1) ನೊಂದಣಿ ಶುಲ್ಕ ಇತರರಿಗೆ 60 ರೂ, ಹಾಗೂ ಪ,ಜಾ, ಪಂಗಡ, ಪ್ರವರ್ಗ1 60
2) ದಾಖಲಾತಿ ಶುಲ್ಕ ಇತರರಿಗೆ 400 ರೂ, ಹಾಗೂ ಪ,ಜಾ, ಪಂಗಡ, ಪ್ರವರ್ಗ1 400
3) ಕಾಲೇಜು ಅಭಿವೃದ್ದಿ ಶುಲ್ಕ ಇತರರಿಗೆ 1020 ರೂ, ಹಾಗೂ ಪ,ಜಾ, ಪಂಗಡ, ಪ್ರವರ್ಗ 1020