Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಯಾವುದೇ ಅಸಮಾಧಾನ ಇಲ್ಲ, ಈ ಕುರಿತ ವರದಿ ಆಧಾರರಹಿತ: ಸಚಿವ ಕೆ.ಜೆ ಜಾರ್ಜ್

ಸೇನಾ ಕ್ಯಾಪ್ಟನ್ ಪ್ರೇಯಸಿಗೆ ಮಾಡಿದ ಪ್ರಪೋಸ್ ಪುಲ್ ವೈರಲ್; ನೆಟ್ಟಿಗರ ಕಾಮೆಂಟ್ ಸುರಿಮಳೆ

​ನಾರ್ವೆ ಚೆಸ್: ಗುಕೇಶ್ ವಿರುದ್ಧ ರೋಚಕ ಜಯ ಸಾಧಿಸಿದ ಪ್ರಜ್ಞಾನಂದ; ಪ್ರಶಸ್ತಿ ರೇಸ್‌ನಲ್ಲಿ ಮುನ್ನಡೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ-2 ಆರಂಭ : ವಿದ್ಯಾರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ.!
KARNATAKA

ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ-2 ಆರಂಭ : ವಿದ್ಯಾರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ.!

By kannadanewsnow57

ಬೆಂಗಳೂರು: ರಾಜ್ಯಾದ್ಯಂತ 2026ನೇ ಸಾಲಿನ ದ್ವಿತೀಯ ಪಿಯುಸಿ ‘ಪರೀಕ್ಷೆ-2’ ಇಂದಿನಿಂದ (ಏಪ್ರಿಲ್ 30) ಆರಂಭವಾಗುತ್ತಿದ್ದು, ಮೇ 13ರವರೆಗೆ ನಡೆಯಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ.

ಒಟ್ಟು ನೋಂದಾಯಿತ ವಿದ್ಯಾರ್ಥಿಗಳು 1,72,151 ವಿದ್ಯಾರ್ಥಿಗಳು, 92,554 (ಹುಡುಗರು), ವಿದ್ಯಾರ್ಥಿನಿಯರು: 79,597 (ಹುಡುಗಿಯರು), ಅಂಕ ಸುಧಾರಣೆಗಾಗಿ (Improvement): 49,512 ವಿದ್ಯಾರ್ಥಿಗಳು, ಉಳಿದವರು ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದವರು (82,765), ಖಾಸಗಿ ಅಭ್ಯರ್ಥಿಗಳು (794) ಮತ್ತು ಪುನರಾವರ್ತಿತ ಅಭ್ಯರ್ಥಿಗಳು (29,099).

ವಿದ್ಯಾರ್ಥಿಗಳಿಗೆ ಈ ನಿಯಮ ಪಾಲನೆ ಕಡ್ಡಾಯ
ಮುಖ್ಯ ಅಧೀಕ್ಷಕರು ಕ್ಯಾಮರಾ ಹೊಂದಿರದ ಸಾಮಾನ್ಯ ಮೊಬೈಲ್ ಮಾತ್ರ ಇರಿಸಿಕೊಳ್ಳಬಹುದು.

ಎಲ್ಲಾ ಪರೀಕ್ಷಾ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಮೊಬೈಲ್, ಸ್ಮಾಟ್ ವಾಚ್ ಬಳಕೆ ನಿಷೇಧ

ಎಲೆಕ್ಟ್ರಾನಿಕ್ ಸಾಮಾಗ್ರಿಗಳನ್ನು ಒಯ್ಯುವುದು ಮತ್ತು ಬಳಸುವುದನ್ನು ನಿಷೇಧಿಸಿದೆ.

ಪರೀಕ್ಷಾ ಕೇಂದ್ರದೊಳಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ, ಚಿತ್ರೀಕರಣ ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ನಿಷೇಧಿತ ವಲಯದಲ್ಲಿ ಯಾವುದೇ ರೀತಿಯ ಸ್ಫೋಟಕ ವಸ್ತುಗಳನ್ನು ಕೊಂಡು ಹೋಗುವುದನ್ನು ಹಾಗೂ ಇನ್ನಿತರ ಮಾರಕ ಆಯುಧಗಳನ್ನು ಹೊಂದುವುದನ್ನು ನಿಷೇಧಿಸಿದೆ.

ನಿಷೇಧಿತ ವಲಯದಲ್ಲಿ ಪರೀಕ್ಷೆಗೆ ಸಂಬಂಧಿಸಿದ ಯಾವುದೇ ವಿಷಯಗಳನ್ನು, ಮಾಹಿತಿಯನ್ನು ರವಾನಿಸುವ, ತಿಳಿಸುವ ಸಲುವಾಗಿ ಸಂಜ್ಞೆಗಳನ್ನು ಮಾಡುವುದುಮುಂತಾದ ಕ್ರಿಯೆಗಳಲ್ಲಿ ತೊಡಗುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ ಹಾಗೂ ಪರೀಕ್ಷೆ ಮುಗಿಯುವ ವರೆಗೆ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿರುವ ಜೆರಾಕ್ಸ್ ಅಂಗಡಿಗಳು ಕಾರ್ಯನಿರ್ವಹಿಸುವುದನ್ನು ಮತ್ತು ಈ ವ್ಯಾಪ್ತಿಯಲ್ಲಿ ಧ್ವನಿವರ್ಧಕ ಬಳಕೆಯನ್ನು ನಿಷೇಧಿಸಿದೆ.ಈ ಸಮಯದಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ ಬಿಎಂಟಿಸಿ ಸಾಮಾನ್ಯ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ಕೇಂದ್ರಗಳ ಸುತ್ತ ನಿಷೇಧಾಜ್ಞೆ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ 2026 ರ ದ್ವಿತೀಯ ಪಿಯುಸಿ ಪರೀಕ್ಷೆ-2 ನ್ನು ಏಪ್ರಿಲ್, 30 ರಿಂದ ಮೇ, 13 ರವರೆಗೆ ಯಾವುದೇ ಅವ್ಯವಹಾರಗಳಿಲ್ಲದೆ ಸುಗಮವಾಗಿ ದ್ವಿತೀಯ ಪಿಯುಸಿ ಪರೀಕ್ಷೆ-2ನ್ನು ನಡೆಸುವ ಸಲುವಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ರ ಕಲಂ 163 ರಡಿ ದತ್ತವಾದ ಅಧಿಕಾರದಂತೆ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿನ ಪ್ರದೇಶವನ್ನು ನಿರ್ಭಂದಿತ ಸ್ಥಳ ಎಂದು ಘೋಷಿಸಲಾಗಿದೆ.

ಮೊದಲ ದಿನದ ಪರೀಕ್ಷೆ:

ಗುರುವಾರವಾದ ಇಂದು ಮೊದಲ ದಿನ ಕನ್ನಡ ಮತ್ತು ಅರೇಬಿಕ್ ಭಾಷಾ ಪರೀಕ್ಷೆಗಳು ನಡೆಯಲಿವೆ ಎಂದು ಮಂಡಳಿಯ ನಿರ್ದೇಶಕ ಗೋಪಾಲಕೃಷ್ಣ ಅವರು ಮಾಹಿತಿ ನೀಡಿದ್ದಾರೆ.

ಪರೀಕ್ಷಾ ವೇಳಾಪಟ್ಟಿ ಮುಖ್ಯಾಂಶಗಳು:

  • ಪರೀಕ್ಷೆ ಆರಂಭ: 30/04/2026 (ಗುರುವಾರ) – ವಿಷಯ: ಕನ್ನಡ, ಅರೇಬಿಕ್.

  • ಪರೀಕ್ಷೆ ಮುಕ್ತಾಯ: 13/05/2026 (ಬುಧವಾರ).

  • ಸಮಯ: ಹೆಚ್ಚಿನ ಪರೀಕ್ಷೆಗಳು ಬೆಳಿಗ್ಗೆ 10-00 ರಿಂದ ಮಧ್ಯಾಹ್ನ 1-00 ರವರೆಗೆ (3 ಗಂಟೆಗಳ ಅವಧಿ) ನಡೆಯಲಿವೆ.

  • ವೃತ್ತಿಪರ ಕೋರ್ಸ್‌ಗಳ ಸಮಯ: ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್ ಸೇರಿದಂತೆ ಕೆಲವು ವೃತ್ತಿಪರ ವಿಷಯಗಳ ಪರೀಕ್ಷೆಯು ಮೇ 13 ರಂದು ಮಧ್ಯಾಹ್ನ 2-00 ರಿಂದ ಸಂಜೆ 4-15 ರವರೆಗೆ ನಡೆಯಲಿದೆ.

ಪ್ರಮುಖ ವಿಷಯಗಳ ಪರೀಕ್ಷಾ ದಿನಾಂಕಗಳು:

ದಿನಾಂಕ ವಿಷಯಗಳು
30/04/2026

ಕನ್ನಡ, ಅರೇಬಿಕ್

02/05/2026

ಐಚ್ಛಿಕ ಕನ್ನಡ, ತರ್ಕಶಾಸ್ತ್ರ (Logic), ಲೆಕ್ಕಶಾಸ್ತ್ರ (Accountancy), ರಸಾಯನಶಾಸ್ತ್ರ (Chemistry)

04/05/2026

ಇಂಗ್ಲೀಷ್

05/05/2026

ವ್ಯವಹಾರ ಅಧ್ಯಯನ (Business Studies), ಭೌತಶಾಸ್ತ್ರ (Physics), ಶಿಕ್ಷಣಶಾಸ್ತ್ರ (Education)

06/05/2026

ಅರ್ಥಶಾಸ್ತ್ರ (Economics), ಜೀವಶಾಸ್ತ್ರ (Biology)

07/05/2026

ಇತಿಹಾಸ (History), ಗಣಿತ (Mathematics), ಗೃಹವಿಜ್ಞಾನ (Home Science)

08/05/2026

ರಾಜ್ಯಶಾಸ್ತ್ರ (Political Science), ವಿದ್ಯುನ್ಮಾನಶಾಸ್ತ್ರ (Electronics), ಗಣಕ ವಿಜ್ಞಾನ (Computer Science)

09/05/2026

ಹಿಂದಿ

11/05/2026

ಸಮಾಜಶಾಸ್ತ್ರ (Sociology), ಸಂಖ್ಯಾಶಾಸ್ತ್ರ (Statistics)

12/05/2026

ಭೂಗೋಳ ಶಾಸ್ತ್ರ (Geography), ಮನಃಶಾಸ್ತ್ರ (Psychology), ಭೂಗರ್ಭ ಶಾಸ್ತ್ರ (Geology), ಮೂಲ ಗಣಿತ (Basic Maths)

13/05/2026

ಸಂಸ್ಕೃತ, ಉರ್ದು, ಮರಾಠಿ, ಸಂಗೀತ ಮತ್ತು ವಿವಿಧ ವೃತ್ತಿಪರ ವಿಷಯಗಳು

ಗಮನಿಸಿ: ಮೇ 1 (ಕಾರ್ಮಿಕರ ದಿನಾಚರಣೆ), ಮೇ 3 ಮತ್ತು ಮೇ 10 (ಭಾನುವಾರ) ರಂದು ಪರೀಕ್ಷೆಗಳಿಗೆ ರಜೆ ಇರುತ್ತದೆ.

ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮತ್ತು ಸಂಪೂರ್ಣ ವೇಳಾಪಟ್ಟಿಗಾಗಿ ಮಂಡಳಿಯ ಅಧಿಕೃತ ವೆಬ್‌ಸೈಟ್ ಅನ್ನು ಗಮನಿಸಬಹುದಾಗಿದೆ. ಪರೀಕ್ಷೆ ಬರೆಯುವ ಎಲ್ಲಾ ಅಭ್ಯರ್ಥಿಗಳಿಗೆ ಶುಭವಾಗಲಿ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

Second PUC Exam-2 begins across the state from today: It is mandatory for students to follow these rules!
Share. Facebook Twitter LinkedIn WhatsApp Email

Related Posts

ಯಾವುದೇ ಅಸಮಾಧಾನ ಇಲ್ಲ, ಈ ಕುರಿತ ವರದಿ ಆಧಾರರಹಿತ: ಸಚಿವ ಕೆ.ಜೆ ಜಾರ್ಜ್

1 Min Read

BREAKING: ಕಲಬುರ್ಗಿಯಲ್ಲಿ ಪ್ರೀತಿ ನಿರಾಕರಣೆಯ ಭೀತಿಯಲ್ಲಿ ರೈಲಿಗೆ ತಲೆಕೊಟ್ಟು ಪ್ರೇಮಿಗಳು ಆತ್ಮಹತ್ಯೆ!

1 Min Read

BREAKING: ವಿಧಾನ ಪರಿಷತ್ ಚುನಾವಣೆಗೆ 5ನೇ ಅಭ್ಯರ್ಥಿ ಕಣಕ್ಕೆ ಇಳಿಸಿದ ಕಾಂಗ್ರೆಸ್

1 Min Read
Recent News

ಯಾವುದೇ ಅಸಮಾಧಾನ ಇಲ್ಲ, ಈ ಕುರಿತ ವರದಿ ಆಧಾರರಹಿತ: ಸಚಿವ ಕೆ.ಜೆ ಜಾರ್ಜ್

ಸೇನಾ ಕ್ಯಾಪ್ಟನ್ ಪ್ರೇಯಸಿಗೆ ಮಾಡಿದ ಪ್ರಪೋಸ್ ಪುಲ್ ವೈರಲ್; ನೆಟ್ಟಿಗರ ಕಾಮೆಂಟ್ ಸುರಿಮಳೆ

​ನಾರ್ವೆ ಚೆಸ್: ಗುಕೇಶ್ ವಿರುದ್ಧ ರೋಚಕ ಜಯ ಸಾಧಿಸಿದ ಪ್ರಜ್ಞಾನಂದ; ಪ್ರಶಸ್ತಿ ರೇಸ್‌ನಲ್ಲಿ ಮುನ್ನಡೆ!

BREAKING: ಕಲಬುರ್ಗಿಯಲ್ಲಿ ಪ್ರೀತಿ ನಿರಾಕರಣೆಯ ಭೀತಿಯಲ್ಲಿ ರೈಲಿಗೆ ತಲೆಕೊಟ್ಟು ಪ್ರೇಮಿಗಳು ಆತ್ಮಹತ್ಯೆ!

State News
KARNATAKA

ಯಾವುದೇ ಅಸಮಾಧಾನ ಇಲ್ಲ, ಈ ಕುರಿತ ವರದಿ ಆಧಾರರಹಿತ: ಸಚಿವ ಕೆ.ಜೆ ಜಾರ್ಜ್

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು : ಇಂಧನ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳ ನೇಮಕ ಹಾಗೂ ಖಾತೆ ಹಂಚಿಕೆ ಕುರಿತು ಅಸಮಾಧಾನ ಇಲ್ಲ ಎಂದಿರುವ ಇಂಧನ…

BREAKING: ಕಲಬುರ್ಗಿಯಲ್ಲಿ ಪ್ರೀತಿ ನಿರಾಕರಣೆಯ ಭೀತಿಯಲ್ಲಿ ರೈಲಿಗೆ ತಲೆಕೊಟ್ಟು ಪ್ರೇಮಿಗಳು ಆತ್ಮಹತ್ಯೆ!

BREAKING: ವಿಧಾನ ಪರಿಷತ್ ಚುನಾವಣೆಗೆ 5ನೇ ಅಭ್ಯರ್ಥಿ ಕಣಕ್ಕೆ ಇಳಿಸಿದ ಕಾಂಗ್ರೆಸ್

BREAKING: ಧಾರವಾಡ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿಗೆ ಪ್ರಾಧ್ಯಾಪಕನಿಂದಲೇ ಕಿರುಕುಳ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.