ಬೆಂಗಳೂರು : ಫೆಬ್ರವರಿ/ಮಾರ್ಚ್ 2026 ರಲ್ಲಿ ನಡೆಸಲಾಗುವ ದ್ವಿತೀಯ ಪಿಯುಸಿ ಪರೀಕ್ಷೆ-1ಕ್ಕೆ ಖಾಸಗಿ ಅಭ್ಯರ್ಥಿಗಳಾಗಿ ನೋಂದಾಯಿಸಿಕೊಳ್ಳುವ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಮಹತ್ವದ ಆದೇಶ ಹೊರಡಿಸಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ವತಿಯಿಂದ ನಡೆಸುತ್ತಿರುವ ಫೆಬ್ರವರಿ/ಮಾರ್ಚ್ 2026 ರ ದ್ವಿತೀಯ ಪಿಯುಸಿ ಪರೀಕ್ಷೆ-1ಕ್ಕೆ ಉಲ್ಲೇಖಿತ ಸರ್ಕಾರದ ಆದೇಶಗಳನ್ವಯ ಪಿಯುಸಿ ಶಿಕ್ಷಣ ಬೋಧಿಸುವ ರಾಜ್ಯದ ಎಲ್ಲಾ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಮಾತ್ರ ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ 2026 ರ ದ್ವಿತೀಯ ಪಿಯುಸಿ ಪರೀಕ್ಷೆ-1ಕ್ಕೆ ಅರ್ಹ ಅಭ್ಯರ್ಥಿಗಳಿಂದ ದಿನಾಂಕ:15-10-2025 ರಿಂದ ಖಾಸಗಿ ಅಭ್ಯರ್ಥಿಗಳಾಗಿ ನೋಂದಾಯಿಸಿಕೊಳ್ಳಲು ONLINE ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನೇರವಾಗಿ ಕಾಲೇಜಿನಲ್ಲಿ ನೋಂದಾಯಿಸಿಕೊಳ್ಳಲು ಅವಕಾಶವಿರುವುದಿಲ್ಲ.
ಖಾಸಗಿ ಅಭ್ಯರ್ಥಿಗಳಾಗಿ ನೋಂದಾಯಿಸಿಕೊಳ್ಳಲು ಕಡ್ಡಾಯವಾಗಿ ಇರಬೇಕಾದ ಅರ್ಹತೆಗಳು ಹಾಗೂ ಸೂಚನೆಗಳು:
1. ದಿನಾಂಕ: 31-03-2026 ಕ್ಕೆ 17 ವರ್ಷಗಳು ತುಂಬಿರಬೇಕು. (31-03-2009 ರಂದು ಅಥವಾ ಅದಕ್ಕಿಂತ ಹಿಂದೆ ಜನಿಸಿರಬೇಕು. (ಉಲ್ಲೇಖ-4ರ ಆದೇಶದಂತೆ)
2. ಕರ್ನಾಟಕದಲ್ಲಿ ಎಸ್.ಎಸ್.ಎಲ್.ಸಿ/ ಸಿ.ಬಿ.ಎಸ್.ಇ/ಐ.ಸಿ.ಎಸ್.ಇ/ ಎನ್.ಐ.ಓ.ಎಸ್.ಗಳಲ್ಲಿ ವ್ಯಾಸಂಗ ಮಾಡಿ 2025 ರ ಆಗಸ್ಟ್ ಅಥವಾ ಅದಕ್ಕೂ ಹಿಂದಿನ ವರ್ಷಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
3. ಇತರೆ ರಾಜ್ಯಗಳ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ/10ನೇ ತರಗತಿ ಪರೀಕ್ಷೆ ತೆಗೆದುಕೊಂಡು, ಕನ್ನಡವನ್ನು ಒಂದು ಭಾಷೆಯನ್ನಾಗಿ ಅಥವಾ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿ ತೇರ್ಗಡೆ ಹೊಂದಿರಬೇಕು ಹಾಗೂ 2025 ರ ಆಗಸ್ಟ್ ಅಥವಾ ಅದಕ್ಕೂ ಹಿಂದಿನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು.
4. ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ದಾಖಲಾತಿ ಮಾರ್ಗಸೂಚಿ ಪಟ್ಟಿಯಲ್ಲಿರುವ ಸೆಕೆಂಡರಿ ಎಜುಕೇಷನ್ ಬೋರ್ಡ್ಗಳಿಂದ 2025 ರ ಆಗಸ್ಟ್ ಅಥವಾ ಅದಕ್ಕೂ ಹಿಂದಿನ ಸಾಲಿನ ಪರೀಕ್ಷೆಗಳಲ್ಲಿ 10ನೇ ತರಗತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.
5. ಪ್ರಥಮ ಪಿಯುಸಿ ಅನುತ್ತೀರ್ಣರಾದವರು, ಪರೀಕ್ಷೆಗೆ ಹಾಜರಾಗದವರು, ವ್ಯಾಸಂಗವನ್ನು ಮುಂದುವರೆಸದವರು (Discontinued) ಅರ್ಹರಾಗಿರುತ್ತಾರೆ.
6. ಕರ್ನಾಟಕ ರಾಜ್ಯದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಐ.ಟಿ.ಐ, ಜೆಓಸಿ, ಡಿಪ್ಲೊಮೊ ಇತ್ಯಾದಿ ತರಗತಿಗಳಿಗೆ ದಾಖಲಾಗಿ ಅನುತ್ತೀರ್ಣಗೊಂಡವರು, ಉತ್ತೀರ್ಣರಾದವರು ಹಾಗೂ ಅಲ್ಲಿ ವ್ಯಾಸಂಗ ಮುಂದುವರೆಸದವರು (Discontinued) ಅರ್ಹರಾಗಿರುತ್ತಾರೆ.
7. ದ್ವಿತೀಯ ಪಿಯಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವ ಸಂಯೋಜನೆ ಹೊರತುಪಡಿಸಿ, ಕಲಾ ಅಥವಾ ವಾಣಿಜ್ಯ ವಿಭಾಗದ ಬೇರೆ ಸಂಯೋಜನೆಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.
ಉದಾಹರಣೆ: (
1) ಅಭ್ಯರ್ಥಿಯು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದ HESP ಸಂಯೋಜನೆಯಲ್ಲಿ ಅನುತ್ತೀರ್ಣಗೊಂಡಿದ್ದರೆ, HESP ಸಂಯೋಜನೆ ಬದಲು HEPG ಅಥವಾ HELP ಅಥವಾ HEPEd ಅಥವಾ HESEd ಅಥವಾ ವಾಣಿಜ್ಯ ವಿಭಾಗದ HEBA ಅಥವಾ EGBA ಅಥವಾ EBAB ಅಥವಾ BASB ಇತ್ಯಾದಿ ಸಂಯೋಜನೆಗೆ ನೋಂದಾಯಿಸಿಕೊಳ್ಳಬಹುದಾಗಿದೆ.”
(2) ಅಭ್ಯರ್ಥಿಯು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದ HEBA ಸಂಯೋಜನೆಯಲ್ಲಿ ಅನುತ್ತೀರ್ಣಗೊಂಡಿದ್ದರೆ, HEBA ಸಂಯೋಜನೆ ಬದಲು EGBA ಅಥವಾ EBAB ಅಥವಾ BASB ಅಥವಾ ಕಲಾ ವಿಭಾಗದ HESP ಅಥವಾ HEPG ಅಥವಾ HELP ಅಥವಾ HEPEd ಇತ್ಯಾದಿ ಸಂಯೋಜನೆಗೆ ನೋಂದಾಯಿಸಿಕೊಳ್ಳಬಹುದಾಗಿದೆ.
(3) ಅಭ್ಯರ್ಥಿಯು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದ ಯಾವುದೇ ಸಂಯೋಜನೆಯಲ್ಲಿ ಅನುತ್ತೀರ್ಣಗೊಂಡಿದ್ದರೆ ಕಲಾ ವಿಭಾಗದ ಅಥವಾ ವಾಣಿಜ್ಯ ವಿಭಾಗದ ಈ ಕೆಳಗೆ ನಮೂದಿಸಿರುವ ಸಂಯೋಜನೆಗೆ ನೋಂದಾಯಿಸಿಕೊಳ್ಳಬಹುದಾಗಿದೆ.
8. ಖಾಸಗಿ ಅಭ್ಯರ್ಥಿಗಳು ಆಧಾರ್ ಕಾರ್ಡ್ ದೃಢೀಕೃತ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಲು ಸೂಚಿಸಿದೆ.
9. ದ್ವಿಪತಿ ವರ್ಗಾವಣೆ ಪತ್ರದ ಆಧಾರದ ಮೇಲೆ ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿಕೊಳ್ಳಲು ಬಂದಾಗ ಪ್ರಾಂಶುಪಾಲರು ತಮ್ಮ ಹಂತದಲ್ಲಿಯೇ ಪರಿಶೀಲಿಸಿ 100-00 ರೂಗಳ ಛಾಪಾ ಕಾಗದದಲ್ಲಿ ಮಂಡಲಿಯಿಂದ ಒದಗಿಸಿರುವ ನಿಗದಿತ ನಮೂನೆಯಲ್ಲಿ ಅಭ್ಯರ್ಥಿಯಿಂದ ದೃಢೀಕರಣ ಪಡೆಯುವುದು. (ದೃಢೀಕರಣ ಪತ್ರದ ಮಾದರಿಯನ್ನು ಸುತ್ತೋಲೆಯೊಂದಿಗೆ ಲಗತ್ತಿಸಿದೆ).
10. ಖಾಸಗಿ ಅಭ್ಯರ್ಥಿಗಳು ಕಲಾ ಅಥವಾ ವಾಣಿಜ್ಯ ಸಂಯೋಜನೆಯಲ್ಲಿ ಮಾತ್ರ ಭಾಗ-1 ರಲ್ಲಿ ಎರಡು ಭಾಷಾ ವಿಷಯಗಳನ್ನು ಹಾಗೂ ಭಾಗ-2 ರಲ್ಲಿ ನಾಲ್ಕು ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
11. ಸಾಮಾನ್ಯ ಪ್ರಶ್ನೆಗಳಿಗಾಗಿ: ಸಹಾಯವಾಣಿ ಸಂಖ್ಯೆ: 080- 23310075/76 ಅನ್ನು ಸಂಪರ್ಕಿಸಿ.
12. 3 : 9448772500, 9886082073, 9663657041 ಅನ್ನು ಸಂಪರ್ಕಿಸಿ.