ಹೈದರಾಬಾದ್ : ಪತಿಯೊಬ್ಬ ತನ್ನ ಹೆಂಡತಿಗೆ ತಿಳಿಯದಂತೆ ಎರಡನೇ ಮದುವೆಯಾಗುವುದು ಸಾಮಾನ್ಯ. ಆದ್ರೆ, ಇಲ್ಲೊಂದು ಪ್ರಕರಣ ಅದಕ್ಕೆ ತದ್ವಿರುದ್ಧವಾಗಿದೆ. ಇಲ್ಲಿಯೇ ಪತ್ನಿಯೇ ತನ್ನ ಪತಿಗೆ ತಿಳಿಯದಂತೆ ಎರಡನೇ ಮದುವೆಯಾಗಿದ್ದಾಳೆ. ನಂತ್ರ ಪತಿ ನ್ಯಾಯ ಕೊಡಿಸಿ ಅಂತಾ ಪೊಲೀಸರ ಮೊರೆಯೋಗಿರುವ ಘಟನೆ ಹೈದರಾಬಾದಿನಲ್ಲಿ ಬೆಳಕಿಗೆ ಬಂದಿದೆ.
ತನ್ನ ಪತ್ನಿ ತನಗೆ ವಿಚ್ಛೇದನ ನೀಡದೇ 2ನೇ ಬಾರಿಗೆ ಮದುವೆಯಾಗಿದ್ದಾಳೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಪೊಲೀಸರಿಗೆ ದೂರು ನೀಡಿದ್ದಾನೆ. ಈ ಪ್ರಕರಣದ ಬಗ್ಗೆ ಬಂಜಾರಾ ಹಿಲ್ಸ್ ಪೊಲೀಸರು ಹೇಳುವಂತೆ, ಫಸ್ಟ್ ಲ್ಯಾನ್ಸರ್ ಪ್ರದೇಶದ ನಿವಾಸಿ ಮೊಹಮ್ಮದ್ ಚೂದ್ದಮ್ 2013ರಲ್ಲಿ ಹಿರಿಯರ ಸಮ್ಮುಖದಲ್ಲಿ ಬೇಗಂನನ್ನ ವಿವಾಹವಾದ. ನಂತ್ರ ಆಕೆ 2017ರಲ್ಲಿ ಮೊಯಿನುದ್ದೀನ್ ಎಂಬ ವ್ಯಕ್ತಿಯನ್ನ 2ನೇ ವಿವಾಹವಾಗಿದ್ದಾಳೆ. ಅವ್ರಿಗೆ ಇಬ್ಬರು ಮಕ್ಕಳೂ ಇದ್ದಾರೆ. ಆದಾಗ್ಯೂ, ಮುಸ್ಲಿಂ ಕಾನೂನಿನ ಪ್ರಕಾರ, ಆಲೆ ತನಗೆ ಖುಲಾ (ವಿಚ್ಛೇದನ) ನೀಡದೆ ಬೇರೊಬ್ಬರನ್ನು ಮದುವೆಯಾಗಿದ್ದಾಳೆ ಎಂದು ಅವರು ದೂರಿನಲ್ಲಿ ಹೇಳಿದ್ದಾನೆ.
ರುಬೀನಾ ಬೇಗಂ ತನ್ನ ವಿರುದ್ಧ ಕಿರುಕುಳದ ಅಡಿಯಲ್ಲಿ ಸುಳ್ಳು ಪ್ರಕರಣ ದಾಖಲಿಸಿದ್ದಾಳೆ ಎಂದು ಮೊಹಮ್ಮದ್ ಹೇಳಿದ್ದಾನೆ. ತನ್ನ ವಿರುದ್ಧ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಆರೋಪಿಸಿ ತಾನು ಲೈಂಗಿಕ ಸಾಮರ್ಥ್ಯ ಪರೀಕ್ಷೆಗೆ ಒಳಗಾಗಿದ್ದೇನೆ ಮತ್ತು ತನ್ನ ವಿರುದ್ಧ ಪ್ರಮಾಣಪತ್ರವನ್ನ ಪಡೆದಿದ್ದೇನೆ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ತನ್ನ ಪತ್ನಿ, ತಾಯಿ ಮತ್ತು ಸಹೋದರ ತನ್ನ ಮೇಲೆ ಹಲವಾರು ಬಾರಿ ಹಲ್ಲೆ ನಡೆಸಿದ್ದಾರೆ ಮತ್ತು ಅವರಿಂದ ತನ್ನ ಜೀವಕ್ಕೆ ಅಪಾಯವಿದೆ ಎಂದು ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಅದ್ರಂತೆ, ರುಬಿನಾ ಬೇಗಂ, ಆಕೆಯ ತಾಯಿ ಮುಮ್ತಾಜ್ ಬೇಗಂ ಮತ್ತು ಕುಟುಂಬ ಸದಸ್ಯರಾದ ಹೈದರ್ ಅಲಿ, ಯೂಸುಫ್ ಪಾಷಾ, ಮೊಹಮ್ಮದ್ ಖಾಸಿಂ ಮತ್ತು ಮುಬಿನುದ್ದೀನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.