ಮಂಗಳೂರು : ಕಡಲತಡಿಯ ಪಣಂಬೂರಿನ ಮೀನಕಳಿಯಲ್ಲಿ ಮುಂದುವರಿದ ಕಡಲ್ಕೊರೆತ ಹೆಚ್ಚಾಗಿದ್ದು, ಅಲೆಗಳ ರಭಸಕ್ಕೆ 3 ಮನೆಗಳು ಸಮುದ್ರಪಾಲಾದ ಘಟನೆ ಬೆಳಕಿಗೆ ಬಂದಿದೆ.
ಇನ್ನೂ 8 ಮನೆಗಳು ಅಪಾಯದ ಭೀತಿಯಲ್ಲಿದೆ. ಈಗಾಗಲೇ ಸಂಬಂಧಿಕರ ಮನೆಗಳಿಗೆ ತೆರಳುವಂತೆ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಪ್ರತಿ ವರ್ಷವೂ ಇದೇ ರೀತಿಯ ಸಮಸ್ಯೆ ಎದುರಾಗುತ್ತಿದೆ ಇದಕ್ಕೆ ಶಾಶ್ವತ ಪರಿಹಾರ ನೀಡಬೇಕೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.