ಮೈಸುರು : ಇದೆ 22ರಂದು ಅಯೋಧ್ಯ ಶ್ರೀ ರಾಮಮಂದಿರ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮ ಆ ಯೋಜನೆ ಮಾಡಲಾಗಿದ್ದು, ಈ ಒಂದು ಶ್ರೀ ರಾಮನ ಗರ್ಭಗುಡಿಯಲ್ಲಿ ರಾಜ್ಯದ ಮೈಸೂರು ಜಿಲ್ಲೆಯ ಹೆಗ್ಗಡ ದೇವನಕೋಟೆಯ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೈಯಲ್ಲಿ ಮೂಡಿಬಂದ ಶ್ರೀ ರಾಮನ ಮೂರ್ತಿ ಪ್ರತಿಷ್ಠಾಪನೆಯಾಗುವುದು ಕನ್ನಡಿಗರಿಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಈ ವಿಷಯವಾಗಿ ಮೈಸೂರಿನಲ್ಲಿ ಅವರ ಪತ್ನಿ ವಿಜೇತ ಅವರು ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ರಾಮನ ಮೂರ್ತಿ ಕೆತ್ತಿದ ಅರುಣ್ ಯೋಗಿರಾಜ್ ಪತ್ನಿ ವಿಜೇತ ಹೇಳಿಕೆ ನೀಡಿದ್ದು, ನನ್ನ ಪತಿ ಕೆತ್ತಿದ ಮೂರ್ತಿಯೇ ಆಯ್ಕೆಯಾಗುತ್ತೆ ಅಂತ ಅನ್ನಿಸಿತ್ತು. ನಮಗೆ ಇದು ಹೆಮ್ಮೆ ವಿಚಾರವಾಗಿದೆ. ರಾಮಲಲ್ಲ ಮೂರ್ತಿ ಬಹಳ ಸುಂದರವಾಗಿ ಮೂಡಿ ಬಂದಿದೆ. ಕೆತ್ತನೆ ಮಾಡುವ ಸಂದರ್ಭದಲ್ಲಿ ಸಾಕಷ್ಟು ರೀತಿಯಲ್ಲಿ ಪತಿ ಅಧ್ಯಯನ ಮಾಡಿದ್ದರು ಎಂದು ಅವರು ತಿಳಿಸಿದರು.
ರಾಮನ ಮೂರ್ತಿ ಕೆತ್ತನೆ ಬಹಳ ಕಷ್ಟದ ಕೆಲಸವಾಗಿತ್ತು. ಕಾಲ್ಪನಿಕವಾಗಿದ್ದರಿಂದ ಹೇಗೆ ಮೂಡಿ ಬರುತ್ತೆ ಅಂತ ಗೊತ್ತಿರಲಿಲ್ಲ. ಮೂರ್ತಿ ಕೆತ್ತನೆ ವೇಳೆ ಅರುಣ್ ಯೋಗಿರಾಜ್ ಗೆ ಕಣ್ಣಿಗೆ ಗಾಯವಾಗಿತ್ತು.ಅಲ್ಲದೆ ಗಾಯವಾಗಿ ಆಪರೇಷನ್ ಕೂಡ ಆಗಿತ್ತು. ಆದರು ಕೆಲಸ ಮಾಡಿದ್ದರು ಎಂದು ಮೈಸೂರಿನಲ್ಲಿ ಯೋಗಿರಾಜ್ ಪತ್ನಿ ವಿಜೇತ ಹೇಳಿದರು.