ಬೆಂಗಳೂರು : ನಗರದ ಕ್ವೀನ್ ರಸ್ತೆಯ ವಿಧಾನ ಸೌಧ, ಕಮಿಷನರ್ ಕಚೇರಿ ಬಳಿ ರಾತ್ರಿ 11 ಗಂಟೆ ಸುಮಾರಿಗೆ ಹುಡುಗಾಗಿ ಲಾಂಗ್ ಹಿಡಿದುಕೊಂಡು ಗಲಾಟೆ ನಡೆದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಯವಕ ಹುಡುಗಿಯನ್ನು ಬೈಕ್ನಲ್ಲಿ ಕರೆದುಕೊಂಡು ವಿಧಾನ ಸೌಧದ ಎದುರು ಬರುತ್ತಾನೆ. ಈ ಸಂದರ್ಭದಲ್ಲಿ 3 ಹುಡುಗರ ಗುಂಪೊಂದು ಅಡ್ಡಗಟ್ಟಲಾಗಿದೆ. ಆ ಸಂದರ್ಭದಲ್ಲಿ ಲಾಂಗ್ ಹಿಡಿದು ಹಲ್ಲೆಗೆ ಯತ್ನಿಸಿದ್ದಾರೆ.
ಈ ಬಗ್ಗೆ ಯಾವುದೇ ಠಾಣೆಯಲ್ಲಿ ಇದುವರೆಗೂ ಪ್ರಕರಣ ದಾಖಲಾಗಿಲ್ಲ. ಈ ಗಲಾಟೆ ನಡೆದ ವಿಡಿಯೋ ಸಿಸಿಟಿವಿಯಲ್ಲಿ ಸೇರೆಯಾಗಿದ್ದು, ಗಲಾಟೆ ನಡೆಸಿದ ಹುಡುಗ ಹುಡುಗಿ ಎಲ್ಲಿಯವರು ಎಂಬುದು ತಿಳಿದುಬಂದಿಲ್ಲ. ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಕ್ವೀನ್ ರಸ್ತೆ ವ್ಯಾಪ್ತಿಗೆ ಬರುವ ಪೊಲೀಸ್ ಠಾಣಾಧಿಕಾರಿಗಳು ತೀವ್ರ ಹುಡುಕಾಟ ನಡೆಸಿದ್ದಾರೆ.