ಕೇರಳ: ಕೇರಳದ ಕಣ್ಣೂರು ಜಿಲ್ಲೆಯ ಮಟ್ಟನ್ನೂರಿನ ಕಾಸಿಮುಕ್ಕು ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ತಂದೆ ಮತ್ತು ಮಗ ಸಾವನ್ನಪ್ಪಿರುವ ಘಟನೆ ನಡೆದಿದೆ.
ವರದಿಗಳ ಪ್ರಕಾರ, ಸ್ಕ್ರ್ಯಾಪ್ ಸಂಗ್ರಹಿಸಲು ತೊಡಗಿದ್ದ ಅಸ್ಸಾಂ ಮೂಲದ ಫಸಲ್ ಹಕ್ (45) ಮತ್ತು ಮಗ ಶಹೀದುಲ್ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ.
ಇವರು ಗುಜರಿ ಹೆಕ್ಕಿ ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದರು. ಸ್ಕ್ರ್ಯಾಪ್ ಸಂಗ್ರಹದ ವೇಳೆ ತಮಗೆ ದೊರೆತಿದ್ದ ಸ್ಟೀಲ್ ಬಾಕ್ಸ್ವೊಂದನ್ನು ಮನೆಗೆ ತಂದು ಓಪನ್ ಮಾಡಿದ ತಕ್ಷಣವೇ ಅದು ಸ್ಫೋಟಗೊಂಡಿದೆ. ಈ ವೇಳೆ ಫಸಲ್ ಹಕ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮಗ ಶಹೀದುಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.
ಬುಧವಾರ ಸಂಜೆ 5.30ಕ್ಕೆ ಅಪಘಾತ ಸಂಭವಿಸಿದೆ. ಸುದ್ದಿ ತಿಳಿಯುತ್ತಿದ್ದಂತೇ ಘಟನಾ ಸ್ಥಳಕ್ಕೆ ಬಂದ ಪೊಲೀಸರು, ಬಾಂಬ್ ಸ್ಕ್ವಾಡ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಫೋಟಕ್ಕೆ ಏನು ಬಳಸಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Good News : ವಸತಿ ರಹಿತರಿಗೆ ಸಿಹಿಸುದ್ದಿ : ಆಶ್ರಯ ಮನೆ ಹಂಚಿಕೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ