ನವದೆಹಲಿ: ವೈಜ್ಞಾನಿಕ ಸಂಶೋಧನೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯ ಮಹತ್ವ ಮತ್ತು ಮಹಿಳೆಯರ ಭಾಗವಹಿಸುವಿಕೆ ಹೆಚ್ಚಳವು ಸಮಾಜ ಮತ್ತು ವಿಜ್ಞಾನದ ಪ್ರಗತಿಯ ಪ್ರತಿಬಿಂಬವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ನಾಗ್ಪುರ ವಿಶ್ವವಿದ್ಯಾಲಯವು ಆಯೋಜಿಸಿರುವ 4 ದಿನಗಳ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (Indian Science Congress) ಅನ್ನು ಉದ್ಘಾಟಿಸಿದ ಮೋದಿ ಅವರು ಈ ಮಾತುಗಳನ್ನಾಡಿದ್ದಾರೆ.
ಇಂದು ದೇಶದ ಚಿಂತನೆಯು ವಿಜ್ಞಾನದ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವುದು ಮಾತ್ರವಲ್ಲ, ಮಹಿಳೆಯರ ಸಹಭಾಗಿತ್ವದೊಂದಿಗೆ ವಿಜ್ಞಾನವೂ ಸಬಲೀಕರಣಗೊಳ್ಳಬೇಕು ಎಂದು ಪ್ರಧಾನಮಂತ್ರಿಯವರು ನಾಗ್ಪುರ ವಿಶ್ವವಿದ್ಯಾಲಯವು ಆಯೋಜಿಸಿರುವ 4 ದಿನಗಳ 108 ನೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (Indian Science Congress) ಅನ್ನು ಉದ್ಘಾಟಿಸಿ ಮಾತನಾಡುವಾಗ ಹೇಳಿದರು.
ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ ಭಾರತದ ಸ್ಥಾನಿಕ ಬೆಳವಣಿಗೆಯನ್ನು ಒತ್ತಿ ಹೇಳಿದ ಪ್ರಧಾನಿ, “ಇಂದು ಭಾರತವು ಸ್ಟಾರ್ಟ್ಅಪ್ಗಳಲ್ಲಿ ಅಗ್ರ 3 ರಾಷ್ಟ್ರಗಳಲ್ಲಿ ಒಂದಾಗಿದೆ. 2015 ರವರೆಗೆ ನಾವು 130 ದೇಶಗಳ ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ 81 ನೇ ಸ್ಥಾನದಲ್ಲಿದ್ದೆವು. ಆದರೆ, 2022 ರಲ್ಲಿ ನಾವು 40 ನೇ ಸ್ಥಾನವನ್ನು ತಲುಪಿದ್ದೇವೆ”. ಭಾರತವನ್ನು ಆತ್ಮನಿರ್ಭರ್ ಮಾಡುವಲ್ಲಿ ವಿಜ್ಞಾನದ ಮಹತ್ವವನ್ನು ಪ್ರತಿಪಾದಿಸಿದ ಮೋದಿ ʻಪ್ರಯೋಗಾಲಯದಿಂದ ಭೂಮಿಗೆ ಹೋದಾಗ ಮಾತ್ರ ವಿಜ್ಞಾನದ ಪ್ರಯತ್ನಗಳು ಫಲ ನೀಡುತ್ತವೆʼ ಎಂದು ಹೇಳಿದರು.
BIG NEWS : ಪಂಜಾಬ್ ಗಡಿಯಲ್ಲಿ ಪಾಕ್ ನುಸುಳುಕೋರನ ಹತ್ಯೆಗೈದ BSF ಪಡೆ
BIG NEWS : ಪಂಜಾಬ್ ಗಡಿಯಲ್ಲಿ ಪಾಕ್ ನುಸುಳುಕೋರನ ಹತ್ಯೆಗೈದ BSF ಪಡೆ