ಶಿವಮೊಗ್ಗ: ಜಿಲ್ಲೆಯಲ್ಲಿ ಮಕ್ಕಳಿಂದಲೇ ಅಪಾಯಕಾರಿ ಕೆಲಸ ಮಾಡಿಸಿ, ಶಾಲಾ ಶಿಕ್ಷಕರು ಎಡವಟ್ಟು ಮಾಡಿರುವಂತ ಘಟನೆ ಬೆಳಕಿಗೆ ಬಂದಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಗ್ರಾಮದ ಉರ್ದು ಸರ್ಕಾರಿ ಶಾಲೆಯ ಮಕ್ಕಳಿಂದ ಶಾಲಾ ಶಿಕ್ಷಕರು ಹುಂಚಗಳ ಮೇಲೆ ನಡೆದು ಕಸಗುಡಿಸೋ ಕೆಲಸಕ್ಕೆ ಇಟ್ಟಿರೋ ವೀಡಿಯೋ ಈಗ ವೈರಲ್ ಆಗಿದೆ.
ಮಂಡಗದ್ದೆಯ ಉರ್ದು ಶಾಲೆಯ ಶಾಲಾ ಮಕ್ಕಳು ಶಾಲೆಯ ಮೇಲ್ಛಾವಣಿಯ ಕಸವನ್ನು ಗುಡಿಸುತ್ತಿರುವಂತ ವೀಡಿಯೋ ದೃಶ್ಯಾವಳಿಯಲ್ಲಿದ್ದು, ಶಾಲಾ ಮಕ್ಕಳು ಮೇಲ್ಛಾವಣಿಯಿಂದ ಕೆಳಗೆ ಬಿದ್ದರೇ ಗತಿ ಏನು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಯ ಉರ್ದು ಶಾಲೆಯಲ್ಲಿ ಶಾಲಾ ಶಿಕ್ಷಕರು ಮಕ್ಕಳಿಂದ ಮಾಡಿಸಿದಂತ ಹೆಂಚುಗಳ ಮೇಲಿನ ಕಸಗುಡಿಸುವ ವೀಡಿಯೋ ವೈರಲ್ ಆಗಿದ್ದು, ಶಾಲಾ ಶಿಕ್ಷಕರ ವಿರುದ್ಧ ಆಕ್ರೋಶ ಹೊರ ಬಿದ್ದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷೀಸಲಾಗಿದೆ.
ಬೆಂಗಳೂರಲ್ಲಿ ಫೆ. 29ರಿಂದ ‘ಸರಸ್ ಮೇಳ’ ಆಯೋಜನೆ: ಮಹಿಳೆಯರ ಉತ್ಪನ್ನಗಳ ಪ್ರದರ್ಶನ, ಮಾರಾಟ
ಬೆಂಗಳೂರು : ಕಾರು ವಿಚಾರವಾಗಿ ಸಹೋದರರ ನಡುವೆ ಗಲಾಟೆ : ಪೆಟ್ರೋಲ್ ಹಾಕಿ ತಮ್ಮನ ಕೊಲೆಗೈದ ಅಣ್ಣ