ಬೆಳ್ತಂಗಡಿ: ನಗರದ ಮಲೆಬೆಟ್ಟು ವನದುರ್ಗಾ ದೇವಸ್ಥಾನದ ಬಳಿ ಗೂಡ್ಸ್ ರಿಕ್ಷಾ ಹಾಗೂ ಶಾಲಾ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವು ಮೂವರ ಸ್ಥಿತಿ ಗಂಭೀರಗೊಂಡ ಘಟನೆ ಬೆಳಕಿಗೆ ಬಂದಿದೆ
ಕೊಯ್ಯೂರಿನಿಂದ ಶಾಲಾ ಬಸ್ ಮಕ್ಕಳನ್ನು ಉಜಿರೆಗೆ ಕರೆದೊಯ್ಯುತ್ತಿದ್ದ ವೇಳೆ ಬೆಳ್ತಂಗಡಿಯಿಂದ ಕೊಯ್ಯುರು ಕಡೆಗೆ ಹೋಗುತ್ತಿದ್ದು, ಗೂಡ್ಸ್ ಆಟೋಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ರಿಕ್ಷಾದಲ್ಲಿದ್ದ ರಝಾಕ್ ಸಾವನ್ನಪ್ಪಿದ್ದು, ಕುವೆಟ್ಟು ಗ್ರಾಮದ ಪಿಲಿಚಾಮುಂಡಿ ನಿವಾಸಿ ಹನೀಫ್, ಪಣಕಚೆ ನಿವಾಸಿ ಮೊಹಮ್ಮದ್ ಚಾಲಕ ಹನೀಫ್ ಗಂಭೀರ ಗಾಯಗೊಂಡಿದ್ದಾರೆ