ನವದೆಹಲಿ : ಇನ್ನೂ ಒಂದು ತಿಂಗಳಲ್ಲಿ ಆಸ್ಪತ್ರೆಯ ಸೇವೆಗಳಲ್ಲಿ ಏಕರೂಪ ದರ ನಿಗದಿ ಮಾಡಿ ಎಂದು ಕೇಂದ್ರಕೆ ಸುಪ್ರೀಂ ಸೂಚಿಸಿದ್ದು, ಒಂದು ವೇಳೆ ಮಾಡದೇ ಹೋದಲ್ಲಿ ನಾವೇ ಖುದ್ದು ಆದೇಶವನ್ನು ಹೋರಾಡಸಿಬೇಕಾಗುತ್ತದೆ ಎಂದು ಕೇಂದ್ರಕ್ಕೆ ಸುಪ್ರೀಂ ಖಡಕ್ ಎಚ್ಚರಿಕೆ ನೀಡಿದೆ.
ಮೆಟ್ರೋ ನಿಲ್ದಾಣದಲ್ಲಿ ‘ರೈತನಿಗೆ’ ಅಪಮಾನ ಪ್ರಕರಣ :ಮಾನವ ಹಕ್ಕುಗಳ ಆಯೋಗದಿಂದ ‘BMRCL’ ಗೆ ನೋಟಿಸ್
ಸರ್ಕಾರೇತರ ಸಂಸ್ಥೆಯೊಂದು, 2012ರ ಕ್ಲಿನಿಕಲ್ ಎಸ್ಟಾಬ್ಲಿಷ್‌ಮೆಂಟ್ ಕಾಯ್ದೆಯ 9ನೇ ವಿಧಿಯ ಅನ್ವಯ ವಿವಿಧ ಚಿಕಿತ್ಸೆಗಳಿಗೆ ಸೂಕ್ತ ದರ ನಿಗದಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಕೋರಿತ್ತು.ಇದರ ವಿಚಾರಣೆ ನಡೆಸಿ ಉದಾಹರಣೆ ಸಮೇತ ಆದೇಶ ನೀಡಿದ ಕೋರ್ಟ್,ಕಣ್ಣಿನ ಶಸ್ತ್ರಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಯಲ್ಲಿ 10 ಸಾವಿರ ರು.ವೆಚ್ಚ ತಗುಲಿದರೆ, ಖಾಸಗಿ ಆಸ್ಪತ್ರೆಗಳಲ್ಲಿ 30 ಸಾವಿರ ರು. ನಿಂದ 1.40 ಲಕ್ಷ ರು.ವರೆಗೂ ದರ ವಿಧಿಸಲಾಗುತ್ತಿದೆ.
BREAKING: ಟಿಎಂಸಿ ನಾಯಕ ಶಹಜಹಾನ್ ಶೇಖ್ ಬಂಧಿಸಿದ ಪೋಲಿಸರು | ‘Sandeshkhali Row’
ಒಂದೇ ರೀತಿಯ ಸೇವೆಗೆ ಹೀಗೆ ದರ ತಾರತಮ್ಯ ಇದ್ದರೂ, ಇದನ್ನು ಸರ್ಕಾರ ತಡೆದಿಲ್ಲ, ಈ ತಾರತಮ್ಯ ತಡೆಯಲು 14 ವರ್ಷಗಳ ಹಿಂದಿನ ಕಾಯ್ದೆ ಜಾರಿಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕಿಡಿಕಾರಿತು.ಆದರೆ ಈ ಅರ್ಜಿ ವಿಚಾರಣೆ ವೇಳೆ ತನ್ನ ಅಸಹಾಯಕತೆ ಪ್ರದರ್ಶಿಸಿದ್ದ ಕೇಂದ್ರ ಸರ್ಕಾರ, ಈ ಕುರಿತು ಹಲವು ಬಾರಿ ರಾಜ್ಯಗಳಿಗೆ ಮನವಿ ಮಾಡಿಕೊಂಡರೂ ಅವುಗಳು ಸೂಕ್ತವಾಗಿ ಸ್ಪಂದಿಸಿಲ್ಲ ಎಂದಿತ್ತು. ಈ ವೇಳೆ ಅರ್ಜಿದಾರರು, ಕೇಂದ್ರ ಸರ್ಕಾರ ತನ್ನ ವಿಶೇಷ ಅಧಿಕಾರ ಬಳಸಿ ದರ ನಿಗದಿ ಮಾಡಬಹುದು ಎಂದಿತ್ತು.
ಇಂದಿನಿಂದ ಮಾ.7ರವರೆಗೆ 15ನೇ ಬೆಂಗಳೂರು ‘ಅಂತರಾಷ್ಟ್ರೀಯ ಚಲನಚಿತ್ರೋತ್ಸವ’ : ಸಿಎಂ ಸಿದ್ದರಾಮಯ್ಯ ಚಾಲನೆ
ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಪ್ರೀಂಕೋರ್ಟ್, ನಾಗರಿಕರು ಆರೋಗ್ಯ ಸೇವೆಗಳ ಮೂಲಭೂತ ಹಕ್ಕು ಹೊಂದಿದ್ದಾರೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ತನ್ನ ಹೊಣೆಯಿಂದ ತಪ್ಪಿಸಿಕೊಳ್ಳುವಂತಿಲ್ಲ. ಹೀಗಾಗಿ ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳು ಶೀಘ್ರವೇ ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳ ಸಭೆ ಕರೆಯಬೇಕು. ಅಲ್ಲಿ ಏಕರೂಪ ದರ ನಿಗದಿ ಮಾಡಿ ಅದನ್ನು ಎಲ್ಲಾ ಆಸ್ಪತ್ರೆಗಳು ಕಡ್ಡಾಯವಾಗಿ ಪ್ರದರ್ಶಿಸುವಂತೆ ನೋಡಿಕೊಳ್ಳಬೇಕು. ಈ ಪ್ರಕ್ರಿಯೆ ಒಂದು ತಿಂಗಳಲ್ಲಿ ಮುಗಿಯಬೇಕು ಎಂದಿದೆ.