ಬೆಂಗಳೂರು : ಕಾಂಗ್ರೆಸ್ ಬೆಂಬಲಿಸುತ್ತಿದ್ದ ಎಸ್ಸಿ ಎಸ್ಟಿ ಸಮಾಜಗಳಿಗೆ ಇದೀಗ ಬೇಸರ ಉಂಟಾಗಿದೆ.ಎಸ್ಸಿ ಎಸ್ಟಿ ಸಮುದಾಯಗಳು ಭ್ರಮ ನಿರಸನಗೊಂಡಿವೆ. ದೀನ ದಲಿತರಿಗೆ ರಕ್ಷಣೆ ಎಲ್ಲಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಆಗಿದ್ದಾಗ ಮೀಸಲಾತಿ ಹೆಚ್ಚು ಮಾಡಿದೆ ಆಗ ಅದನ್ನು ರಾಜಕೀಯ ಗಿಮಿಕ್ ಎಂದು ಹೇಳಿದರು ಗ್ಯಾರಂಟಿಗಳಿಗೆ ಎಸ್ಸಿ ಎಸ್ಟಿ ಹಣವೇ ಬೇಕಿತ್ತಾ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ಲೋಕಸಭಾ ಚುನಾವಣೆ ಕುರಿತಾಗಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಬರುತ್ತದೆ. ದಕ್ಷಿಣ ಭಾರತದಲ್ಲಿ ಆಶ್ಚರ್ಯಕರ ಫಲಿತಾಂಶ ಬರುತ್ತದೆ. ಕರ್ನಾಟಕದಲ್ಲಿ 25 ಕ್ಕಿಂತಲೂ ಹೆಚ್ಚು ಸ್ಥಾನಗಳು ಬರುತ್ತವೆ ಎಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.