ಬೆಂಗಳೂರು : ರಾಜ್ಯದಲ್ಲಿ ಪರಿಶಿಷ್ಟ ಜಾತಿ (Schedule Caste) ಮತ್ತು ಪರಿಶಿಷ್ಟ ಪಂಗಡಗಳ (Schedule Tribes) ಮೀಸಲಾತಿ (Reservation) ಹೆಚ್ಚಳಕ್ಕೆ ಇಂದು ವಿಶೇಷ ಸಂಪುಟದಲ್ಲಿ ಒಪ್ಪಿಗೆ ಸೂಚಿಸಿದೆ. ಅಧಿವೇಶನದಲ್ಲಿ ಮಸೂದೆ ಮಂಡನೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ನೇತೃತ್ವದ ಸಂಪುಟ ಶನಿವಾರ ಅನುಮೋದನೆ ನೀಡಿದೆ.
ಈ ಹಿನ್ನೆಲೆ ಸರ್ಕಾರದ ನಿರ್ಧಾರವನ್ನುವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಸ್ವಾಗತಿಸಿದ್ದಾರೆ. ಇಂದು ಬಸವರಾಜ ಬೊಮ್ಮಾಯಿ ಭೇಟಿಯಾಗಿ ಧನ್ಯವಾದ ಸಲ್ಲಿಸಿದ್ದಾರೆ. ಹಲವು ದಿನಗಳಿಂದ ಸರ್ಕಾರಕ್ಕೆ ಭೇಟಿ ಇಡಲಾಗಿತ್ತು. ಇದೀಗ ರಾಜ್ಯದಲ್ಲೆಡೆ ಸಂಭ್ರಮಾಚರಣೆ ನಡೆಸಲಾಗುತ್ತಿದೆ.
SC-ST ಮೀಸಲಾತಿ ಹೆಚ್ಚಳಮಾಡಿದ ವಿಚಾರವಾಗಿ ವಾಲ್ಮೀಕಿ ಶ್ರೀಗಳು ಮಾತನಾಡಿ ನಾಳೆ ಸಂಭ್ರಮಚರಣೆಗೆ ನಿರ್ಧಾರ ಮಾಡಲಾಗಿದೆ. ನಾಳೆ ಸಿಎಂ ಬಿಜೆಪಿ ಸರ್ಕಾರಕ್ಕೆ ವಾಲ್ಮೀಕಿ ಜಯಂತಿ, ವಿಜಯೋತ್ಸವಕ್ಕೆ ಕರೆ ನೀಡಲಾಗಿದೆ .150 ಸಮುದಾಯದ ಮುಖಂಡರಿಂದ ಸಿಎಂಗೆ ಕೃತಜ್ಞತೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.