ನವದೆಹಲಿ : ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯನ್ನು ಅಪರಹರಿಸಿದ ಪ್ರಕರಣದಲ್ಲಿ ಸುಪ್ರಿಂಕೋರ್ಟ್ ಭವಾನಿ ರೇವಣ್ಣ ಅವರಿಗೆ ನೋಟಿಸ್ ಜಾರಿ ಮಾಡಿದೆ.
ನ್ಯಾ. ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಪೀಠದ ವಿಚಾರಣೆ ವೇಳೆ ಹಿರಿಯ ವಕೀಲ ಸಿಬಲ್, ಇದು ಅತ್ಯಂತ ದುರದೃಷ್ಟಕರ. ವಿಚಾರಣಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಏಕೆ ತಿರಸ್ಕರಿಸಿತು ಎಂಬುದನ್ನು ಹೈಕೋರ್ಟ್ ಪರಿಗಣಿಸಲಿಲ್ಲ ಎಂದು ವಾದಿಸಿದರು. ಅದಕ್ಕೆ ನ್ಯಾಯಾಧೀಶರು, ಸಿಬಲ್ ನಾವು ರಾಜಕೀಯವನ್ನು ಬಿಟ್ಟುಬಿಡೋಣ ಎಂದು ತಿಳಿಸಿದರು. ಸಿಬಲ್ ವಾದಿಸಿ, ನಮಗೂ ರಾಜಕೀಯ ಬೇಡ.ಆದರೆ ಹೈಕೋರ್ಟ್ ಆದೇಶ ನೋಡೋಣ ಎಂದರು.
ಮಗನ ಅಪರಾಧದಲ್ಲಿ ತಾಯಿಯ ಪಾತ್ರವಿಲ್ಲ. ಆದರೆ ಸಂತ್ರಸ್ತೆಯ ಅಪಹರಣದ ಬಗೆಗಿನ ಪ್ರಕರಣ ಇದು. ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಲು ನಿರ್ದೇಶನ ನೀಡಿದ್ದರು. ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ ಹೇಳಿಕೆಯಲ್ಲಿ ದಾಖಲಾಗಿದೆ. ಆಕೆ ಆರೋಪದಿಂದ ಮುಕ್ತ ಎನ್ನುವಂತಿಲ್ಲ, ವಿಚಾರಣೆ ಎದುರಿಸಬೇಕು.
ಆಕೆಯನ್ನ ಬಂಧನದಿಂದ ರಕ್ಷಿಸಲು ಹೈಕೋರ್ಟ್ ಕಾರಣ ನೀಡಿದೆ. ವಿಚಾರಣಾ ನ್ಯಾಯಾಲಯವೂ ನಿರೀಕ್ಷಣಾ ಜಾಮೀನು ತಿರಸ್ಕರಸಿದೆ. ಆದರೆ, ಜಾಮೀನು ಏಕೆ ತಿರಸ್ಕಾರವಾಯಿತೆಂದು ಹೈಕೋರ್ಟ್ ಪರಿಗಣಿಸಿಲ್ಲ ಎಂದು ಅಪಹರಣದ ಕುರಿತು ಪ್ರಕರಣವಿದು ಅಂತ ಕಪಿಲ್ ಸಿಬಲ್ ಮನವರಿಕೆ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಆರೋಪಗಳು ಗಂಭೀರವಾಗಿವೆ. ಆದರೆ ಈ ರೀತಿಯ ಆರೋಪಗಳ ಸಂದರ್ಭದಲ್ಲಿ ತನ್ನ ಮಗನ ಅಪರಾಧಕ್ಕಾಗಿ ತಾಯಿಯ ಪಾತ್ರವೇನು ಎಂದು ಪ್ರಶ್ನಿಸಿದರು. ಸಿಬಲ್ ಮಾತನಾಡಿ, ಇಲ್ಲ ಇಲ್ಲ.. ಮಗನ ಅಪರಾಧದಲ್ಲಿ ತಾಯಿಯ ಪಾತ್ರವಿಲ್ಲ. ಆದರೆ ಸಂತ್ರಸ್ತೆಯ ಅಪಹರಣದ ಬಗೆಗಿನ ಪ್ರಕರಣ ಇದು ಎಂದು ವಾದಿಸಿದರು. ವಾದ ಆಲಿಸಿದ ನ್ಯಾಯಾಲಯವು ಭವಾನಿಗೆ ನೋಟಿಸ್ ನೀಡಿದೆ.