ಬೆಂಗಳೂರು : ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳನ್ನು ಇತ್ಯರ್ಥಪಡಿಸುವ ಅಧಿಕಾರ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ಇಲ್ಲ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ.
BREAKING : ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ : ನಿಯಂತ್ರಣ ತಪ್ಪಿ ಪ್ಲೈಓವರ್‌ನಿಂದ ಬಿದ್ದು ಚಾಲಕ ಸಾವು
ಪರಿಶಿಷ್ಟ ಜಾತಿ ನೌಕರನಿಗೆ ಉನ್ನತ ಹುದ್ದೆ ನೀಡುವಂತೆ ಆಯೋಗ ಹೊರಡಿಸಿದ ಆದೇಶವನ್ನು ಇದೀಗ ಹೈಕೋರ್ಟ್ ರದ್ದುಪಡಿಸಿದೆ. ಪರಿಶಿಷ್ಟ ಜಾತಿ ನೌಕರ ವಿ. ಶ್ರೀನಿವಾಸ್ ಜೇಷ್ಠತೆ ಹಾಗೂ ವಿದ್ಯಾರ್ಹತೆಗೆ ಅನುಗುಣವಾಗಿ ಉನ್ನತ ಹುದ್ದೆ ನೀಡಿಲ್ಲವೆಂದು ಆಕ್ಷೇಪಿಸಿ ಪರಿಶಿಷ್ಟ ಜಾತಿ ರಾಷ್ಟ್ರೀಯ ಆಯೋಗಕ್ಕೆ ದೂರು ನೀಡಿದ್ದು, ಆ ದೂರು ಆಧರಿಸಿ ಆತನಿಗೆ ಉನ್ನತ ಹುದ್ದೆ ನೀಡುವಂತೆ ಆಯೋಗ ಹೊರಡಿಸಿದ ಆದೇಶ ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.
‘ಪ್ರಾದೇಶಿಕ ಅಸಮತೋಲನ ನಿವಾರಣಾ ಆಯೋಗ’ದ ಅಧ್ಯಕ್ಷರನ್ನಾಗಿ ‘ಆರ್ಥಿಕ ತಜ್ಞ ಪ್ರೊ.ಗೋವಿಂದ ರಾವ್’ ನೇಮಕ
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸಚ್ಚಿನ್ ಶಂಕರ್ ಮಗ್ಗಮ್ ಅವರಿದ್ದ ಪೀಠ ರಾಜ್ಯ ಸರ್ಕಾರದ ಮನವಿಯನ್ನು ಪುರಸ್ಕರಿಸಿ ರಾಷ್ಟ್ರೀಯ ಆಯೋಗದ ಆದೇಶ ರದ್ದುಗೊಳಿಸಿದೆ. ಸೇವಾ ವಿಷಯಗಳಿಗೆ ಸಂಬಂಧಿಸಿದ ಜೇಷ್ಠತೆ ಹಾಗೂ ಬಡ್ತಿ ಕುರಿತಾಗಿ ದಾಖಲಾದ ದೂರಗಳನ್ನು ಇತ್ಯರ್ಥಪಡಿಸುವ ಹಾಗೂ ನಿರ್ಣಯಿಸುವ ಅಧಿಕಾರ ಆಯೋಗಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ.
ಲೋಕಸಭಾ ಚುನಾವಣೆ 2024: ರಾಜ್ಯ ಮತ್ತು ಕ್ಷೇತ್ರವಾರು ಚುನಾವಣಾ ದಿನಾಂಕಗಳ ಸಂಪೂರ್ಣ ಪಟ್ಟಿ ಬಿಡುಗಡೆ
ಇಂತಹ ಪ್ರಕರಣಗಳು ಕಾನೂನಿನ ವ್ಯಾಪ್ತಿಯೊಳಗೆ ಬರುತ್ತವೆ ಮತ್ತು ಸೇವೆ-ಸಂಬಂಧಿತ ವಿವಾದಗಳನ್ನು ಇತ್ಯರ್ಥಪಡಿಸುವ ಸಾಮರ್ಥ್ಯವಿರುವ ಆಡಳಿತಾತ್ಮಕ ನ್ಯಾಯಮಂಡಳಿಗಳಂತಹ ವಿಶೇಷ ಸಂಸ್ಥೆಗಳ ನಿರ್ಣಯಕ್ಕೆ ಒಳಪಟ್ಟಿರುತ್ತವೆ ಎಂದಿದೆ. ಜತೆಗೆ ಆಯೋಗದ ನಿರ್ಧಾರವು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳಿಗೆ ವಿರುದ್ಧವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.