ನವದೆಹಲಿ: ಮದ್ರಾಸ್ ಮತ್ತು ತೆಲಂಗಾಣ ಹೈಕೋರ್ಟ್ಗಳ ಐದು ಹೆಚ್ಚುವರಿ ನ್ಯಾಯಾಧೀಶರನ್ನ ಖಾಯಂ ನ್ಯಾಯಾಧೀಶರನ್ನಾಗಿ ನೇಮಿಸುವ ಪ್ರಸ್ತಾಪಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಬುಧವಾರ ಅನುಮೋದನೆ ನೀಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಕೊಲಿಜಿಯಂ ಬುಧವಾರ ಸಭೆ ನಡೆಸಿತು.
“ಫೆಬ್ರವರಿ 5, 2025ರಂದು ನಡೆದ ಸುಪ್ರೀಂ ಕೋರ್ಟ್ ಕೊಲಿಜಿಯಂ ಸಭೆಯಲ್ಲಿ ಮದ್ರಾಸ್ ಹೈಕೋರ್ಟ್ನಲ್ಲಿ ಈ ಕೆಳಗಿನ ಹೆಚ್ಚುವರಿ ನ್ಯಾಯಾಧೀಶರನ್ನ ಖಾಯಂ ನ್ಯಾಯಾಧೀಶರನ್ನಾಗಿ ನೇಮಿಸುವ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಗಿದೆ – ನ್ಯಾಯಮೂರ್ತಿ ವೆಂಕಟಾಚಾರಿ ಲಕ್ಷ್ಮಿನಾರಾಯಣನ್ ಮತ್ತು ನ್ಯಾಯಮೂರ್ತಿ ಪೆರಿಯಸಾಮಿ ವಡಮಲೈ” ಎಂದು ಕೊಲಿಜಿಯಂ ಹೇಳಿಕೆಯಲ್ಲಿ ತಿಳಿಸಿದೆ.
ನ್ಯಾಯಮೂರ್ತಿ ಲಕ್ಷ್ಮಿ ನಾರಾಯಣ ಅಲಿಶೆಟ್ಟಿ, ನ್ಯಾಯಮೂರ್ತಿ ಅನಿಲ್ ಕುಮಾರ್ ಜುಕಂತಿ ಮತ್ತು ನ್ಯಾಯಮೂರ್ತಿ ಸುಜನಾ ಕಲಾಸಿಕಂ ಅವರನ್ನು ತೆಲಂಗಾಣ ಹೈಕೋರ್ಟ್ನಲ್ಲಿ ಖಾಯಂ ನ್ಯಾಯಾಧೀಶರನ್ನಾಗಿ ನೇಮಿಸುವ ಪ್ರಸ್ತಾಪವನ್ನು ಕೊಲಿಜಿಯಂ ಅನುಮೋದಿಸಿದೆ ಎಂದು ಮತ್ತೊಂದು ಹೇಳಿಕೆ ತಿಳಿಸಿದೆ.
ದೇಶೀಯವಾಗಿ ಅಭಿವೃದ್ಧಿಪಡಿಸಲಾದ ರೇಡಿಯೋ ಕಾಲರ್ ಲೋಕಾರ್ಪಣೆಗೊಳಿಸಿದ ಸಚಿವ ಈಶ್ವರ್ ಖಂಡ್ರೆ
ಸಾರ್ವಜನಿಕರಿಗೆ ಬಿಗ್ ಶಾಕ್ ; ‘ATM’ನಿಂದ ಹಣ ‘ವಿತ್ ಡ್ರಾ’ ಈಗ ಮತ್ತಷ್ಟು ದುಬಾರಿ, ‘ಶುಲ್ಕ’ ಹೆಚ್ಚಳ