ಬೆಂಗಳೂರು : ರಾಜ್ಯದಲ್ಲಿ OPS ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಶೀಘ್ರದಲ್ಲಿ OPS ಜಾರಿ ಮಾಡಿಯೇ ತೀರುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೇ ಸರ್ಕಾರಿ ನೌಕರರ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರು ಡಿಕೆ, ಡಿಕೆ ಎಂದು ಘೋಷಣೆ ಕೂಗಿದಾಗ ನನ್ನ ನೇತೃತ್ವದಲ್ಲಿ ಚುನಾವಣೆ ನಡೆದಾಗ ಈ ಪದ ಹೇಳಿ ಎಂದು ತಾವು ಮುಖ್ಯಮಂತ್ರಿ ಆಗುವ ಕನಸನ್ನು ಪರೋಕ್ಷವಾಗಿ ಹೇಳಿದ್ದಾರೆ ಎನ್ನಲಾಗಿದೆ.
ಎನ್‌ಪಿಎಸ್ ಒಪಿಎಸ್ ಬಗ್ಗೆ ಡಿಕೆ ಶಿವಕುಮಾರ್ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸರ್ಕಾರಿ ನೌಕರರ ಸಮಾವೇಶದಲ್ಲಿ ಮಾತನಾಡಿ, ಶೀಘ್ರದಲ್ಲಿ OPS ಜಾರಿ ಮಾಡುತ್ತೇವೆ ಎಂದಾಗ ಸರಕಾರಿ ನೌಕರರು ಫುಲ್ ಖುಷ್ ಆಗಿದ್ದಾರೆ. ಈ ವೇಳೆ ಡಿಕೆ ಡಿಕೆ ಅಂತ ಸರ್ಕಾರಿ ನೌಕರರು ಜೋರಾಗಿ ಕೂಗಿದ್ದಾರೆ.
ನೌಕರರ ಮಾತಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ನಾಯಕತ್ವದ ಬಾಣ ಬಿಟ್ಟಿದ್ದು, ಮುಂದೇ ನಾನು ಚುನಾವಣೆಗೆ ನಿಂತಾಗ ಡಿಕೆ ಅಂತ ಪದ ಬಳಸಿ, ನನ್ನ ನೇತೃತ್ವದಲ್ಲಿ ಚುನಾವಣೆ ನಡೆದಾಗ ಈ ಪದವನ್ನು ಹೇಳಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಹೊಸ ದಾಳ ಉರುಳಿಸಿದ್ದಾರೆ. ನಾನು ಬಿಟ್ಟು ಹೋಗಲ್ಲ ಇನ್ನು 8 ರಿಂದ 10 ವರ್ಷ ಗಟ್ಟಿಯಾಗಿರುತ್ತೇನೆ ಎಂದು ತಿಳಿಸಿದ್ದಾರೆ.