ಬೆಂಗಳೂರು: ಸಾವಿತ್ರಿಬಾಯಿ ಫುಲೆ ಪಠ್ಯ ಕೈ ಬಿಡಲಾಗಿದೆ ಎಂದು ಕಾಂಗ್ರೆಸ್ ಆರೋಪಸಿದ್ದರು. ಈ ಕುರಿತು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಟ್ವೀಟ್ ಗೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿರುಗೇಟು ಕೊಟ್ಟಿದ್ದಾರೆ. ಪಠ್ಯವನ್ನು ಶೇರ್ ಮಾಡಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
BIGG BREAKING NEWS: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆ; ಕಳೆದ 24 ಗಂಟೆಗಳಲ್ಲಿ 5,554 ಹೊಸ ಪ್ರಕರಣ ಪತ್ತೆ
ಏಳನೇ ತರಗತಿ ಕನ್ನಡ ಪಠ್ಯ ಪುಸ್ತಕದಲ್ಲಿ ಸಾವಿತ್ರಿಬಾಯಿ ಫುಲೆ ಪಠ್ಯ ಇದೆ. ನಾವು ಅದನ್ನು ಕೈ ಬಿಟ್ಟಿಲ್ಲ,ಸುಳ್ಳು ಸುದ್ದಿ ಹಬ್ಬಿಸುವುದು ಕಾಂಗ್ರೆಸ್ ಕಾಯಕವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಹಿಳೆಯರಿಗೆ, ಶೋಷಿತರಿಗೆ ಅಕ್ಷರದ ದಾಸೋಹ ನಡೆಸಿದ, "ಅಕ್ಷರದವ್ವ" ಎಂದೇ ಖ್ಯಾತರಾದ ಸಾವಿತ್ರಿ ಬಾ ಪುಲೆ ಅವರ ಪಠ್ಯವನ್ನು ಕೈಬಿಟ್ಟ ಸರ್ಕಾರ ಪಠ್ಯಪುಸ್ತಕಗಳಲ್ಲಿ ಬುಲ್ ಬುಲ್ ಹಕ್ಕಿ ಹಾರಿಸುತ್ತಿದೆ!
ಶಿಕ್ಷಣ ವಿರೋಧಿಯಾಗಿ ವರ್ತಿಸಿದ್ದು,
ಮಹನೀಯರಿಗೆ ಅವಮಾನಿಸಿದ್ದು ನಿಮ್ಮ ಒಂದು ವರ್ಷದ ಸಾಧನೆಯೇ @BSBommai ಅವರೇ?#BJPBrashtotsava pic.twitter.com/nzXI5WbYvz— Karnataka Congress (@INCKarnataka) September 9, 2022
ಮಹಿಳೆಯರಿಗೆ, ಶೋಷಿತರಿಗೆ ಅಕ್ಷರದ ದಾಸೋಹ ನಡೆಸಿದ, “ಅಕ್ಷರದವ್ವ” ಎಂದೇ ಖ್ಯಾತರಾದ ಸಾವಿತ್ರಿಬಾಯಿ ಫುಲೆ ಅವರ ಪಠ್ಯವನ್ನು ಕೈಬಿಟ್ಟ ಸರ್ಕಾರ ಪಠ್ಯಪುಸ್ತಕಗಳಲ್ಲಿ ಬುಲ್ ಬುಲ್ ಹಕ್ಕಿ ಹಾರಿಸುತ್ತಿದೆ! ಶಿಕ್ಷಣ ವಿರೋಧಿಯಾಗಿ ವರ್ತಿಸಿದ್ದು, ಮಹನೀಯರಿಗೆ ಅವಮಾನಿಸಿದ್ದು ನಿಮ್ಮ ಒಂದು ವರ್ಷದ ಸಾಧನೆಯೇ ಬೊಮ್ಮಾಯಿ ಅವರೇ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಕಾಂಗ್ರೆಸ್ಸಿಗರು ವಾಗ್ದಾಳಿ ನಡೆಸಿದ್ದರು.
ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಮತ್ತು ಅದೇ ಸತ್ಯ ಎಂದು ಜನರನ್ನು ನಂಬಿಸಲು ಯತ್ನಿಸುವುದು ಕಾಂಗ್ರೆಸ್ಸಿಗರ ದಿನಚರಿಯಾಗಿದೆ !
ಸತ್ಯ ಕಣ್ಣ ಮುಂದಿರುವಾಗ ನಿಮ್ಮ ಹಸಿ ಸುಳ್ಳುಗಳನ್ನು ಜನರು ನಂಬಲು ಸಾಧ್ಯವಿಲ್ಲ.@BSBommai@BJP4Karnataka https://t.co/9HAHPkWXZc pic.twitter.com/kemPqiLhC4
— B.C Nagesh (@BCNagesh_bjp) September 9, 2022
ಇದಕ್ಕೆ ತಿರುಗೇಟು ನೀಡಿರುವ ಬಿ.ಸಿ ನಾಗೇಶ್, ಸಾವಿತ್ರಿಬಾಯಿ ಫುಲೆ ಪಠ್ಯ ಕೈ ಬಿಟ್ಟಿಲ್ಲ. ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಮತ್ತು ಅದೇ ಸತ್ಯ ಎಂದು ಜನರನ್ನು ನಂಬಿಸಲು ಯತ್ನಿಸುವುದು ಕಾಂಗ್ರೆಸ್ಸಿಗರ ದಿನಚರಿಯಾಗಿದೆ ! ಸತ್ಯ ಕಣ್ಣ ಮುಂದಿರುವಾಗ ನಿಮ್ಮ ಹಸಿ ಸುಳ್ಳುಗಳನ್ನು ಜನರು ನಂಬಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.