ಶಿವಮೊಗ್ಗ : ಜಿಲ್ಲೆಯ ಸಿಟಿ ಸೆಂಟರ್ ಮಾಲ್ ಬಳಿ 75ನೇ ಸ್ವಾತಂತ್ರ ಆಚರಣೆ ಹಿನ್ನೆಲೆ ಹೋರಾಟಗಾರರ ಸಾವರ್ಕರ್ ಚಿತ್ರವನ್ನು ಹಾಕಿದ ವಿಚಾರವಾಗಿ SDPI ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬೆಳಕಿಗೆ ಬಂದಿದೆ.
ಸಿಟಿ ಸೆಂಟರ್ ಮಾಲ್ನಲ್ಲಿ ಎದುರು ಸ್ವಾತಂತ್ರ ಹೋರಾಟಗಾರರ ಸಾವರ್ಕರ್ ಭಾವಚಿತ್ರ ಹಾಕಿದ್ದರು. ಇದನ್ನು ಗಮನಿಸಿದ ಎಸ್ಡಿಪಿಐ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಕೆಲ ಸಮಯಗಳ ವರೆಗೆ ಮಾಲ್ನಲ್ಲಿ ಭಾರೀ ಗೊಂದಲ ವಾತಾವರಣ ನಿರ್ಮಾಣವಾಯಿತು.
ಸಾವರ್ಕರ್ ಸ್ವಾತಂತ್ರ ಹೋರಾಟಗಾರರೇ ಅಲ್ಲ ಭಾವಚಿತ್ರ ಯಾಕೆ ಹಾಕಿದ್ದೀರಿ? ಬ್ರಿಟೀಷರಿಗೆ ಕಮಾಷಣಾ ಪತ್ರ ಬರೆದುಕೊಟ್ಟು ಬಂದ ಸಾವರ್ಕರ್ ಹೋರಾಟಗಾರರನಾಗಲು ಸಾಧ್ಯ ಎಂದು ಆಕ್ಷೇಪಿಸಿದರು