ಬೆಂಗಳೂರು : ಚುನಾವಣೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸೋಲಿಗೆ ಸಾವರ್ಕರ್ ಕಾರಣ. ಸಾವರ್ಕರ್ ಕಾರಣವೆಂದು ಸಾಬೀತುಪಡಿಸುವ ದಾಖಲೆಯನ್ನು ಸದನದಲ್ಲಿ ಹಾಜರುಪಡಿಸಿದರೆ ರಾಜೀನಾಮೆಯ ಸವಾಲು ಹಾಕಿದ್ದಾರೆ. ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷದ ಸದಸ್ಯರು ಸವಾಲು ಹಾಕಿದ್ದಾರೆ. ಈ ಕುರಿತು ದಾಖಲೆ ತೋರಿಸಿದ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರೇ ಯಾವಾಗ ರಾಜೀನಾಮೆ ನೀಡುತ್ತಿರಿ? ಎಂದು ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ಹಂಚಿಕೊಂಡಿದ್ದು, 1952 ಜನವರಿ 18ರಂದು ಅಂಬೇಡ್ಕರ್ ಪರಿಚಯಸ್ಥರಿಗೆ ಪತ್ರ ಬರೆದು ಚುನಾವಣೆಯಲ್ಲಿ ತಮ್ಮ ಸೋಲಿಗೆ ಸಾವರ್ಕರ್ ಪಾತ್ರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾವರ್ಕರ್ ಹೇಗೆ ಪಾತ್ರ ವಹಿಸಿದ್ದಾರೆಂದು ಅಂಬೇಡ್ಕರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ತಮ್ಮ ಸೋಲಿಗೆ ಕಾರಣವೆಂದು ಭಾವಿಸಿದ ಅಂಶಗಳನ್ನು ಅಂಬೇಡ್ಕರ್ ಅವರು ಪತ್ರದಲ್ಲಿ ವಿವರಿಸಿದ್ದರು.
ಸಾವರ್ಕರ್ ಪ್ರಭಾವ ಮತ್ತು ರಾಜಕೀಯ ತಂತ್ರವನ್ನು ಪತ್ರದಲ್ಲಿ ವಿವರಿಸಿದ್ದರು. ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರು ಬರೆದಿದ್ದ ಆ ಪತ್ರ ಇಲ್ಲಿದೆ. ರಾಜ ಬಿಜೆಪಿ ನಾಯಕರೇ ಯಾವಾಗ ರಾಜೀನಾಮೆ ನೀಡುತ್ತೀರಿ? ಎಂದು ಟ್ವೀಟ್ ಮೂಲಕ ಬಿಜೆಪಿ ನಾಯಕರಿಗೆ ಸಚಿವ ಪ್ರಿಯಾಂಕ ಖರ್ಗೆ ಪ್ರಶ್ನಿಸಿದ್ದಾರೆ.
BJP MLAs declared on the floor of the house that they would resign if we present a document proving that Savarkar had acted against Babasaheb Ambedkar during his elections.
On January 18, 1952, Babasaheb Ambedkar wrote to his acquaintance, expressing his views on how Vinayak… pic.twitter.com/zCDgw8FC5I
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) March 17, 2025