ಧಾರವಾಡ: ನಗರದಲ್ಲಿ ಸಾವರ್ಕರ್ ಫೋಟೋ ಸುಟ್ಟ ಪ್ರಕರಣ ಸಂಬಂಧಿಸಿ ಕಾಂಗ್ರೆಸ್ನ 12 ಕಾರ್ಯಕರ್ತರ FIR ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
Breaking news: ಹಿಮಾಚಲ ಪ್ರದೇಶದಲ್ಲಿ ಭೂಕುಸಿತ: ಪಂಚಾಯಿತಿ ಅಧ್ಯಕ್ಷನ ಮನೆ ನೆಲಸಮ, 7 ಮಂದಿ ದುರ್ಮರಣ
ನಿನ್ನೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಕಾಂಗ್ರೆಸ್ ಪ್ರತಿಭಟನೆಯಲ್ಲಿ ವೀರ್ ಸಾವರ್ಕರ್ ಅವರ ಭಾವಚಿತ್ರಕ್ಕೆ ಮೊಟ್ಟೆ ಒಡೆದು, ಬಳಿಕ ಕಾಲಿನಲ್ಲಿ ಭಾವಚಿತ್ರ ತುಳಿದು ಅವಮಾನ ಮಾಡಿದ್ದಾರೆ.
ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕೃತಿ ದಹನದ ಮಾಡಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೇಳೆ ಕಾರ್ಯಕರ್ತರು ಏಕಾಏಕಿ ಸಾವರ್ಕರ್ ಭಾವಚಿತ್ರ ತಂದಿದ್ದಾರೆ. ಕಾರ್ಯಕರ್ತರು ಪೂರ್ವ ನಿಯೋಜಿತವಾಗಿ ಐದಾರು ಭಾವಚಿತ್ರ ತಂದಿದ್ದರು. ಪೊಲೀಸ್ ಬಂದೋಬಸ್ತ್ ಮಧ್ಯೆಯೇ ಸಾವರ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಲಾಗಿದೆ.
Breaking news: ಹಿಮಾಚಲ ಪ್ರದೇಶದಲ್ಲಿ ಭೂಕುಸಿತ: ಪಂಚಾಯಿತಿ ಅಧ್ಯಕ್ಷನ ಮನೆ ನೆಲಸಮ, 7 ಮಂದಿ ದುರ್ಮರಣ
ಗ್ರೆಸ್ ಕಾರ್ಯಕರ್ತರಿಂದ ವೀರ್ ಸಾವರ್ಕರ್ ಫೋಟೋ ಸುಟ್ಟ ಹಿನ್ನೆಲೆ ಭಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ಧಾರವಾಡದ ಉಪ ನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡಿದ್ದಾರೆ. ಸಾವರ್ಕರ್ ಫೋಟೋ ಸುಟ್ಟವರನ್ನು ಬಂಧಿಸುವಂತೆ ಧಾರವಾಡ-ಬೆಳಗಾವಿ ರಸ್ತೆ ತಡೆದು ಬಿಜೆಪಿ ಮತ್ತು ಹಿಂದೂಪರ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಭಜರಂಗದಳದ ಮುಖಂಡ ಶಿವಾನಂದ ಸತ್ತಿಗೇರಿ ಧಾರವಾಡ ಉಪಠಾಣೆಗೆ ದೂರು ನೀಡಿದ್ದರು. ಇಂದು ಧಾರವಾಡ ಉಪಠಾಣೆಯಲ್ಲಿ ಕಾಂಗ್ರೆಸ್ನ 12 ಕಾರ್ಯಕರ್ತರ ಮೇಲೆ FIR ದಾಖಲಿಸಲಾಗಿದೆ
Breaking news: ಹಿಮಾಚಲ ಪ್ರದೇಶದಲ್ಲಿ ಭೂಕುಸಿತ: ಪಂಚಾಯಿತಿ ಅಧ್ಯಕ್ಷನ ಮನೆ ನೆಲಸಮ, 7 ಮಂದಿ ದುರ್ಮರಣ