ಬೆಂಗಳೂರು: ರಾಜ್ಯದಲ್ಲಿ ಸಾವರ್ಕರ್ ವರ್ಸಸ್ ಟಿಪ್ಪು ವಿವಾದ ಭುಗಿಲೆದ್ದಿದೆ. ಈಗಾಗಲೇ ರಾಜ್ಯದಲ್ಲಿ ವಿವಾದ ಹಿಂಸಾಚಾರಕ್ಕೆ ತಿರುಗಿದೆ. ಇದೀಗ ಹಿಂದೂ ಪರ ಸಂಘಟನೆಗಳು ವಿಭಿನ್ನವಾಗಿ ಅಭಿಯಾನ ಶುರು ಮಾಡಿದ್ದಾರೆ. ಸಾವರ್ಕರ್ ವಿರೋಧಿಗಳಿಗೆ ಟಕ್ಕರ್ ಕೊಡುವ ಸಲುವಾಗಿ ಮೆಗಾ ಪ್ಲಾನ್ ಮಾಡಿದ್ದಾರೆ.
Shocking: ರೆಸ್ಟೋರೆಂಟ್ನಲ್ಲಿ ಆರ್ಡರ್ ಮಾಡಿದ ಆಹಾರದಲ್ಲಿ ʻಹುಳುʼಗಳ ಹರಿದಾಟ: ಮಹಿಳೆ ಮಾಡಿದ್ದೇನು?
ಹೌದು ಮಲೆನಾಡು ಶಿವಮೊಗ್ಗದಲ್ಲಿ ಸಾವರ್ಕರ್ ಭಾವಚಿತ್ರ ತೆರವು ವಿಚಾರವಾಗಿ ವಿವಾದ ಶುರುವಾಗಿ, ಎಲ್ಲೆಡೆ ಹಬ್ಬುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಸಾವರ್ಕರ್ ವಿರೋಧಿಗಳಿಗೆ ಟಕ್ಕರ್ ಕೊಡಲು ಹಿಂದೂ ಸಂಘಟನೆಗಳು ಮುಂದಾಗಿದ್ದು, ಈ ಬಾರಿಯ ಗಣೇಶೋತ್ಸವದ ಮೂಲಕವೇ ಸಾವರ್ಕರ್ ಗೆ ಇಡೀ ರಾಜ್ಯಾದ್ಯಂತ ಗೌರವ ಸಲ್ಲಿಸಲು ಸಿದ್ಧತೆ ನಡೆಸಿವೆ.
Shocking: ರೆಸ್ಟೋರೆಂಟ್ನಲ್ಲಿ ಆರ್ಡರ್ ಮಾಡಿದ ಆಹಾರದಲ್ಲಿ ʻಹುಳುʼಗಳ ಹರಿದಾಟ: ಮಹಿಳೆ ಮಾಡಿದ್ದೇನು?
ಇನ್ನು ಈ ಬಗ್ಗೆ ಮಾತನಾಡಿರುವ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು, ಈ ಬಾರಿ ಇಡೀ ರಾಜ್ಯದ ಎಲ್ಲಾ ಗಣೇಶ ಮೂರ್ತಿಗಳ ಜೊತೆಗೆ ಸಾವರ್ಕರ್ ಫೋಟೋ ಇಡಲಿದ್ದೇವೆ. ಇದಕ್ಕೆ ಪ್ರತಿಯೊಬ್ಬ ಹಿಂದೂ ಕಾರ್ಯಕರ್ತನೂ ಇದಕ್ಕೆ ಬದ್ಧನಾಗಿರಲಿದ್ದು. ಯಾರು ಬಂದು ಫೋಟೋ ತೆಗೆಸುತ್ತಾರೋ ನೋಡೋಣ ಎಂದು ಸವಾಲು ಹಾಕಿದ್ದಾರೆ.