ಬಾಗಲಕೋಟೆ : ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಎರಡೂವರೆ ವರ್ಷ ಪೂರೈಸುತ್ತದೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಪುನಾರಚನೆ ಆಗಲಿದೆ ಹಾಗು CM ಬದಲಾವಣೆ ಸಹ ಆಗುತ್ತೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದೀಗ ಬಿಜೆಪಿಯ ಮಾಜಿ ಸಚಿವ ರಾಜುಗೌಡ ನೆಕ್ಸ್ಟ್ ಸಿಎಂ ಸತೀಶ್ ಜಾರಕಿಹೊಳಿ ಆಗಲಿ ಎಂದು ಅವರ ಪರವಾಗಿ ಬ್ಯಾಟ್ ಬೀಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ವೀರ ಜಡಗಣ್ಣ ಬಾಲಣ್ಣ ಅವರ ಕಂಚಿನ ಪುತ್ಥಳಿ ಅನಾವರಣ ಮಾಡಿ ಅವರು ಮಾತನಾಡಿದ ಅವರು ಸ್ವತಂತ್ರ ವೀರ ಯೋಧ ಜಡಗಣ್ಣ ಬಾಲಣ್ಣಗೆ ಜಾರಕಿಹೊಳಿಯವರನ್ನು ಹೋಲಿಸಿ, ಹಾಡಿ ಹೊಗಳಿದ್ದಾರೆ. ನಮ್ಮ ಸಮಾಜಕ್ಕೆ ಸತೀಶಣ್ಣ ಜಾರಕಿಹೊಳಿ ಜಡಗಣ್ಣ ಬಾಲಣ್ಣ ಇದ್ದಂತೆ. ಮಾತು ಕಡಿಮೆ ಆದ್ರೆ ಪ್ಲ್ಯಾನ್ ಹಾಕಿದ್ರೆ ಕರೆಕ್ಟ್ ಏಟು ಹಾಕ್ತಾನೆ ನಮ್ಮಣ್ಣ. ವೀರ ಯೋಧ ಜಡಗಣ್ಣ ಬಾಲಣ್ಣ ಅವ್ರು ಬ್ರಿಟೀಷರ ಎದುರು ಶಸ್ತ್ರತ್ಯಾಗ ಮಾಡಿರಲಿಲ್ಲ. ನೀನು ಶಸ್ತ್ರ ತ್ಯಾಗ ಮಾಡಬೇಡ ಎಂದಿದ್ದಾರೆ.
ಮುಂದಿನ ಸಿಎಂ ಸತೀಶಣ್ಣನೇ ಆಗ್ಲಿ. ಈ ಬಾರಿ ನನಗೆ ಮುಖ್ಯಮಂತ್ರಿ ಆಸೆ ಇಲ್ಲ, ಮುಂದಿನ ಸಾರಿ ಆಗ್ತೇನೆ ಎಂದು ಹೇಳುತ್ತಿದ್ದೀಯ. ಅದೆಲ್ಲ ಬೇಡ ಇದೇ ಡಿಸೆಂಬರ್‍ನಲ್ಲಿ ಮುಖ್ಯಮಂತ್ರಿ ಆಗು. ನಿಮ್ಮನ್ನು ಮುಖ್ಯಮಂತ್ರಿ ಆಗಿ ನೋಡಬೇಕೆಂಬ ಆಸೆ ನಮ್ಮದು. ನಾವು ನಿಮ್ಮ ರಕ್ತವನ್ನೇ ಹಂಚಕೊಂಡು ಹುಟ್ಟೀವಿ, ನಾವೇನು ಹಗುರಿಲ್ಲ ಸುರಪುರ ಬ್ಯಾಡ್ರು. ಹಿಂದೆ ಬ್ರಿಟೀಷರನ್ನೂ ಬಿಟ್ಟಿಲ್ಲ, ಔರಂಗಜೇಬನನ್ನೂ ಬಿಟ್ಟಿಲ್ಲ ಎಂದಿದ್ದಾರೆ.