ತುಮಕೂರು : ತಮಕೂರಿನ ಸರ್ವೋದಯ ಕಾಲೇಜು ಎಡವಟ್ಟು ಮಾಡಿಕೊಂಡಿದ್ದು, ಏಕಾಏಕಿ ೫೦ ವಿದ್ಯಾರ್ಥಿಗಳಿಗೆ ಗೇಟ್ ಪಾಸ್ ನೀಡಿ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು ತುಮಕೂರಿನ ಕೋತಿತೋಪಿನಲ್ಲಿರುವ ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ೧೦೦ ವಿದ್ಯಾರ್ಥಿಗಳ ಪ್ರವೇಶಕ್ಕೆ ಪಿಯು ಬೋರ್ಡ್ ಅವಕಾಶ ನೀಡಿತ್ತು. ಆದರೆ ನಿಯಮ ಉಲ್ಲಂಘಿಸಿದ ಸಂಸ್ಥೆ ಬರೋಬ್ಬರಿ ೧೫೦ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಆದರೆ ಇದೀಗ ದ್ವಿತೀಯ ಪಿಯುಸಿ ಪಿಸಿಎಂಬಿಯ ೫೦ ವಿದ್ಯಾರ್ಥಿಗಳಿಗೆ ಗೇಟ್ ಮಾಡಿದೆ. ಇದರಿಂದ ವಿದ್ಯಾರ್ಥಿಗಳು, ಪೋಷಕರಿಗೆ ದಿಕ್ಕೇ ತೋಚದಂತಾಗಿದೆ.
ಸರ್ವೋದಯ ಸಂಸ್ಥೆ ಈಗಾಗಲೇ ಫೀಸ್ ಕಟ್ಟಿಸಿಕೊಂಡಿದ್ದು, ದಾಖಲಾತಿ ನೀಡಿದೆ. ಈದೀಗ ಸರ್ಕಾರಿ ಕಾಲೇಜಿಗೆ ಹೋಗುವಂತೆ ಹೇಳುತ್ತಿದ್ದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಅಡ್ಮಿಷನ್ ಮಾಡಿಸಿಕೊಳ್ಳದಿದ್ದರೆ ಕೋರ್ಟ್ ಮೆಟ್ಟಿರುವುದಾಗಿ ಎಚ್ಚರಿಕೆ ನೀಡಿದ್ದಾರೆ.