Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

DK Shivakumar Profiles: ಕಷ್ಟಕಾಲದ ‘ಕಾವಲುಗಾರ’ನಿಗೆ ಒಲಿದ ರಾಜಯೋಗ: ಇದು ಒಕ್ಕಲಿಗ ನಾಯಕ ‘ಡಿಕೆಶಿ’ ಬೆಳೆದು ಬಂದ ಹಾದಿ!

ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ ಮೂವರು ಬಾಲಕರು ವಶಕ್ಕೆ

ನಾಳೆಯಿಂದ ಶಾಲೆಗಳು ಶುರು; ಸಿಹಿ ಊಟದೊಂದಿಗೆ ವಿದ್ಯಾರ್ಥಿಗಳಿಗೆ ಅದ್ಧೂರಿ ಸ್ವಾಗತ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಿವೈ ರಾಘವೇಂದ್ರ, ವಿಜಯೇಂದ್ರ ವಿರುದ್ಧ ಶಾಸಕ ಗೋಪಾಲಕೃಷ್ಣ ಬೇಳೂರು ಹಿಗ್ಗಾಮುಗ್ಗಾ ವಾಗ್ಧಾಳಿ
KARNATAKA

ಬಿವೈ ರಾಘವೇಂದ್ರ, ವಿಜಯೇಂದ್ರ ವಿರುದ್ಧ ಶಾಸಕ ಗೋಪಾಲಕೃಷ್ಣ ಬೇಳೂರು ಹಿಗ್ಗಾಮುಗ್ಗಾ ವಾಗ್ಧಾಳಿ

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ  ಅಂಬಾರಗೋಡ್ಲು-ಕಳಸವಳ್ಳಿ ಸೇತುವೆಗೆ ಕೇಂದ್ರ ಸರ್ಕಾರದಿಂದ ಹಣ ಕೊಟ್ಟಿದ್ದಾರೆ. ನಮ್ಮ ರಾಜ್ಯದ ತೆರಿಗೆ ಹಣ ಕೊಟ್ಟಿದ್ದಾರೆಯೆ ವಿನಃ ಬಿ.ವೈ.ರಾಘವೇಂದ್ರ, ವಿಜಯೇಂದ್ರ ಮನೆಯಿಂದ ಹಣ ಕೊಟ್ಟು ಸೇತುವೆ ಮಾಡಿಲ್ಲ. ಆದರೆ ವಾರಕ್ಕೊಮ್ಮೆ ಬಂದು ನಾನೇ ಸೇತುವೆ ಮಾಡಿದ್ದು ಎಂದು ಬಿಂಬಿಸಿಕೊಳ್ಳುತ್ತಿರುವ ಸಂಸದ ರಾಘವೇಂದ್ರ ವರ್ತನೆ ಹಾಸ್ಯಾಸ್ಪದ ಎಂಬುದಾಗಿ ಸಂಸದ ಬಿವೈ ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಶಾಸಕ ಗೋಪಾಲಕೃಷ್ಣ ಬೇಳೂರು ವಾಗ್ಧಾಳಿ ನಡೆಸಿದ್ದಾರೆ.

ಇಂದು ಶಿವಮೊಗ್ಗದ ಸಾಗರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ತುಮರಿ ಸೇತುವೆ ಪಕ್ಕ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಿ.ವೈ.ವಿಜಯೇಂದ್ರ ಟೆಂಟ್ ಹಾಕಿಕೊಂಡು ಕುಳಿತುಕೊಂಡು, ಸೇತುವೆ ಮಾಡಿದ್ದು ನಾವು ಎಂದು ಬಂದವರಿಗೆಲ್ಲಾ ಪ್ರಚಾರ ಮಾಡುವುದು ಒಳ್ಳೆಯದು ಎಂಬುದಾಗಿ ವ್ಯಂಗ್ಯವಾಡಿದರು.

ಅಂಬಾರಗೋಡ್ಲು-ಕಳಸವಳ್ಳಿ ಸೇತುವೆಗೆ ಮೊದಲು ನಾನು ಮನವಿ ಮಾಡಿದ್ದೇ. ಯಡಿಯೂರಪ್ಪನವರು ಉಪ ಮುಖ್ಯಮಂತ್ರಿಯಾಗಿದ್ದಾಗ ಸಿಗಂದೂರು ಕ್ಷೇತ್ರದಲ್ಲಿ ಸೇತುವೆ ಮಾಡಿಸಿಕೊಡುವುದಾಗಿ ಮಾತು ಕೊಟ್ಟಿದ್ದರು. ನಂತರ ಸಂಸದರಾದ ಮೇಲೆ ನಿತಿನ್ ಗಡ್ಕರಿ ಮೇಲೆ ಒತ್ತಡ ತಂದು ಸೇತುವೆ ಮಂಜೂರು ಮಾಡಿಸಿದ್ದಾರೆ. ಸೇತುವೆ ಆಗಿರುವ ಕ್ರೆಡಿಟ್ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಬೇಕೆ ವಿನಃ ಇದರಲ್ಲಿ ರಾಘವೇಂದ್ರ ಕೊಡುಗೆ ಏನಿಲ್ಲ. ಸೇತುವೆ ಲೋಕಾರ್ಪಣೆಗೆ ಪ್ರಧಾನಿಯನ್ನಾಗಲೀ, ಗಡ್ಕರಿಯನ್ನಾಗಲೀ ಕೊನೆಗೆ ಅಮೇರಿಕಾ ಅಧ್ಯಕ್ಷ ಟ್ರಂಪ್ ಅವರನ್ನೆ ಕರೆಸಲಿ. ನಾನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತೇನೆ. ನನ್ನ ಗಮನಕ್ಕೆ ತರದೇ ಸೇತುವೆ ಲೋಕಾರ್ಪಣೆಗಾಗಿ ಸ್ಥಳ ಗುರುತಿಸುವುದು ಇನ್ನಿತರೆ ಚಟುವಟಿಕೆ ನಡೆಸಿದರೆ ಸಹಿಸಿವುದಿಲ್ಲ ಎಂಬುದಾಗಿ ಎಚ್ಚರಿಕೆ ನೀಡಿದರು.

ನಮ್ಮದು 140 ಶಾಸಕರು ಇರುವ ಜಂಬೂಸವಾರಿ. ಸಣ್ಣಪುಟ್ಟ ಗೊಂದಲ ಇರುವುದು ಸಹಜ. ಶಾಸಕರ ಸಮಸ್ಯೆ ಆಲಿಸಲು ಸುರ್ಜೇವಾಲ ಬಂದಿದ್ದಾರೆ. ಆದರೆ ಸಿ.ಟಿ.ರವಿ ಸೂಟ್‌ಕೇಸ್ ಒಯ್ಯಲು ಬಂದಿದ್ದಾರೆ ಎಂದು ಹೇಳಿರುವುದನ್ನು ಖಂಡಿಸುತ್ತೇವೆ. ಬಹುಶ್ಯಃ ಬಿಜೆಪಿ ಅಧಿಕಾರದಲ್ಲಿದ್ದಾಗ ಅವರ ವರಿಷ್ಟರು ಸೂಟ್‌ಕೇಸ್ ತೆಗೆದುಕೊಂಡು ಹೋಗಲು ರಾಜ್ಯಕ್ಕೆ ಬರುತ್ತಿದ್ದರೇನೋ. ಅದಕ್ಕೆ ನಮ್ಮ ಪಕ್ಷದ ವರಿಷ್ಟರ ಬಗ್ಗೆ ಹೇಳುತ್ತಿದ್ದಾರೆ. ವರಿಷ್ಟರು ಬಂದು ಹೋದರೆ ಪಕ್ಷ ಗಟ್ಟಿಯಾಗುತ್ತದೆ. ಪಕ್ಷದ ನಾಯಕತ್ವದ ವಿರುದ್ದ ಮಾತನಾಡಬಾರದು ಎಂದು ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ಅಡಿಕೆ ಕೊಳೆರೋಗಕ್ಕೆ ಸಂಬಂಧಪಟ್ಟಂತೆ ಸರ್ಕಾರದಿಂದ ಹೆಚ್ಚಿನ ಅನುದಾನ ತರಿಸಲು ಪ್ರಯತ್ನ ನಡೆಸಲಾಗುತ್ತದೆ. ಜೊತೆಗೆ ಅಡಿಕೆ ಹಾನಿಕಾರಕ ಎನ್ನುವ ಚರ್ಚೆ ಸುಪ್ರೀಂ ಕೋರ್ಟ್ನಲ್ಲಿದ್ದು ಕೇಂದ್ರ ಸರ್ಕಾರ ಇದರ ವಿರುದ್ದ ಸಮಗ್ರ ವಾದ ಮಂಡಿಸಬೇಕು. ಅಡಿಕೆ ಹಾಳೆ ಬಳಕೆ ಕುರಿತು ಅಮೇರಿಕಾ ಅಪಸ್ವರ ಎತ್ತಿದೆ. ಟ್ರಂಪ್ ಜೊತೆ ಸ್ನೇಹ ಇರುವ ಮೋದಿಯವರು ಇದರ ಬಗ್ಗೆ ಮಾತನಾಡಬೇಕು. ಅಡಿಕೆ ಹಾಳೆ ತಟ್ಟೆ ಬಳಕೆ ನಿಲ್ಲಿಸಿದ್ದರಿಂದ ನೂರಾರು ಗ್ರಾಮೀಣ ಕೈಗಾರಿಕೆಗಳು ಮುಚ್ಚಿದೆ ಎಂದು ಗುಡುಗಿದರು.

ಸಾಗರ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಲ್ಲಿ ಸಂಸದ ಹಸ್ತಕ್ಷೇಪ ಸಹಿಸುವುದಿಲ್ಲ: ಶಾಸಕ ಗೋಪಾಲಕೃಷ್ಣ ಬೇಳೂರು

BREAKING : ತೆಲಂಗಾಣ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಪೋಟ : ಮೃತಪಟ್ಟವರ ಸಂಖ್ಯೆ 40 ಕ್ಕೆ ಏರಿಕೆ | Telangana factory blast

Share. Facebook Twitter LinkedIn WhatsApp Email

Related Posts

DK Shivakumar Profiles: ಕಷ್ಟಕಾಲದ ‘ಕಾವಲುಗಾರ’ನಿಗೆ ಒಲಿದ ರಾಜಯೋಗ: ಇದು ಒಕ್ಕಲಿಗ ನಾಯಕ ‘ಡಿಕೆಶಿ’ ಬೆಳೆದು ಬಂದ ಹಾದಿ!

2 Mins Read

ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ ಮೂವರು ಬಾಲಕರು ವಶಕ್ಕೆ

1 Min Read

ನಾಳೆಯಿಂದ ಶಾಲೆಗಳು ಶುರು; ಸಿಹಿ ಊಟದೊಂದಿಗೆ ವಿದ್ಯಾರ್ಥಿಗಳಿಗೆ ಅದ್ಧೂರಿ ಸ್ವಾಗತ!

2 Mins Read
Recent News

DK Shivakumar Profiles: ಕಷ್ಟಕಾಲದ ‘ಕಾವಲುಗಾರ’ನಿಗೆ ಒಲಿದ ರಾಜಯೋಗ: ಇದು ಒಕ್ಕಲಿಗ ನಾಯಕ ‘ಡಿಕೆಶಿ’ ಬೆಳೆದು ಬಂದ ಹಾದಿ!

ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ ಮೂವರು ಬಾಲಕರು ವಶಕ್ಕೆ

ನಾಳೆಯಿಂದ ಶಾಲೆಗಳು ಶುರು; ಸಿಹಿ ಊಟದೊಂದಿಗೆ ವಿದ್ಯಾರ್ಥಿಗಳಿಗೆ ಅದ್ಧೂರಿ ಸ್ವಾಗತ!

ಡಿಕೆಶಿ ಸಿಎಲ್‌ಪಿ ನಾಯಕರಾಗಿ ಆಯ್ಕೆ: ಕಠಿಣ ಕಾರ್ಯವೈಖರಿಗೆ ಸಿಕ್ಕ ಅತ್ಯುನ್ನತ ಗೌರವ ಎಂದ ದಿನೇಶ್ ಗುಂಡೂರಾವ್

State News
KARNATAKA

DK Shivakumar Profiles: ಕಷ್ಟಕಾಲದ ‘ಕಾವಲುಗಾರ’ನಿಗೆ ಒಲಿದ ರಾಜಯೋಗ: ಇದು ಒಕ್ಕಲಿಗ ನಾಯಕ ‘ಡಿಕೆಶಿ’ ಬೆಳೆದು ಬಂದ ಹಾದಿ!

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಕೊನೆಗೂ ಕರ್ನಾಟಕ ಕಾಂಗ್ರೆಸ್‌ನ ( Karnataka Congress ) ಆಪದ್ಬಾಂಧವ, ‘ಟ್ರಬಲ್ ಶೂಟರ್’ ಎಂದೇ ಖ್ಯಾತರಾದ ಡಿ.ಕೆ. ಶಿವಕುಮಾರ್…

ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ ಮೂವರು ಬಾಲಕರು ವಶಕ್ಕೆ

ನಾಳೆಯಿಂದ ಶಾಲೆಗಳು ಶುರು; ಸಿಹಿ ಊಟದೊಂದಿಗೆ ವಿದ್ಯಾರ್ಥಿಗಳಿಗೆ ಅದ್ಧೂರಿ ಸ್ವಾಗತ!

ಡಿಕೆಶಿ ಸಿಎಲ್‌ಪಿ ನಾಯಕರಾಗಿ ಆಯ್ಕೆ: ಕಠಿಣ ಕಾರ್ಯವೈಖರಿಗೆ ಸಿಕ್ಕ ಅತ್ಯುನ್ನತ ಗೌರವ ಎಂದ ದಿನೇಶ್ ಗುಂಡೂರಾವ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.