ಮೈಸೂರು: ವಿವಿಧ ಪ್ರಕರಣದಲ್ಲಿ ಭಾಗಿಯಾಗಿದ್ದಂತ ಸ್ಯಾಂಟ್ರೋ ರವಿ, ಪ್ರಕರಣ ದಾಖಲಾಗಿ ಒಂದು ವಾರವೇ ಕಳೆಯುತ್ತಾ ಬಂದರೂ ಇದುವರೆಗೆ ಪತ್ತೆಯಾಗಿಲ್ಲ. ಈ ಹಿನ್ನಲೆಯಲ್ಲಿ ಪೊಲೀಸರು ಆತನ ಪತ್ತೆಗಾಗಿ ಹುಡುಕಾಟ ಮುಂದುವರೆಸಿದ್ದಾರೆ.
ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಕೆ ಎಸ್ ಮಂಜುನಾಥ್ ಆಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧ ವಂಚನೆ, ವರದಕ್ಷಿಣೆ ಕಿರುಕುಳ, ಅತ್ಯಾಚಾರ ಹಾಗೂ ಜಾತಿನಿಂದನೆಯಡಿ ಜನವರಿ 2ರಂದು ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ಡಿಸಿಪಿ ಮುತ್ತುರಾಜ್ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡವನ್ನು ಕೂಡ ಪೊಲೀಸ್ ಇಲಾಖೆ ರಚಿಸಿತ್ತು. ಎನ್ ಆರ್ ಉಪ ವಿಭಾಗದ ಎಸಿಪಿ ಶಿವಶಂಕರ್ ನೇತೃತ್ವದಲ್ಲಿ ಸ್ಯಾಂಟ್ರೋ ರವಿ ಪತ್ತೆಗಾಗಿ ಹುಡುಕಾಟ ಆರಂಭಿಸಲಾಗಿದೆ.
ಪೊಲೀಸರು ಪ್ರಕರಣ ದಾಖಲಾಗಿ 6 ದಿನ ಕಳೆದರೂ ಬೆಂಗಳೂರು, ಮೈಸೂರಿನಲ್ಲಿ ಎಲ್ಲಿಯೇ ಹುಡುಕಿದರೇ ಸ್ಯಾಂಟ್ರೋ ರವಿ ಪತ್ತೆಯಾಗಿಲ್ಲ ಎನ್ನಲಾಗಿದೆ. ಹೀಗಾಗಿ ಪೊಲೀಸರ ಪತ್ತೆ ಕಾರ್ಯ ಮುಂದುವರೆದಿದೆ.
ಮತ್ತೊಂದೆಡೆ ಸ್ಯಾಂಟ್ರೋ ರವಿ ಕುರಿತಂತೆ ದಿನಕ್ಕೊಂದು ಪ್ರಕರಣಗಳು, ಡೀಲ್ ರಾಜನ ಡೀಲ್ ಗಳು ಹೊರ ಬರುತ್ತಿವೆ. ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಡೀಲ್ ಕುದುರಿಸೋದಕ್ಕೆ ಈತನಿಗೆ ಸಹಾಯ ಮಾಡಿ, ರೂಂ ಕೊಟ್ಟಂತ ಸೀನಿಯರ್ ಮ್ಯಾನೇಜರ್ ಅನ್ನು ರಾಜ್ಯ ಸರ್ಕಾರ ಎತ್ತಂಗಡಿ ಕೂಡ ಮಾಡಿದೆ.
Watch Video: ಹೊಸ ವರ್ಷದ ‘ಮೊದಲ ಸೂರ್ಯೋದಯ’ ಹೇಗಿತ್ತು ಗೊತ್ತಾ.? ಇಲ್ಲಿದೆ ವೀಡಿಯೋ ನೋಡಿ