Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಕ್ರಿಮಿನಲ್ ಪ್ರಕರಣದಿಂದ ನೌಕರರು ಖುಲಾಸೆಯಾದರೂ ಬಾಕಿ ವೇತನದ ಹಕ್ಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

BREAKING : ಜಿ.ಪರಮೇಶ್ವರ್ ಗೆ ‘KPCC’ ಅಧ್ಯಕ್ಷ ಸ್ಥಾನ, ಸ್ಪೀಕರ್ ಸ್ಥಾನದ ಆಫರ್ ನೀಡಿದ ಹೈಕಮಾಂಡ್!

ALERT : ಸಾರ್ವಜನಿಕರೇ ಎಚ್ಚರ :ಔಷಧಿ ಬಳಸುವಾಗ ಈ 3 ತಪ್ಪುಗಳನ್ನು ಎಂದಿಗೂ ಮಾಡಬೇಡಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಂತೋಷ್ ಬಾಲರಾಜ್ ನಟನೆಯ `ಸತ್ಯಂ’ ಚಿತ್ರಕ್ಕೆ ಸೆನ್ಸಾರ್ ಮೆಚ್ಚುಗೆ!
FILM

ಸಂತೋಷ್ ಬಾಲರಾಜ್ ನಟನೆಯ `ಸತ್ಯಂ’ ಚಿತ್ರಕ್ಕೆ ಸೆನ್ಸಾರ್ ಮೆಚ್ಚುಗೆ!

By ಅವಿನಾಶ್‌ ಆರ್‌ ಭೀಮಸಂದ್ರ

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌:ಇದುವರೆಗೂ ಭಿನ್ನ ಪಥದ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವವರು ಅಶೋಕ್ ಕಡಬ. ಇದೀಗ ಅವರು `ಸತ್ಯಂ’ ಚಿತ್ರದ ಮೂಲಕ ಮತ್ತೊಂದು ಜಾಡಿನತ್ತ ಹೊರಳಿಕೊಂಡಿರುವ ಸ್ಪಷ್ಟ ಸೂಚನೆಯೊಂದು ಸಿಕ್ಕಿಬಿಟ್ಟಿದೆ. ಈ ಹಿಂದೆ ಸತ್ಯಂ ಟೀಸರ್ ಬಿಕಡುಗಡೆಯಾದಾಗಲೇ ಅದು ಸ್ಪಷ್ಟವಾಗಿತ್ತು. ಆ ಟೀಸರ್‍ಗೆ ಮಿಲಿಯನ್ನುಗಟ್ಟಲೆ ವೀಕ್ಷಣೆಗಳು ಸಿಕ್ಕಿ, ಎಲ್ಲ ಕಡೆಗಳಿಂದಲೂ ಮೆಚ್ಚುಗೆಗಳೂ ಮೂಡಿಕೊಂಡಿದ್ದವು. ಇದೀಗ ಬಿಡುಗಡೆಯ ಹೊಸ್ತಿಲಿನಲ್ಲಿರುವ ಸತ್ಯಂ ಸೆನ್ಸಾರ್ ಸರ್ಟಿಫಿಕೇಟ್ ಪಡೆದುಕೊಂಡಿದೆ. ಈ ವಿಚಾರವನ್ನು ನಿರ್ಮಾಪಕರಾದ ಮಹಾಂತೇಶ್ ವಿ.ಕೆ ಹಂಚಿಕೊಂಡಿದ್ದಾರೆ. ಯು\ಎ ಸರ್ಟಿಫಿಕೇಟಿನೊಂದಿಗೆ, ಸೆನ್ಸಾರ್ ಅಧಿಕಾರಿಗಳ ತುಂಬು ಮೆಚ್ಚುಗೆಯೂ ಎದುರುಗೊಂಡಿರೋದರಿಂದ ಚಿತ್ರತಂಡ ಖುಷಿಗೊಂಡಿದೆ.

 

ಇದು ಗಣಪ ನಂತರ ಸಂತೋಷ್ ಬಾಲರಾಜ್ ನಾಯಕನಾಗಿ ನಟಿಸಿರುವ ಚಿತ್ರ. ಕನ್ನಡತಿ ಖ್ಯಾತಿಯ ರಂಜಿನಿ ರಾಘವನ್ ನಾಯಕಿಯಾಗಿ ಜೊತೆಯಾಗಿದ್ದಾರೆ. ಈ ಹಿಂದೆ ರಂಗಿತರಂಗ, ಕಾಂತಾರ ಚಿತ್ರಗಳಲ್ಲಿ ತುಳುನಾಡಿನ ದೈವಾರಾಧನೆಯ ಕಥೆಯಿತ್ತು. ಆ ಎರ್ಡು ಸಿನಿಮಾಗಳ ದೊಡ್ಡ ಮಟ್ಟದ ಗೆಲುವಿನ ಶಕ್ತಿಯೂ ಅದೇ. ಅಂಥಾದ್ದೊಂದು ನೆಲದ ಘಮಲಿನ ಕಥೆಯನ್ನೊಳಗೊಂಡಿರುವ ಚಿತ್ರ `ಸತ್ಯಂ’. ಹಾಗೆಂದ ಮಾತ್ರಕ್ಕೆ ಇದು ಆ ಎರಡು ಸಿನಿಮಾಗಳ ಗೆಲುವಿನ ಪ್ರಭೆಯಲ್ಲಿ ರೂಪುಗೊಂಡಿರುವ ಚಿತ್ರ ಅಂದುಕೊಳ್ಳುವಂತಿಲ್ಲ. ಕಾಂತಾರಕ್ಕೂ ಮುನ್ನವೇ ಸತ್ಯಂ ಕಥೆ ಸಿದ್ಧವಾಗಿತ್ತೆಂಬ ವಿಚಾರವನ್ನು ಖುದ್ದು ನಿರ್ದೇಶಕರು ಖಚಿತಪಡಿಸಿದ್ದಾರೆ. ಇಂಥಾ ಭಿನ್ನ ಕಥಾನಕವನ್ನು ಕಂಡು ಸೆನ್ಸಾರ್ ಅಧಿಕಾರಿಗಳು ಖುಷಿಗೊಂಡಿದ್ದಾರೆ. ಒಂದು ಅತ್ಯಪರೂಪದ ಚಿತ್ರ ನೋಡಿದ ತುಂಬು ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ, ಸೆನ್ಸಾರ್ ಅಧಿಕಾರಿಗಳು ಅದೆಷ್ಟೋ ಸಿನಿಮಾಗಳನ್ನು ವೀಕ್ಷಿಸುತ್ತಾರೆ. ಅವರ ಪಾಲಿಗೆ ಅದೊಂದು ಯಾಂತ್ರಿಕ ಕೆಲಸದಂತಾಗಿ ಬಿಡುವ ಸಾಧ್ಯತೆಗಳೇ ಹೆಚ್ಚು. ಅಂಥಾದ್ದರ ನಡುವೆ ಒಂದು ಸಿನಿಮಾ ಎಲ್ಲ ರೀತಿಯಿಂದಲೂ ಹೊಸತನದಿಂದ ಕಂಗೊಳಿಸಿದಾಗ ಅವರಲ್ಲೊಂದು ಖುಷಿ ಮೂಡಿಕೊಳ್ಳುತ್ತೆ. ಅಂಥಾದ್ದೊಂದು ಅನುಭೂತಿಯನ್ನು ಅಶೋಕ್ ಕಡಬ ನಿರ್ದೇಶನದ ಸತ್ಯಂ ಚಿತ್ರ ಕೊಡಮಾಡಿದೆ. ಹೀಗೆ ಒಟ್ಟಾರೆ ಚಿತ್ರದ ಬಗ್ಗೆ ತುಂಬು ಮೆಚ್ಚುಗೆ ಸೂಚಿಸುತ್ತಲೇ, ಸೆನ್ಸಾರ್ ಮಂಡಳಿ ಕಡೆಯಿಂದ ಸತ್ಯಂಗೆ ಯು\ಎ ಸರ್ಟಿಫಿಕೇಟು ಸಿಕ್ಕಿದೆ. ಅಂದಹಾಗೆ, ಯಾವುದೇ ಕಟ್, ಎಡಿಟ್ ಇಲ್ಲದೆಯೇ ಈ ಸಿನಿಮಾ ಸೆನ್ಸಾರ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದೆ!

 

ಇದುವರೆಗೂ ನಿರ್ದೇಶಕರಾಗಿ ಒಂದಷ್ಟು ಪ್ರಯೋಗಗಳನ್ನು ಮಾಡುತ್ತಾ ಬಂದವರು, ಅದರಲ್ಲಿಯೂ ತಮ್ಮತನದ ಮೂಲಕ ಗೆಲುವು ದಾಖಲಿಸಿರುವವರು ಅಶೋಕ್ ಕಡಬ. ಇಂಥಾ ನಿರ್ದೇಶಕರು ಪಕ್ಕಾ ಮಾಸ್ ಕಥನದತ್ತ ಹೊರಳಿದಾಗ ಸಹಜವಾಗಿಯೇ ಕುತೂಹಲ ಮೂಡಿಕೊಳ್ಳುತ್ತೆ. ಅಶೋಕ್ ಕಡಬ ಸತ್ಯಂ ಎಂಬ ಪಕ್ಕಾ ಮಾಸ್ ಥ್ರಿಲ್ಲರ್ ಕಥಾನಕವನ್ನು ಕೈಗೆತ್ತಿಕೊಂಡಾಗಲೂ ಇಂಥಾದ್ದೇ ಛಳುಕು ಮೂಡಿಕೊಂಡಿತ್ತು. ಅದು ಟೀಸರ್ ಬಿಡುಗಡೆಯಾದಾಕ್ಷಣ ಮತ್ತಷ್ಟು ತೀವ್ರಗೊಂಡಿತ್ತು. ಮಿಲಿಯನ್ನುಗಟ್ಟಲೆ ವೀವ್ಸ್ ಪಡೆದುಕೊಳ್ಳುವ ಮೂಲಕ ಸತ್ಯಂ ಸೃಷ್ಟಿಸಿದ್ದ ಸಂಚಲನ ಸಣ್ಣದ್ದೇನಲ್ಲ. ವಿಶೇಷವೆಂದರೆ, ಈ ಸಿನಿಮಾದಲ್ಲಿಯೂ ಪಂಜುರ್ಲಿ ದೈವದ ಆರಾಧನೆಯ ಕಥೆಯಿದೆ. ಅದರ ಸುತ್ತಾ ಮೈನವಿರೇಳಿಸುವ, ಸಲೀಸಾಗಿ ಅಂದಾಜಿಸಲಾಗದ ಕಥನವನ್ನು ಅಶೋಕ್ ಕಡಬ ದೃಷ್ಯವಾಗಿಸಿದ್ದಾರಂತೆ.

ಶ್ರೀ ಮಾತಾ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಮಹಾಂತೇಶ್ ವಿ.ಕೆ ನಿರ್ಮಾಣ ಮಾಡಿರುವ ಸತ್ಯಂ ಕುಟುಂಬ ಸಮೇತರಾಗಿ ನೋಡುವ, ಎಲ್ಲ ವರ್ಗದ ಪ್ರೇಕ್ಷಕರನ್ನೂ ಆವರಿಸಿಕೊಳ್ಳುವ ಗುಣ ಹೊಂದಿರುವ ಚಿತ್ರವಂತೆ. ವಿಶೇಷವೆಂದರೆ, ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸತ್ಯಂಗೂ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನೆಟೆಕ್ ಸೂರಿ ಛಾಯಾಗ್ರಹಣ, ಸಂತೋಷ್ ಬಾಲರಾಜ್, ರಂಜಿನಿ ರಾಘವನ್, ಸುಮನ್, ಸೈಯಾಜಿ ಶಿಂಧೆ, ಪವಿತ್ರಾ ಲೋಕೇಶ್, ಅವಿನಾಶ್, ವಿನಯಾ ಪ್ರಸಾದ್, ಮುಖ್ಯಮಂತ್ರಿ ಚಂದ್ರು, ಎಂ.ಎನ್ ಲಕ್ಷ್ಮಿದೇವಿ, ಶೃಂಗೇರಿ ರಾಮಣ್ಣ, ತನುಶ್ರೀ, ಎಂ.ಎಸ್ ಉಮೇಶ್, ಬಸವರಾಜ್ ಕಟ್ಟಿ, ಮೀನಾಕ್ಷಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಇದೀಗ ಪೋಸ್ಟ್ ಪ್ರಡಕ್ಷನ್ ಕೆಲಸ ಕಾರ್ಯ ಸಂಪೂರ್ಣವಾಗಿ ಮುಗಿದಿದೆ. ಚುನಾವಣಾ ಭರಾಟೆ, ಐಪಿಎಲ್ ಹಂಗಾಮದ ನಡುವೆ ತಿಂಗಳೊಪ್ಪತ್ತಿನಲ್ಲಿಯೇ ಸತ್ಯಂ ಅನ್ನು ತೆರೆಗಾಣಿಸಲು ಚಿತ್ರ ತಂಡ ತಯಾರಿ ನಡೆಸುತ್ತಿದೆ. ಅತೀ ಶೀಘ್ರದಲ್ಲಿ ಸತ್ಯಂ ಬಿಡುಗಡೆ ದಿನಾಂಕ ಜಾಹೀರಾಗಲಿದೆ.

 

Santhosh Balaraj's 'Sathyam' gets censor's appreciation ಜೆಡಿಎಸ್‌ ನಾಯಕ ಸಿ.ಎಸ್.ಪುಟ್ಟರಾಜು ಮಹತ್ವದ ಹೇಳಿಕೆ! ಪೊಲೀಸರಿಗೆ ಪ್ರಜ್ವಲ್‌ ಶರಣು
Share. Facebook Twitter LinkedIn WhatsApp Email

Related Posts

ಖಾಲಿವುಡ್ ನಟ ಅಜಿತ್ ಕುಮಾರ್ ತಾಯಿ ಮೋಹಿನಿ ಮಣಿ ವಿಧಿವಶ | Ajith Kumar Mother No More

1 Min Read

BIG UPDATE: ಬಾಲಿವುಡ್ ನಟ ರಣವೀರ್ ಸಿಂಗ್ ಬ್ಯಾನ್ ಆಗಿಲ್ಲ, ಅದು ‘ನಾನ್-ಕೋಆಪರೇಷನ್’ ಮಾತ್ರ: FWICE ಸ್ಪಷ್ಟನೆ

1 Min Read

ಲವ್ ಸೀಸನ್ಸ್ ಚಿತ್ರದ ‘ಹೊಸದೊಂದು ಪ್ರೀತಿಯಾನ’ ಲಿರಿಕಲ್ ಸಾಂಗ್ ಬಿಡುಗಡೆ!

2 Mins Read
Recent News

BIG NEWS : ಕ್ರಿಮಿನಲ್ ಪ್ರಕರಣದಿಂದ ನೌಕರರು ಖುಲಾಸೆಯಾದರೂ ಬಾಕಿ ವೇತನದ ಹಕ್ಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

BREAKING : ಜಿ.ಪರಮೇಶ್ವರ್ ಗೆ ‘KPCC’ ಅಧ್ಯಕ್ಷ ಸ್ಥಾನ, ಸ್ಪೀಕರ್ ಸ್ಥಾನದ ಆಫರ್ ನೀಡಿದ ಹೈಕಮಾಂಡ್!

ALERT : ಸಾರ್ವಜನಿಕರೇ ಎಚ್ಚರ :ಔಷಧಿ ಬಳಸುವಾಗ ಈ 3 ತಪ್ಪುಗಳನ್ನು ಎಂದಿಗೂ ಮಾಡಬೇಡಿ!

ವಿಶ್ವದ ನಂ. 1 ಸ್ಥಾನಕ್ಕೇರಿದ ಭಾರತದ ಹೆಮ್ಮೆಯ ‘ಮಸಾಲ ಚಾಯ್’!

State News
KARNATAKA

BREAKING : ಜಿ.ಪರಮೇಶ್ವರ್ ಗೆ ‘KPCC’ ಅಧ್ಯಕ್ಷ ಸ್ಥಾನ, ಸ್ಪೀಕರ್ ಸ್ಥಾನದ ಆಫರ್ ನೀಡಿದ ಹೈಕಮಾಂಡ್!

By ಸುರೇಶ್‌ KARNATAKA 2 Mins Read

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಉಪಮುಖ್ಯಮಂತ್ರಿ (ಡಿಸಿಎಂ) ಹೆಚ್ಚುವರಿ ಹುದ್ದೆಗಳ ಸೃಷ್ಟಿ ಮತ್ತು ಹಂಚಿಕೆಯ ಕಗ್ಗಂಟು ದಿನದಿಂದ ದಿನಕ್ಕೆ ಜಟಿಲಗೊಳ್ಳುತ್ತಿದ್ದು, ಇದೀಗ…

ALERT : ಸಾರ್ವಜನಿಕರೇ ಎಚ್ಚರ :ಔಷಧಿ ಬಳಸುವಾಗ ಈ 3 ತಪ್ಪುಗಳನ್ನು ಎಂದಿಗೂ ಮಾಡಬೇಡಿ!

IPL Final | ಚಾಂಪಿಯನ್‌, ರನ್ನರ್‌ಅಪ್‌ ತಂಡಕ್ಕೆ ಸಿಗುವ ಬಹುಮಾನದ ಮೊತ್ತ ಎಷ್ಟು? : ಇಲ್ಲಿದೆ ಸಂಪೂರ್ಣ ಮಾಹಿತಿ!

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ :ಉಚಿತ/ರಿಯಾಯಿತಿ ‘KSRTC’ ಬಸ್ ಪಾಸ್ ವಿತರಣೆ ಆರಂಭ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.