ಬೆಳಗಾವಿ : ಸಂಜಯ್ ರಾವುತ್ ರಾಜಕೀಯ ಲಾಭಕ್ಕಾಗಿ ಬಾಲಿಶ ಹೇಳಿಕೆ ಕೊಟ್ಟಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆ ಕರೆದು ಚರ್ಚಿಸಿದ್ದಾರೆ. ಈ ಪ್ರಕರಣದ ಸುಪ್ರೀಂ ಕೋರ್ಟ್ ನಲ್ಲಿದೆ. ಹಾಗಾಗಿ ಅನಗತ್ಯ ಹೇಳಿಕೆ ನೀಡಿ ಜನರ ಭಾವನೆ ಕೆರಳಿಸಬಾರದು, ರಾವುತ್ ಹೇಳಿಕೆ ಜನರಿಗೆ ತೊಂದರೆಯಾಗಬಾರದು ಎಂದು ಹೇಳಿದರು.
ಬೊಗಳುವ ನಾಯಿ ಕಚ್ಚೋದಿಲ್ಲ, ಕಚ್ಚೋ ನಾಯಿ ಬೊಗಳುವುದಿಲ್ಲ ಎಂದು ಕಂದಾಯ ಸಚಿವ ಅಶೋಕ್ ಶಿವಸೇನೆ ನಾಯಕ ಸಂಜಯ್ ರಾವುತ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.ಸುವರ್ಣಸೌಧದಲ್ಲಿ ಮಾತನಾಡಿದ ಸಚಿವ ಅಶೋಕ್ ರಾವತ್ ನುಗ್ಗುವುದಿಲ್ಲ, ನಾವು ಒಂದಿಂಚೂ ಜಾಗ ಬಿಡಲ್ಲ, ಇವರು ನಮಗೆ ಲೆಕ್ಕಕ್ಕೆ ಇಲ್ಲ ಎಂದು ಕಿಡಿಕಾರಿದರು. ಅಶೋಕ್ ರಾವತ್ ನುಗ್ಗುವುದಿಲ್ಲ, ನಾವು ಒಂದಿಂಚೂ ಜಾಗ ಸಹ ಬಿಟ್ಟು ಕೊಡೋಲ್ಲ, ಬೊಗಳುವ ನಾಯಿ ಕಚ್ಚೋದಿಲ್ಲ, ಕಚ್ಚೋ ನಾಯಿ ಬೊಗಳುವುದಿಲ್ಲ, ಒಂದು ಹಳ್ಳಿಯನ್ನು ಸಹ ಬಿಟ್ಟು ಕೊಡುವ ಮಾತೇ ಇಲ್ಲ ಎಂದು ಅಶೋಕ್ ರಾವತ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಭಾರತಕ್ಕೆ ಚೀನಾ ನುಗ್ಗಿದಂತೆ ಕರ್ನಾಟಕಕ್ಕೆ ನಾವು ನುಗ್ಗುತ್ತೇವೆ ಎಂದು ಶಿವಸೇನಾ ನಾಯಕ ಸಂಜಯ್ ರಾವುತ್ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರ-ಕರ್ನಾಟಕ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ನಮಗೆ ಯಾರ ಅನುಮತಿ ಬೇಕಾಗಿಲ್ಲ , ಭಾರತಕ್ಕೆ ಚೀನಾ ನುಗ್ಗಿದಂತೆ ಬೆಳಗಾವಿಗೆ ನಾವು ನುಗ್ಗುತ್ತೇವೆ ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಉದ್ಧಟತನದ ಹೇಳಿಕೆ ನೀಡಿದ್ದಾರೆ.
SHOCKING : ಉದ್ದೇಶಪೂರ್ವಕವಾಗಿ ಕೋವಿಡ್ ಸೋಂಕಿಗೆ ಒಳಗಾದ ಚೀನಾ ಗಾಯಕಿ ಜೇನ್ ಜಾಂಗ್ | Chinese Singer Jane Zhang