ಚಿಕ್ಕಮಗಳೂರು: ನಟಿ ಮಾನ್ವಿತಾ ಕಾಮತ್ ಮದುವೆ ಇಂದು ಚಿಕ್ಕಮಗಳೂರಿನ ಕಳಸದಲ್ಲಿ ಅದ್ದೂರಿಯಾಗಿ ನೇರವೇರಿದೆ. ಇದೇ ವೇಳೆ ಮದುವೆ ಸಮಾರಂಭದಲ್ಲಿ ರಡು ಕುಟುಂಬದ ಸದಸ್ಯರು ಮತ್ತು ಸಿನಿಮಾ ರಂಗದ ಗಣ್ಯರು ಹಾಗೂ ಆಪ್ತರು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಮ್ಯೂಸಿಕ್ ಪ್ರೊಡ್ಯೂಸರ್ ಆಗಿರುವ ಅರುಣ್ ಕುಮಾರ್ ಅವರು ಮಾನ್ವಿತಾ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಅಂದಹಾಗೆ, ನಿಧನಕ್ಕೂ ಮುನ್ನವೇ ಮಾನ್ವಿತಾ ಅವರ ತಾಯಿ ಸುಜಾತಾ ಅವರು ಅರುಣ್ ತಾಯಿಯೊಂದಿಗೆ ಮಾತನಾಡಿದ್ದರಂತೆ. ನನ್ನ ತಾಯಿಗೆ ನನ್ನ ಮದುವೆಯನ್ನು ನೋಡುವುದು ದೊಡ್ಡ ಕನಸಾಗಿತ್ತು ಅಂತ ಅವರು ಅಗ್ಗಾಗೆ ಹೇಳುತ್ತಿದ್ದರು.