ಕಲಬುರ್ಗಿ : ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಜನಾಕ್ರೋಶ ಯಾತ್ರೆ ಕೈಗೊಂಡಿದ್ದು, ಇಂದು ಕಲ್ಬುರ್ಗಿಯಲ್ಲಿ ಜನಾಕ್ರೋಶ ಯಾತ್ರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಚಲನೆ ನೀಡಿದರು. ಇದೆ ವೇಳೆ ಎನ್ ರವಿಕುಮಾರ್ ಅವರು ಪ್ರಿಯಾಂಕ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಚಿವರ ನೇತೃತ್ವದಲ್ಲಿ ಮರಳು ಮಾಫಿಯಾ ನಡೆಯುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಮರಳು ಮಾಫಿಯ ನಡೆಯುತ್ತಿದೆ. ಚಿತ್ತಾಪುರದಲ್ಲಿ ದೊಡ್ಡ ಮಟ್ಟದ ಮರಳು ಮಾಫಿಯ ನಡೆಯುತ್ತಿದೆ. ಅಲ್ಲಿ ಸರ್ಕಾರಿ ಸಂಸ್ಥೆಗೆ ಮರಳುಗಾರಿಕೆ ಅನುಮತಿ ನೀಡಿತ್ತು. ಆದರೆ ಅಕ್ರಮವನ್ನು ದಾರಿಗೆ ನಡೆಯುತ್ತಿದೆ. ಅಕ್ರಮ ಮರಳುಗಾರಿಕೆ ವಿರುದ್ಧ ನಾವು ಹೋರಾಟ ಮಾಡುತ್ತೇವೆ.
ಕಾಂಗ್ರೆಸ್ನವರು ಧಿಕ್ಕಾರ ಕೂಗಿದರೆ ನಾವೇನು ಓಡಿ ಹೋಗಲ್ಲ. ನಮ್ಮ ಹೋರಾಟವನ್ನು ಧಾರ್ಮಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಐಟಿವಿಟಿ ಯುವರ್ ಪ್ರಿಯಾಂಕ್ ಖರ್ಗೆ ವಿತಂಡ ವಾದ ಮಾಡದೆ ಈ ಭಾಗದ ಸಂಪತ್ತು ಉಳಿಸುವ ಕೆಲಸ ಮಾಡಲಿ ಎಂದು ಕಲ್ಬುರ್ಗಿಯಲ್ಲಿ ಬಿಜೆಪಿ ಎಂಎಲ್ಸಿ ಎನ್. ರವಿಕುಮಾರ್ ಹೇಳಿಕೆ ನೀಡಿದರು.