ನವದೆಹಲಿ: ಸಮಾಜವಾದಿ ಪಕ್ಷದ ಸಂಸದ ಶಫಿಕುರ್ ರೆಹಮಾನ್ ಬಾರ್ಕ್ (94) ದೀರ್ಘಕಾಲದ ಅನಾರೋಗ್ಯದ ನಂತರ ನಿಧನರಾದರು. ಬಾರ್ಕ್ ಅವರು ಸಂಸತ್ತಿನ ಅತ್ಯಂತ ಹಿರಿಯ ಸಂಸದರಾಗಿದ್ದರು. ಅವರು ಮೊರಾದಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಸಮಾಜವಾದಿ ಪಕ್ಷದ ಸಂಭಾಲ್ ಸಂಸದ ಶಫಿಕುರ್ ರೆಹಮಾನ್ ಬಾರ್ಕ್ ದೀರ್ಘಕಾಲದ ಅನಾರೋಗ್ಯದ ನಂತರ ಮಂಗಳವಾರ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. 2024 ರ ಲೋಕಸಭಾ ಚುನಾವಣೆಗೆ ಸಮಾಜವಾದಿ ಪಕ್ಷವು ಸಂಭಾಲ್ನಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು.
ಅವರು 5 ಬಾರಿ ಸಂಸದರಾಗಿದ್ದಾರೆ. ಫೆಬ್ರವರಿ 21 ರಂದು ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಮೊರಾದಾಬಾದ್ನ ಖಾಸಗಿ ಆಸ್ಪತ್ರೆಗೆ ತೆರಳಿ ಸಂಸದರ ಸ್ಥಿತಿಯ ಬಗ್ಗೆ ವಿಚಾರಿಸಿದ್ದರು.
समाजवादी पार्टी के वरिष्ठ नेता, कई बार के सांसद जनाब शफीकुर्रहमान बर्क साहब का इंतकाल, अत्यंत दु:खद।
उनकी आत्मा को शांति दे भगवान।
शोकाकुल परिजनों को यह असीम दु:ख सहने का संबल प्राप्त हो।
भावभीनी श्रद्धांजलि ! pic.twitter.com/AJwV2Y795s
— Akhilesh Yadav (@yadavakhilesh) February 27, 2024
ಎಸ್ಪಿ ಸಂಸದ ಕಳೆದ ಒಂದು ತಿಂಗಳಿನಿಂದ ಮೊರಾದಾಬಾದ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಮಾಜವಾದಿ ಪಕ್ಷದ ಹಿರಿಯ ನಾಯಕ ಮತ್ತು ಹಲವಾರು ಬಾರಿ ಸಂಸದರಾಗಿದ್ದ ಶಫಿಕುರ್ ರೆಹಮಾನ್ ಬಾರ್ಕ್ ಸಾಹೇಬ್ ಅವರ ನಿಧನವು ಅತ್ಯಂತ ದುಃಖಕರವಾಗಿದೆ ಎಂದು ಅಖಿಲೇಶ್ ಯಾದವ್ ಸಂತಾಪ ಸೂಚಿಸಿದ್ದಾರೆ.
ವಿವಾದಾತ್ಮಕ ನಾಯಕ ಎಂದೇ ಹೆಸರಾಗಿದ್ದಂತ ಅವರು, ಯಾವಾಗಲೂ ತನ್ನ ಹೇಳಿಕೆಗಳಿಗಾಗಿ ಸುದ್ದಿಯಾಗುತ್ತಿದ್ದರು. ಕೋವಿಡ್ ಬಗ್ಗೆ ಕೇಂದ್ರವು “ಪ್ರಚಾರ” ದಲ್ಲಿ ತೊಡಗಿದೆ ಎಂದು ಬಾರ್ಕ್ ಆರೋಪಿಸಿದ್ದರು.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯನ್ನು ತಡೆಯಲು ಬಿಜೆಪಿ “ರಾಜಕೀಯ ಕರೋನಾ” ವನ್ನು ಬಳಸುತ್ತಿದೆ ಎಂದಿದ್ದರು. ದರೋಡೆಕೋರ ಅತೀಕ್ ಅಹ್ಮದ್ ಮತ್ತು ಸಹೋದರ ಅಶ್ರಫ್ ಹತ್ಯೆಯಾದ ನಂತರ ಅವರಿಗೆ ನ್ಯಾಯ ಸಿಗಲಿಲ್ಲ ಎಂದು ಬಾರ್ಕ್ ಹೇಳಿದ್ದರು.
BREAKING: ರಾಜ್ಯಸಭೆ 4 ಸ್ಥಾನಗಳಿಗೆ ‘ಮತದಾನ’ ಪ್ರಕ್ರಿಯೆ ಆರಂಭ: ಮೊದಲು ಮತ ಚಲಾಯಿಸಿದ ‘ಎಸ್.ಸುರೇಶ್ ಕುಮಾರ್’