ಕೆಎನ್ಎನ್ಡಿಜಿಟಲ್ ಡೆಸ್ಕ್ : ಹೆಚ್ಚು ಉಪ್ಪಷ್ಟೇ ಅಲ್ಲ ಕಡಿಮೆ ಉಪ್ಪು ತಿನ್ನೋದು ಅಪಾಯಕಾರಿ. ಯಾಕಂದ್ರೆ, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಸೋಡಿಯಂ ಮತ್ತು ಬ್ರೋಮೈಡ್ ಉಪ್ಪಿನಲ್ಲಿ ಕಂಡುಬರುತ್ತದೆ ಎಂದು ತಿಳಿದಿರಬೇಕು. ಹಾಗಾಗಿ ದೇಹವನ್ನ ಆರೋಗ್ಯಕರವಾಗಿಡಲು ಈ ಅಂಶಗಳು ಬೇಕಾಗುತ್ತವೆ. ಹಾಗಂತ, ಹೆಚ್ಚು ಉಪ್ಪು ತಿನ್ನುವ ಅಭ್ಯಾಸವಿದ್ದರೆ ಅದು ತುಂಬಾ ಹಾನಿಕಾರಕವಾಗಬಹುದು.
ರುಚಿಗೆ ತಕ್ಕಷ್ಟು ಉಪ್ಪು ತಿನ್ನಿ.!
ಹೆಚ್ಚು ಉಪ್ಪನ್ನ ತಿನ್ನುವುದು ಹೇಗೆ ಸರಿಯಲ್ಲವೋ ಹಾಗೆಯೇ, ಕಡಿಮೆ ಉಪ್ಪನ್ನ ತಿನ್ನುವುದು ಸಹ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಅನೇಕ ರೋಗಗಳನ್ನ ಹೆಚ್ಚಿಸುತ್ತಿದೆ, ಇದು ಕಳವಳಕಾರಿ ವಿಷಯವಾಗಿದೆ.
ಉಪ್ಪಿನ ಪ್ರಯೋಜನಗಳು ನಿಮಗೆ ತಿಳಿದಿರಲಿ.!
ಡಬ್ಲ್ಯುಎಚ್ಒ ವರದಿಯ ಪ್ರಕಾರ, ಹೆಚ್ಚು ಉಪ್ಪನ್ನ ತಿನ್ನುವುದು ಹೃದಯಕ್ಕೆ ದೊಡ್ಡ ಅಪಾಯವಾಗಿದೆ. ಇದು ಹೃದಯವನ್ನ ದುರ್ಬಲಗೊಳಿಸುವುದಲ್ಲದೇ, ಹೃದಯಾಘಾತಕ್ಕೂ ಕಾರಣವಾಗಬಹುದು.
ಉಪ್ಪು ನಿಮ್ಮ ಜೀವನವನ್ನ ಬದಲಾಯಿಸಬಹುದು.!
ಹಾಗಾಗಿ ಹೆಚ್ಚು ಉಪ್ಪು ಅಥವಾ ಕಡಿಮೆ ಯಾವುದೂ ದೇಹಕ್ಕೆ ಒಳ್ಳೆಯದಲ್ಲ. ಇದು ಎರಡೂ ಸಂದರ್ಭಗಳಲ್ಲಿ ದೇಹವನ್ನ ಹಾನಿಗೊಳಿಸುತ್ತದೆ.