ಬೆಂಗಳೂರು : ಈ ಬಾರಿಯ ದೀಪಾವಳಿಯಲ್ಲಿ ಪಟಾಕಿ ಮಾರಾಟಕ್ಕೂ ಹಾಗೂ ಪಟಾಕಿ ಸಿಡಿಸುವ ಸಾರ್ವಜನಿಕರಿಗೂ ಕೂಡ ಹಲವು ನಿಯಮಗಳು ಅನ್ವಯವಾಗುತ್ತವೆ. ಆದರೆ ಬೆಂಗಳೂರಿನಲ್ಲಿ ಪಟಾಕಿ ಮಾರಾಟಗಾರರಿಂದ ನಿಯಮ ಉಲ್ಲಂಘನೆಯಾಗಿದ್ದು, ಈ ಕುರಿತಂತೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕರೂ ಕೂಡ ಅವರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ ವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹೌದು ಬೆಂಗಳೂರಿನಲ್ಲಿ ನಿಯಮಗಳನ್ನು ಮೀರಿ ಪಟಾಕಿ ಮಾರಾಟ ಮಾಡಲಾಗಿದೆ. ದಾಸರಹಳಿಯ ವಲಯ ಬಿಬಿಎಂಪಿ ಮೈದಾನದಲ್ಲಿ ಪಟಾಕಿ ಮಾರಾಟದ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಪಟಾಕಿ ಬಾಕ್ಸ್ ಮೇಲೆ ಸಿಎಸ್ಐಆರ್ ಮಾರ್ಕ್ ಇಲ್ಲ, ಕ್ಯೂಆರ್ ಕೋಡ್ ಇಲ್ಲ ಅಲ್ಲದೆ ಕಡ್ಡಾಯವಾಗಿ ಹಸಿರು ಪಟಾಕಿ ಮಾರಾಟ ನಿಯಮ ಸಹ ಉಲ್ಲಂಘನೆ ಮಾಡಲಾಗಿದೆ.
ಇನ್ನು ಮಳಿಗೆಗಳಲ್ಲಿ ಬೆಂಕಿ ನಂದಿಸುವ ಯಾವುದೇ ಸಾಧನೆಗಳು ಇಲ್ಲದೆ ಪಟಾಕಿ ಮಾರಾಟ ಮಾಡಲಾಗುತ್ತಿದೆ. ದಾಸರಹಳ್ಳಿ ಪಟಾಕಿ ವರ್ತಕರ ಸಂಘದಿಂದ ನಿಯಮಗಳ ಉಲ್ಲಂಘನೆಯಾಗಿದೆ. ಈ ವೇಳೆ ಪಟಾಕಿ ಮಾರಾಟ ಮಳಿಗೆಯಲ್ಲಿ ಡಿಸಿಪಿಗಳು ಪರಿಶೀಲನೆ ಕಡ್ಡಾಯವಿದ್ದು, ನಿಯಮ ಉಲ್ಲಂಘಿಸಿದರು ಕೂಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿಲ್ಲ. ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಹಾಗೂ ಪೊಲೀಸರಿಂದ ನಿರ್ಲಕ್ಷ ವಹಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.