ಬೆಂಗಳೂರು : ರಾಜ್ಯದ ಕೈದಿಗಳ ವೇತನ 650 ರೂ.ಗೆ ಹೆಚ್ಚಳ ಮಾಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಅಧಿವೇಶದ ಹಿನ್ನೆಲೆ ಬೆಳಗಾವಿಯಲ್ಲಿರುವ ಹಿಂಡಲಗಾ ಜೈಲಿಗೆ ಗೃಹಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ನಂತರ ಮಾತನಾಡಿದ ಸಚಿವರು ಜೈಲು ಕೈದಿಗಳಿಗೆ ಕನಿಷ್ಠ ವೇತನ ಹೆಚ್ಚಳ ಮಾಡಿದ್ದೇವೆ. ಮೊದಲು 280 ರೂಪಾಯಿ ಗರಿಷ್ಠ ವಿತ್ತು. ಈಗ 600 ರಿಂದ 650ರವರೆಗೂ ಸಂಬಳವನ್ನ ಹೆಚ್ಚಿಸಿದ್ದೇವೆ ಎಂದರು. ಎಲ್ಲಿರಿಗೂ ಇಷ್ಟು ಸಂಬಳ ಕೊಡಲ್ಲ ಶಿಕ್ಷೆಯಾದವರಿಗೆ, ಸ್ಕಿಲ್ ಡೆವಲಪರ್ಗೆ ಸಂಬಳ ಕೊಡುತ್ತಿದ್ದೇವೆ. ಶಿಕ್ಷೆ ಮುಗಿದ ಬಳಿಕ ಅವರ ಜೀವನಕ್ಕೆ ಸಹಾಯವಾಗಲಿ ಎಂದು ಕೊಡುತ್ತಿದ್ದೇವೆ ಎಂದು ಹೇಳಿದರು. ಕೈದಿಗಳು ಹೇಗಿದ್ದಾರೆ, ನಟೋರಿಯಸ್ ಕೈದಿಗಳನ್ನ ಹೇಗಿಟ್ಟಿದ್ದಾರೆ ಎನ್ನುವುದನ್ನ ಪರಿಶೀಲನೆ ಮಾಡಿದ್ದೇನೆ ಎಂದು ಹೇಳಿದರು.
ಬೆಳಗಾವಿಯಲ್ಲಿರುವ ಹಿಂಡಲಗಾ ಜೈಲಿಗೆ ಗೃಹಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಫೋಟೋವನ್ನು ಅನಾವರಣಗೊಳಿಸಿದ್ದಾರೆ. ಸಾವರ್ಕರ್ ಫೋಟೋವನ್ನು ಅನಾವರಣಗೊಳಿಸಿದ ಆರಗ ಜ್ಞಾನೇಂದ್ರ , ಬಿಸಿ ನಾನಾಗೇಶ್ , ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಉಪಸ್ಥಿತಿಯಲ್ಲಿ ಸಾವರ್ಕರ್ ಫೋಟೋವನ್ನು ಅನಾವರಣಗೊಳಿಸಿದ್ದಾರೆ.
BREAKING NEWS: ಲಂಚ ಬೇಡಿಕೆ ಪ್ರಕರಣ; ಹರಿಹರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ ಲೋಕಾಯುಕ್ತ ಬಲೆಗೆ
BREAKING NEWS: ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಫೋಟೋ ಅನಾವರಣ; ಖೈದಿಗಳ ಜತೆ ಗೃಹಸಚಿವರ ಸಂವಾದ