ಶಿವಮೊಗ್ಗ : ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು 2023-24 ರ ಶೈಕ್ಷಣಿಕ ವರ್ಷಕ್ಕೆ 6 ಮತ್ತು 9 ನೇ ತರಗತಿಗಳ ಪ್ರವೇಶಕ್ಕಾಗಿ ದೇಶಾದ್ಯಂತ 33 ಸೈನಿಕ ಶಾಲೆಗಳಲ್ಲಿ ಎಐಎಸ್ಎಸ್ಇಇ-2023 ಪ್ರವೇಶ ಪರೀಕ್ಷೆಗಳನ್ನು ನಡೆಸಲಿದೆ.
ಸೈನಿಕ ಶಾಲೆಗಳು ಇಂಗ್ಲಿಷ್ ಮಾಧ್ಯಮ ವಸತಿ ಶಾಲೆಗಳಾಗಿದ್ದು ಸಿಬಿಎಸ್ಸಿ ಅಂಗ ಸಂಸ್ಥೆಗಳಾಗಿವೆ. ಮತ್ತು ಸೈನಿಕ ಶಾಲಾ ಸೊಸೈಟಿಯಿಂದ(ರಕ್ಷಣಾ ಸಚಿವಾಲಯದ ಅಡಿಯಲ್ಲಿ) ಕಾರ್ಯ ನಿರ್ವಹಿಸುತ್ತಿವೆ. ಈ ಶಾಲೆಗಳ ಅಧಿಕಾರಿಗಳನ್ನಾಗಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಇಂಡಿಯನ್ ನೇವಲ್ ಅಕಾಡೆಮಿ ಹಾಗೂ ಇತರೆ ಟ್ರೈನಿಂಗ್ ಅಕಾಡೆಮಿಗಳಿಗಾಗಿ ಅಭ್ಯರ್ಥಿಗಳನ್ನು ತಯಾರು ಮಾಡುವವು.
2023 ರ ಜ.08 ರಂದು ಪರೀಕ್ಷೆ ನಡೆಯಲಿದೆ. ಬಹು ಆಯ್ಕೆ ಪ್ರಶ್ನೆಗಳುಳ್ಳ ಪೆನ್ ಪೇಪರ್(ಓಎಂಆರ್ ಶೀಟ್ ಆಧಾರಿತ)ಮಾದರಿ ಪರೀಕ್ಷೆ ನಡೆಯಲಿದೆ. ಮಾಹಿತಿ ಕೈಪಿಡಿಯಲ್ಲಿ ಪರೀಕ್ಷೆ ನಡೆಯುವ ನಗರಗಳ ವಿವರಗಳಿವೆ. 6ನೇ ತರಗತಿಗೆ ಪ್ರವೇಶ ಪಡೆಯಲು ದಿ: 31-03-2023 ರಂತೆ 10 ಮತ್ತು 12 ವರ್ಷಗಳ ಅಂದರೆ ಅಭ್ಯರ್ಥಿ 01 ಏಪ್ರಿಲ್ 2011 ಮತ್ತು 31 ಮಾರ್ಚ್ 2013 ರ ನಡುವೆ ಜನಿಸಿರಬೇಕು. 9ನೇ ತರಗತಿಗೆ ಪ್ರವೇಶ ಪಡೆಯಲು ದಿ:31-03-2023 ರಂತೆ 13 ರಿಂದ 15 ವರ್ಷಗಳ ಅಂದರೆ ಅಭ್ಯರ್ಥಿ 01 ಏಪ್ರಿಲ್ 2008 ಮತ್ತು 31 ಮಾರ್ಚ್ 2010 ರ ನಡುವೆ ಜನಿಸಿರಬೇಕು. ಪರೀಕ್ಷಾ ಶುಲ್ಕ ಎಸ್ಸಿ/ಎಸ್ಟಿ ರೂ.500/-, ಸಾಮಾನ್ಯ/ಡಿಇಎಫ್/ಓಬಿಸಿ-ಎನ್ಸಿಎಲ್ ಗೆ ರೂ.650 ಇರುತ್ತದೆ.
ಪರೀಕ್ಷೆಗೆ ಸಂಬಂಧಿಸಿದ ಯೋಜನೆ, ಕಾಲಾವಧಿ, ಮಾಧ್ಯಮ, ಪರೀಕ್ಷೆಯ ಪಠ್ಯ ಕ್ರಮ, ಸೈನಿಕ ಶಾಲೆಗಳ, ಹೊಸ ಸೈನಿಕ ಶಾಲೆಗಳ ಪಟ್ಟಿ ಹಾಗೂ ತಾತ್ಕಾಲಿಕ ಪ್ರವೇಶ, ಸೀಟುಗಳ ಮೀಸಲು ಪರೀಕ್ಷಾ ನಗರಗಳು, ಕೇಂದ್ರಗಳು, ತೇರ್ಗಡೆ ಅವಶ್ಯಕತೆಗಳು, ಮುಖ್ಯ ದಿನಾಂಕಗಳು ಇತ್ಯಾದಿಗಳನ್ನು ವೆಬ್ಸೈಟ್ www.nta.ac.in/https://aissee.nta.nic.ac.in ರಲ್ಲಿರುವ ಮಾಹಿತಿ ಕೈಪಿಡಿಯಲ್ಲಿ ನೋಡಬಹುದು. 2023 ರ ಎಐಎಸ್ಎಸ್ಇಇ ಪರೀಕ್ಷೆಗೆ ಪ್ರವೇಶ ಪಡೆಯಲು ಆನ್ಲೈನ್ https://aissee.nta.nic.ac.in ಮೂಲಕ ನವೆಂಬರ್ 30 ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.