ಶಿವಮೊಗ್ಗ: ಸಾಗರದ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ನವೆಂಬರ್.30ರಂದು ಚುನಾವಣೆ ನಿಗದಿಯಾಗಿದೆ. ಈ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು, ಇಂದು ಸರದಿ ಸಾಲಿನಲ್ಲಿ ನಿಂತು ಆಕಾಂಕ್ಷಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆಗೆ ಸಂಬಂಧಿಸಿದಂತೆ ಚುನಾವಣೆ ಘೋಷಣೆಯಾಗಿದೆ. ನವೆಂಬರ್.19ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು, ನವೆಂಬರ್.24 ಕೊನೆಯ ದಿನವಾಗಿದೆ.

ನಾಮಪತ್ರ ಸಲ್ಲಿಸಿದ ಪುರುಷೋತ್ತಮ್(ಪುಚಿ)
ಇಂದು ಆಕಾಂಕ್ಷಿಗಳಾದಂತ ಪುರುಷೋತ್ತಮ್(ಪುಚಿ), ಜಯರಾಂ, ನಾಗರಾಜ್ ಪವಿತ್ರ, ಮಂಜುನಾಥ್(ಕುರಿ), ಶಂಕರ್ ಅಳವೇ ಕೋಡಿ, ಸುಧೀಂದ್ರ ಗುಡಿಗಾರ್ ಡಿಎಸ್ ಸೇರಿದಂತೆ ಇತರರು ಸಾಲುಗಟ್ಟಿ ನಿಂತು ಅವರು ಸಾಮಾನ್ಯ ಅಭ್ಯರ್ಥಿಗಳ ಸ್ಥಾನಕ್ಕೆ ನಾಮಪತ್ರವನ್ನು ಸಲ್ಲಿಸಿದರು.
ಮೊದಲ ದಿನ 7, ನಿನ್ನೆ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ
ದಿನಾಂಕ 19-11-2025ರಂದು ನಾಮಪತ್ರ ಸಲ್ಲಿಕೆ ಆರಂಭದ ಮೊದಲ ದಿನವೇ ಸಾಮಾನ್ಯ ಸ್ಥಾನಕ್ಕೆ ನಾರಾಯಣ ಎನ್, ಶಶಿಕಾಂತ್ ಎಂಎಸ್, ಅಶೋಕ.ಎಸ್, ಗಂಗಾಧರ ಜಂಬಿಗೆ, ಎಸ್ ವಿ ಕೃಷ್ಣಮೂರ್ತಿ, ಸುಂದರ್ ಸಿಂಗ್ ಹಾಗೂ ಉಪ್ಪಾರ ಸಮಾಜದಿಂದ ಬಸವರಾಜ್ ಆರ್ ಉಪ್ಪಾರ್ ನಾಮಪತ್ರ ಸಲ್ಲಿಸಿದ್ದಾರೆ.
ದಿನಾಂಕ 20-11-2025ರಂದು ಎರಡನೇ ದಿನದಂದು ಸಾಮಾನ್ಯ ಸ್ಥಾನಕ್ಕೆ ಸತ್ಯನಾರಾಯಣ ಡಿಎಸ್, ಹಾಲಿ ಅಧ್ಯಕ್ಷರಾದಂತ ನಾಗೇಂದ್ರ ಕೆ.ಎನ್, ಪ್ರಧಾನ ಕಾರ್ಯದರ್ಶಿಯಾಗಿದ್ದಂತ ಬಿ ಗಿರಿಧರ್ ರಾವ್ ಹಾಗೂ ಕುರುಬ ಸಮಾಜದಿಂದ ಹೆಚ್.ಎಲ್ ಶ್ರೀಧರ ನಾಮಪತ್ರವನ್ನು ಸಲ್ಲಿಸಿದ್ದಾರೆ.

117ಕ್ಕೂ ಹೆಚ್ಚು ಅರ್ಜಿ ವಿತರಣೆ
ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ಚುನಾವಣೆ ಘೋಷಣೆಯಾದ ಬಳಿಕ ಪ್ರಕ್ರಿಯೆ ಗರಿಗೆದರಿದೆ. ಆಕಾಂಕ್ಷಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ನಾಮಪತ್ರ ಸಲ್ಲಿಕೆ ಆರಂಭವಾದ ಮೂರು ದಿನಗಳಲ್ಲಿ ಬರೋಬ್ಬರಿ 117ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸೋದಕ್ಕೆ ಆಕಾಂಕ್ಷಿಗಳು ಪಡೆದಿದ್ದಾರೆ. ದಿನಾಂಕ 24-11-2025ರ ನಾಮಪತ್ರ ಸಲ್ಲಿಕೆಯ ಕೊನೆಯ ದಿನದ ವೇಳೆಗೆ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

450ಕ್ಕೂ ಹೆಚ್ಚು ಸದಸ್ಯರು
ಅಂದಹಾಗೇ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದಲ್ಲಿ ಈವರೆಗೆ 481ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಇವರಲ್ಲಿ ಕೆಲವರು ಮರಣ ಹೊಂದಿದ್ದಾರೆ. ಅವರನ್ನು ಹೊರತು ಪಡಿಸಿದರೇ 450ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದೆ. ಹೀಗಾಗಿ ನಾಮಪತ್ರ ಸಲ್ಲಿಸಿರುವಂತ ಅಭ್ಯರ್ಥಿಗಳು ಈಗಾಗಲೇ ಚುನಾವಣಾ ಪ್ರಚಾರ ಕೂಡ ಆರಂಭಿಸಿರುವುದಾಗಿ ತಿಳಿದು ಬಂದಿದೆ.
ಹೀಗಿದೆ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನ’ದ ಚುನಾವಣಾ ವೇಳಾಪಟ್ಟಿ
- ದಿನಾಂಕ 19-11-2025ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಉಮೇದುವಾರಿಕೆ ಹಿಂಪಡೆಯಲು ದಿನಾಂಕ 24-11-2025 ಕೊನೆಯ ದಿನವಾಗಿದೆ.
- ದಿನಾಂಕ 25-11-2025ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
- ದಿನಾಂಕ 26-11-2025ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
- ದಿನಾಂಕ 26-11-2025ರಂದು ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿ ಪ್ರಕಟ
- ದಿನಾಂಕ 26-11-2025ರಂದು ಸಂಜೆ 4 ಗಂಟೆಗೆ ಕ್ರಮಬದ್ಧ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ಪಟ್ಟಿ ಪ್ರಕಟ
- ದಿನಾಂಕ 26-11-2025ರಂದು ಸಂಜೆ 4 ಗಂಟೆಗೆ ಅಭ್ಯರ್ಥಿ ಆಪೇಕ್ಷಿಸಿದಲ್ಲಿ ಚಿಹ್ನೆಗಳನ್ನು ಹಂಚಿಕೆ.
- ದಿನಾಂಕ 26-11-2025ರಂದು ಸಂಜೆ 4 ಗಂಟೆಗೆ ಚಿಹ್ನೆ ಸಹಿತ ಕ್ರಮಬದ್ಧವಾಗಿ ಸ್ಪರ್ಧೆಯಲ್ಲಿರುವಂತ ಅಭ್ಯರ್ಥಿಗಳ ಪಟ್ಟಿ ಪ್ರಕಟ
- ದಿನಾಂಕ 30-11-2025ರಂದು ಸಾಗರದ ವಿನೋಬನಗರದಲ್ಲಿರುವಂತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 4 ಗಂಟೆಯವರೆಗೆ ಮತದಾನ ನಿಗದಿ.
- ದಿನಾಂಕ 30-11-2025ರಂದು ಮತದಾನ ಮುಕ್ತಾಯದ ನಂತ್ರ ಮತಏಣಿಕೆ ಮಾಡಿ, ಫಲಿತಾಂಶ ಪ್ರಕಟ
ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು
ಸಾಗರದ ಕಲ್ಮನೆಯಲ್ಲಿ ‘ರಾಜಕೀಯ ಜಿದ್ದಿ’ಗೆ ಗೂಡು ಅಂಗಡಿ ಧ್ವಂಸ: ಇದು ಕಾನೂನು ಪಾಲಿಸಬೇಕಾದವರೇ, ಮೀರಿದ ಸುದ್ದಿ








