ಶಿವಮೊಗ್ಗ: 2024-25ನೇ ಸಾಲಿನಲ್ಲಿ ಆಪ್ಸ್ ಕೋಸ್ ಗೆ 4.20 ಕೋಟಿ ಲಾಭಾಂಶ ಬಂದಿದೆ. ಅಡಿಕೆ ಬೆಳೆಗಾರರ ಹಿತಕಾಯಲು ಸಂಘವು ಸಿದ್ಧವಿದೆ. ಯಾವುದೇ ಬೆಳೆಗಾರರು ಆತಂಕಕ್ಕೆ ಒಳಗಾಗಬಾರದು ಎಂಬುದಾಗಿ ಅಧ್ಯಕ್ಷ ಬಿ.ಎ ಇಂದೂದರ ಬೇಸೂರು ತಿಳಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಭದ್ರಕಾಳಿ ಸಭಾಭವನದಲ್ಲಿ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಾಗರ, ಹೊಸನಗರ, ಸೊರಬ ತಾಲ್ಲೂಕಿನ ನಮ್ಮ ಸದಸ್ಯರು ಇಂದು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಬಾರಿ 4.20 ಕೋಟಿ ಲಾಭ ಗಳಿಸಿದೆ. ಎಲೆಚುಕ್ಕಿ, ಕೊಳೆರೋಗ ಬಂದು ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಈಡಾಗಿದ್ದಾರೆ. ಅವರೊಂದಿಗೆ ಆಪ್ಸ್ ಕೋಸ್ ಇದೆ ಎಂಬುದಾಗಿ ಧೈರ್ಯ ತುಂಬಿದರು.
ಕೃಷಿ ವಲಯದಲ್ಲಿ ರೈತರಿಗೆ ಅನುಕೂಲವಾಗುವಂತ ಎಲ್ಲಾ ವಸ್ತುಗಳನ್ನು ನೀಡಲಾಗುತ್ತಿದೆ. 2.50 ಕೋಟಿ ಮೌಲ್ಯದ ಎಲ್ಲಾ ಕೃಷಿ ಉಪಕರಣಗಳನ್ನು ಮಾರಾಟ ಮಾಡಲಾಗುತ್ತಿದೆ. ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ನಾವು ರೈತರಿಗಾಗಿ ಅನೇಕ ಸವಲತ್ತುಗಳನ್ನು ನೀಡಲಾಗುತ್ತಿದೆ. ಅಪಘಾತ ವಿಮೆ ಮಾಡಲಾಗುತ್ತಿದೆ. ಅಡಿಕೆ ಕೊಯ್ಲಿನ ವೇಳೆಯಲ್ಲಿ ಅಪಘಾತಕ್ಕೆ ಒಳಗಾದವರಿಗೆ ನೆರವಾಗಲಿದೆ ಎಂದರು.

ಹೊಸನಗರದ ಎಪಿಎಂಸಿ ಒಳಗೆ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ. ರೈತರಿಂದ ಅಡಿಕೆ ಖರೀದಿಗೆ ಸಂಬಂಧಿಸಿದಂತೆ ಗೋಡೌನ್ ಕೂಡ ನಿರ್ಮಾಣ ಮಾಡಲಾಗುತ್ತಿದೆ. ಸಾಗರದಲ್ಲೂ ಗೋಡೌನ್ ನಿರ್ಮಾಣ ಮಾಡೋದಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.
1 ಲಕ್ಷದ 6000 ಚೀಲ ಅಡಿಕೆಯನ್ನು ಸಂಗ್ರಹಿಸಲಾಗಿದೆ. ತುಮರಿ ವ್ಯಾಪ್ತಿಯಲ್ಲಿ 10,000 ಮೂಟೆ ಖರೀದಿಸಿ ಸಂಗ್ರಹಿಸಲಾಗಿದೆ. ನಿಟ್ಟೂರಲ್ಲಿ 13,000 ಚೀಲ, ಹೊಸನಗರದಲ್ಲಿ 17,000 ಸೇರಿದಂತೆ ಒಟ್ಟು 1 ಲಕ್ಷದ 6,000 ಚೀಲ ಅಡಿಕೆಯನ್ನು ಖರೀದಿಸಿ ಸಂಗ್ರಹಿಸಲಾಗಿದೆ ಎಂದರು.
ಇಂದಿನ ವಾರ್ಷಿಕ ಮಹಾಸಭೆಯಲ್ಲಿ ಮಹಾಬಲರಾವ್ ಅವರ ವಿಚಾರವಾಗಿ ಸುದೀರ್ಘವಾಗಿ ಚರ್ಚಿಸಲಾಗಿದೆ. ಆಪ್ ಕೋಸ್ ಸದಸ್ಯರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಅದನ್ನು ಕಾನೂನಾತ್ಮಕವಾಗಿ ಬಗೆ ಹರಿಸಲು ನಿರ್ಧರಿಸಲಾಗಿದೆ. ಕೇಸ್ ಇಲ್ಲಿಗೆ ಮುಕ್ತಾಯಗೊಳಿಸಲು ಮಹಾಸಭೆಯಲ್ಲಿ ಒಮ್ಮತದ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಾಗರ ಅಡಿಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘ ನಿಯಮಿತದ ಉಪಾಧ್ಯಕ್ಷ ಎ ಓ ರಾಮಚಂದ್ರ ಅಂಬ್ಲಾಡಿ, ಸಾಗರ ತಾಲ್ಲೂಕು ಎ ತರಗತಿ ಕ್ಷೇತ್ರದ ನಿರ್ದೇಶಕರಾದಂತ ಕೆ.ಎಂ ಸೂರ್ಯನಾರಾಯಣ ಖಂಡಿಕಾ, ಕೆ ಎಸ್ ಸುಬ್ಬರಾವ್ ಕೇಡಲಸರ, ರಮೇಶ್ ಎಂ.ಬಿ ಮೇಲಿನಮನೆ, ಸುರೇಶ್ ವೈ.ಎನ್ ಈಳಿ, ಹೊಸನಗರ ತಾಲ್ಲೂಕು ಎ ತರಗತಿ ಕ್ಷೇತ್ರದ ನಿರ್ದೇಶಕರಾದಂತ ಹೆಚ್.ಬಿ ಕಲ್ಯಾಣಪ್ಪಗೌಡ ಹೆಬ್ಬೈಲು, ಹೆಚ್.ಓಮಕೇಶ್ ಹರತಾಳು, ಸೊರಬ ತಾಲ್ಲೂಕು ಎ ತರಗತಿ ಕ್ಷೇತ್ರದ ನಿರ್ದೇಶಕರಾದಂತ ಹೆಚ್.ಕೆ ರಾಘವೇಂದ್ರ ಹೊಡಬಟ್ಟೆ, ಕೃಷ್ಣಮೂರ್ತಿ ಟಿ ಆರ್ ದೂಗೂರು, ಮಹಿಳಾ ಮೀಸಲು ಕ್ಷೇತ್ರದ ಎಎಸ್ ನಾಗರತ್ನ ನೀಚಡಿ, ಭಾರತಿ ಎಂ.ಡಿ ಕರ್ಕಿಕೊಪ್ಪ, ಹಿಂದುಳಿದ ವರ್ಗ ಮೀಸಲಾತಿಯ ಸತ್ಯನಾರಾಯಮ ಕೆಳದಿ, ನಂದನಕುಮಾರ ಗೋಳಿಬೀಡು, ಪಶಿಷ್ಟ ಜಾತಿ ಮೀಸಲು ಕ್ಷೇತ್ರದ ಎಕೆ ಚೌಡಪ್ಪ ಹುಲಿಮನೆ, ಬಿ ತರಗತಿ ಸಹಕಾರ ಸಂಘಗಳ ಕ್ಷೇತ್ರದ ನಿರ್ದೇಶಕ ಕೆ ಎಸ್ ಭಾಸ್ಕರ ಭಟ್ಟ ಖಂಡಿಕಾ, ಆಪ್ ಕೋಸ್ ಪ್ರಭಾರ ಕಾರ್ಯದರ್ಶಿ ಹೆಚ್.ಎನ್ ಲಂಬೋಧರ ಸೇರಿದಂತೆ ಸದಸ್ಯರು ಹಾಜರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ.., ಸಂಪಾದಕರು
ಸೊರಬ ತಾಲ್ಲೂಕಿನ ರಸ್ತೆಗಳಲ್ಲಿ ‘ಗುಂಡಿ ದರ್ಬಾರ್’: ಮುಚ್ಚುವಂತೆ ಆಗ್ರಹಿಸಿ ‘ಬಿಜೆಪಿ ಪ್ರತಿಭಟನೆ’, ಭಾರೀ ಆಕ್ರೋಶ
ಸಾಗರದಲ್ಲಿ ರಸ್ತೆ ಗುಂಡಿ ಮುಚ್ಚುವಂತೆ ಆಗ್ರಹಿಸಿ ಬಿಜೆಪಿಯಿಂದ ಪ್ರತಿಭಟನೆ







