ಶಿವಮೊಗ್ಗ: ಸಾಗರ ಟೌನ್ ಠಾಣೆಯ ಪೊಲೀಸ್ ಲೋಕೇಶ್ ಪುತ್ರಿ ಪ್ರೇಕ್ಷಾ ಎಲ್ ಗೌಡ ಕ್ರೀಡಾ ಸಾಧನೆ ಮುಂದುವರೆದಿದೆ. ಈ ಹಿಂದೆ ಹಲವು ಸಾಧನೆ ಗೈದಿದ್ದಂತ ಪ್ರೇಕ್ಷಾ ಇದೀಗ ಎತ್ತರ ಜಿಗಿತದಲ್ಲಿ ರಾಜ್ಯಮಟ್ಟದಲ್ಲಿ ಚಿನ್ನ ಗೆದ್ದು, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಳೆದ ನ.20ರಂದು ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 14 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆಯಿತು. ಈ ಕ್ರೀಡಾಕೂಟದಲ್ಲಿ ಶಿವಮೊಗ್ಗದ ಶ್ರೀ ಆದಿಚುಂಚನಗಿರಿ ಶಾಲೆಯ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ, ಸಾಗರ ಟೌನ್ ಪೊಲೀಸ್ ಠಾಣೆಯ ಪೋಲಿಸ್ ಕಾನ್ಸ್ ಟೇಬಲ್ ಆಗಿರುವಂತ ಲೋಕೇಶ್ ಮತ್ತು ಛಾಯಾ ಇವರ ಪುತ್ರಿ ಕುಮಾರಿ ಪ್ರೇಕ್ಷಾ.ಎಲ್. ಗೌಡ ಭಾಗವಹಿಸಿದ್ದರು.
ಹಾಸನದಲ್ಲಿ ನಡೆದಂತ ರಾಜ್ಯಮಟ್ಟದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ, ಚಿನ್ನದ ಪದಕವನ್ನು ಕುಮಾರಿ ಪ್ರೇಕ್ಷಾ ಎಲ್ ಗೌಡ ಗೆದ್ದಿದ್ದಾರೆ. ಮುಂದೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಲಿದ್ದಾರೆ.
ಲೋಕೇಶ್ ಅವರ ಪುತ್ರಿ ಪ್ರೇಕ್ಷಾ ಸಾಧನೆಗೆ ಸಾಗರ ASP ಬೆನಕ ಪ್ರಸಾದ್ ಶ್ಲಾಘಿಸಿದ್ದಾರೆ. ಸಾಗರ ಟೌನ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಪುಲ್ಲಯ್ಯ ರಾಥೋಡ್ ಸೇರಿದಂತೆ ಇತರೆ ಸಿಬ್ಬಂದಿಗಳು ಶುಭಾಶಯ ತಿಳಿಸಿ, ಮತ್ತಷ್ಟು ಸಾಧನೆ ಮಾಡಲಿ ಎಂಬುದಾಗಿ ಹಾರೈಸಿದ್ದಾರೆ.
ಅಂದಹಾಗೇ ಪೊಲೀಸ್ ಕಾನ್ಸ್ ಸ್ಟೇಬಲ್ ಲೋಕೇಶ್ ಪುತ್ರಿ ಪ್ರೇಕ್ಷಾ ಅವರು ಬೆಂಗಳೂರು, ಉಡುಪಿಯಲ್ಲಿ ನಡೆದಂತ ನಾಲ್ಕು ರಾಜ್ಯ ಮಟ್ಟದ ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಈ ಸ್ಪರ್ಧೆಗಳಲ್ಲಿ ಎರಡು ಕಂಚು, ಒಂದು ಬೆಳ್ಳಿ ಪದಕ ಗೆದ್ದಿದ್ದರು. ಇದೀಗ ಹಾಸನದಲ್ಲಿ ನಡೆದಂತ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.. ಸಂಪಾದಕರು
ರಾಜ್ಯದ ಈ ಸುಪ್ರಸಿದ್ಧ ದೇವಾಲಯದಲ್ಲಿ ಇನ್ಮುಂದೆ ‘ಮದುವೆ’ಗಳು ನಿಷೇಧ ; ಕಾರಣವೇನು.?








