ಶಿವಮೊಗ್ಗ: ಜಿಲ್ಲೆಯ ಸಾಗರ ವಲಯ ವ್ಯಾಪ್ತಿಯ ಅರಣ್ಯಾಧಿಕಾರಿಗಳಿಂದ ಭರ್ಜರಿ ಬೇಟೆಯಾಡಲಾಗಿದೆ. ಅಕ್ರಮವಾಗಿ ಬೀಟೆ ದಾಸ್ತಾನು ಮಾಡಿದ್ದಂತ ಸ್ಥಳದ ಮೇಲೆ ದಾಳಿ ನಡೆಸಿ, 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಅಕ್ರಮ ನಾಟಾವನ್ನು ಸೀಜ್ ಮಾಡಿದ್ದಾರೆ.
ಈ ಕುರಿತಂತೆ ಸಾಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಸಾಗರ ವಲಯ ವ್ಯಾಪ್ತಿಯ ಕೆಳದಿ ಶಾಖೆಯ ಮರಸ ಗ್ರಾಮದ ಸರ್ವೆ ನಂ.37ರಲ್ಲಿ ಸರ್ಕಾರಿ ಪ್ರದೇಶದಲ್ಲಿ ಅಕ್ರಮವಾಗಿ ಬೀಟೆ, ಸಾಗುವಾನಿ, ಹೊನ್ನೆ, ಬರಣಿಗೆ, ಕಾಡು ಜಾತಿಯ ನಾಟವನ್ನು ದಾಸ್ತಾನು ಮಾಡಿದ್ದಂತ ಮಾಹಿತಿ ಇಲಾಖೆಗೆ ತಿಳಿದು ಬಂದಿತ್ತು. ಹೀಗಾಗಿ ಅರಣ್ಯ ಸಂರಕ್ಷಣಾಧಿಕಾರಿ ರವಿ ಅವರಿಗೆ ಮಾಹಿತಿ ನೀಡಲಾಗಿತ್ತು ಎಂದಿದ್ದಾರೆ.
ಇಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿ ಮಾರ್ಗದರ್ಶನದಲ್ಲಿ ಸಾಗರ ವಲಯದ ಅರಣ್ಯಾಧಿಕಾರಿಗಳಾದಂತ ಅಣ್ಣಪ್ಪ ಬಿ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ. ಈ ದಾಳಿಯ ವೇಳೆಯಲ್ಲಿ 1.569 ಘನ ಮೀಟರ್ ನಾಜಾ ತುಂಡುಗಳನ್ನು ಹಾಗೂ ಸೈಜುಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ ಅಂದಾಜು 2 ಲಕ್ಷಕ್ಕೂ ಹೆಚ್ಚು ಎಂಬುದಾಗಿ ತಿಳಿಸಿದ್ದಾರೆ.
ಅಕ್ರಮವಾಗಿ ಬೀಟೆ ನಾಟಾವನ್ನು ದಾಸ್ತಾನು ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ದಾಸ್ತಾನು ಮಾಡಿದ್ದವರ ಪತ್ತೆಗೆ ಕ್ರಮವಹಿಸಲಾಗಿದೆ. ಆರೋಪಿಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಗುತ್ತಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಕೆಳದಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ವಿಜಯಕುಮಾರ್.ಜೆ, ಸಾಗರ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಅಶೋಕ ಅಯ್ಯನಹಳ್ಳಿ, ಗಸ್ತು ಅರಣ್ಯ ಪಾಲಕ ಯುವರಾಜ ಕೆ.ಆರ್, ಮಹೇಶ ಜಕ್ಕಳಿ, ಶಿವನಗೌಡ ಪಾಲ್ಗೊಂಡಿದ್ದರು ಎಂಬುದಾಗಿ ಮಾಹಿತಿ ನೀಡಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ನಾಳೆಯಿಂದ ‘BESCOM ಹೊಸ ನಿಯಮ’ ಜಾರಿ: ‘ರೂ.100 ಬಿಲ್ ಬಾಕಿ’ ಇದ್ರು ‘ವಿದ್ಯುತ್ ಸಂಪರ್ಕ’ ಕಡಿತ