ಶಿವಮೊಗ್ಗ: ಸಾಗರ ತಾಲ್ಲೂಕಿನ ಸಾರ್ವಜನಿಕರ ಸಮಸ್ಯೆ ಬಗ್ಗೆ ದೇಶಿ ಸೇವಾ ಬ್ರಿಗೆಡ್ ಸಂಘಟನೆ ಮೂಲಕ ಉಪ ವಿಭಾಗಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಸಮಸ್ಯೆ ಪರಿಹಾರವಾಗಿಲ್ಲ. ಹೀಗಾಗಿ ದೇಶಿ ಸೇವಾ ಬ್ರಿಗೇಡ್ ಮೂಲಕ ಪ್ರತಿಭಟನೆಯ ಹೋರಾಟಕ್ಕೆ ಇಳಿಯುವುದಾಗಿ ಅಧ್ಯಕ್ಷ ಶ್ರೀಧರ್ ಮೂರ್ತಿ ಎಚ್ಚರಿಸಿದ್ದಾರೆ.
ಇಂದು ಸಾಗರ ನಗರದ ಅಣಲೆಕೊಪ್ಪದಲ್ಲಿರುವಂತ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಸಾರ್ವಜನಿಕರ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ದೇಶಿ ಸೇವಾ ಬ್ರಿಗೇಡ್ ಸಂಘಟನೆಯನ್ನು ಹುಟ್ಟು ಹಾಕಲಾಗಿದೆ. ಈ ಸಂಘಟನೆಯ ಮೂಲಕ ಸರ್ಕಾರಿ ಕಚೇರಿಯಲ್ಲಿನ ಲಂಚಾವತಾರ, ಜನರ ಸಮಸ್ಯೆಗಳ ಬಗ್ಗೆ ಧ್ವನಿಯಾಗುವ ಕೆಲಸ ಮಾಡಲಾಗುತ್ತದೆ. ಆ ನಿಟ್ಟಿನಲ್ಲಿ ನಾವು ಸ್ವಯಂ ಸೇವಕರಂತೆ ಕೆಲಸ ಮಾಡುವುದಾಗಿ ಹೇಳಿದರು.
ಸಾಗರದ ಎಸಿ ಅವರ ಮೂಲಕ ಈಗಾಗಲೇ ಬಹಳಷ್ಟು ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಲಾಗಿತ್ತು. ಆದರೇ ಈವರೆಗೆ ಅನೇಕ ಸಮಸ್ಯೆ ಪರಿಹರಿಸುವಂತ ಕೆಲಸವನ್ನು ಸಾಗರದ ಉಪವಿಭಾಗಾಧಿಕಾರಿಗಳು ಮಾಡಿಲ್ಲ. ಸಾಗರದ ಆಡಳಿತ ವ್ಯವಸ್ಥೆ ಅಸಾಯಕವಾಗಿದೆ. ಹೀಗಾಗಿ ಇದಕ್ಕೆ ಚುರುಕು ಮುಟ್ಟಿಸುವ ಕೆಲಸವನ್ನು ನಮ್ಮ ಸಂಘಟನೆಯು ಮಾಡಲಿದೆ ಎಂದರು.
ಕರೂರು ಹೋಬಳಿಯಲ್ಲಿ ಶೌಚಾಲಯದ ಕೊರತೆಯಿದೆ. ಬಯಲು ಶೌಚಕ್ಕೆ ಜನರು ಹೋಗುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಎಸಿ ಮೂಲಕ ಮನವಿ ಮಾಡಲಾಗಿದೆ. ಇ-ಖಾತಾ ಸಮಸ್ಯೆ ಬಗೆ ಹರಿಸಲು ಕ್ರಮಕ್ಕೆ ಒತ್ತಾಯಿಸಲಾಗುತ್ತಿದೆ. ಸಾಗರದ ಸರ್ಕಾರಿ ಕಚೇರಿಗಳಲ್ಲಿ ಲಂಚಾವತಾರ ನಡೆಯುತ್ತಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡುವಂತೆ ಒತ್ತಾಯಿಸಿದರು.
ಸಾಗರದ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಅಲ್ಲಿ ವ್ಯಾಸಂಗ ಮಾಡುತ್ತಿರುವಂತ ವಿದ್ಯಾರ್ಥಿಗಳಿಗೆ ರೋಗ ರುಚಿನಗಳಿಗೆ ಆಹ್ವಾನಿ ನೀಡುವಂತೆ ಚರಂಡಿ ವ್ಯವಸ್ಥೆಯಿದೆ. ಕೊಠಡಿಗಳ ಅಕ್ಕಪಕ್ಕದಲ್ಲೇ ಗಲೀಜು. ಈ ಸಮಸ್ಯೆಯನ್ನು ಸರಿ ಪಡಿಸುವಂತ ಕೆಲಸ ಮಾಡಬೇಕು ಎಂದರು.
ಸಾಗರ ಮೈಸೂರು ಕೆಫೆ ರಸ್ತೆಯಲ್ಲಿನ ಚರಂಡಿ ಮೇಲಿನ ಚಪ್ಪಡಿ ಕಲ್ಲುಗಳನ್ನು ಕಿತ್ತು ಹಾಕಲಾಗಿದೆ. ಇದರಿಂದ ಅಲ್ಲಿನ ನಿವಾಸಿಗಳು ಗಬ್ಬು ವಾಸನೆಯ ಜೊತೆಗೆ ಬದುಕುವಂತೆ ಆಗಿದೆ. ಒಂದೂವರೆ ತಿಂಗಳಾದರೂ ಚರಂಡಿಯನ್ನು ಸರಿಪಡಿಸಿ ಮೇಲೆ ಕಲ್ಲು ಮುಚ್ಚುವ ಕೆಲಸ ಮಾಡಿಲ್ಲ. ಇದರಿಂದ ಸಾರ್ವಜನಿಕರಿಗೆ, ವಾಹನ ಸವಾರರಿಗೆ, ಸ್ಥಳೀಯ ನಿವಾಸಿಗಳಿಗೆ ಸಮಸ್ಯೆಯಾಗುತ್ತಿದೆ ಎಂಬುದಾಗಿ ಆಕ್ರೋಶ ವ್ಯಕ್ತ ಪಡಿಸಿದರು.
ಸಾಗರ ತಾಲ್ಲೂಕಿನ ಬಿಚ್ಚುಗೋಡು ಗ್ರಾಮದಲ್ಲಿ ನೀರಿನ ಸಮಸ್ಯೆ ಕೂಡ ಇದೆ. ಅದನ್ನು ಸರಿಪಡಿಸುವಂತೆಯೂ ಜನಪ್ರತಿನಿಧಿಗಳು, ಅಧಿಕಾರಿಗಳಿಗೂ ಮನವಿ ಮಾಡಲಾಗಿತ್ತು. ಆದರೂ ಈವರೆಗೆ ಸಮಸ್ಯೆ ಪರಿಹರಿಸುವಂತ ಕೆಲಸ ಮಾಡಿಲ್ಲ. ಮುಂದಿನ ದಿನಗಳಲ್ಲಿ ಎಸಿ ಕಚೇರಿಯ ಮುಂದೆ ಈ ಸಮಸ್ಯೆಗಳನ್ನಿಟ್ಟುಕೊಂಡು ಧರಣಿ, ಪ್ರತಿಭಟನೆಗೆ ಕೂರುವುದಾಗಿ ದೇಶಿ ಸೇವಾ ಬ್ರಿಗೇಡ್ ಅಧ್ಯಕ್ಷ ಎಂ.ಶ್ರೀಧರ್ ಮೂರ್ತಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಾಮಕೃಷ್ಣಪ್ಪ, ರಾಜು, ಶ್ರೀಪಾದ ಹೆಗಡೆ, ಮಹಭಲೇಶ್, ಬಿಜೆ ಸ್ವಾಮಿ, ನಾಗಪ್ಪ, ಸರೋಜಮ್ಮ, ಮಧು, ಸ್ವಾಮಿ, ಸ್ವಾಮಿ.ಬಿಎಂ, ಜನಾರ್ಧನ್ ಬಿಚ್ಚುಗೋಡು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BREAKING: ಶಾಸಕರಿಗೆ ‘ತಲಾ 10 ಕೋಟಿ ಅನುದಾನ’ ಘೋಷಿಸಿದ ‘ಸಿಎಂ ಸಿದ್ಧರಾಮಯ್ಯ’
BIG NEWS: ಬೆಂಗಳೂರಲ್ಲಿ ಅನಧಿಕೃತ ಜಾಹೀರಾತು ಅಳವಡಿಸುವವರ ಮೇಲೆ ‘FIR’ ದಾಖಲಿಸಿ: ತುಷಾರ್ ಗಿರಿನಾಥ್ ಖಡಕ್ ಸೂಚನೆ