ಶಿವಮೊಗ್ಗ: ಇಂದು ಸಾಗರದ ಗಣಪಿತ ಬ್ಯಾಂಕ್ ನ ಆಡಳಿತ ಮಂಡಳಿಯ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ನಗರಸಭೆ ಸದಸ್ಯ ವಿ.ಶಂಕರ್ (ಮಾಸ್ಟರ್ ಶಂಕರ್), ಶ್ರೀನಿವಾಸ್ ಮೇಸ್ತ್ರಿ, ಸದಸ್ಯೆ ಮಧುಮಾಲತಿ ಸೇರಿದಂತೆ 13 ಮಂದಿ ಗೆಲುವು ಸಾಧಿಸಿರುವುದಾಗಿ ತಿಳಿದು ಬಂದಿದೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿರುವಂತ ಶ್ರೀ ಗಣಪತಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಗೆ ಆಡಳಿತ ಮಂಡಳಿ ಸದಸ್ಯರ ನೇಮಕಾತಿಗಾಗಿ ಮತದಾನ ನಡೆಯಿತು. ಸಾಗರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಂತ ಮತದಾನದಲ್ಲಿ 1500 ಷೇರುದಾರರು ಪಾಲ್ಗೊಂಡು ತಮ್ಮ ಮತವನ್ನು ಚಲಾಯಿಸಿದ್ದಾಗಿ ತಿಳಿದು ಬಂದಿದೆ.
ಇಂದಿನ ಗಣಪತಿ ಬ್ಯಾಂಕ್ ಚುನಾವಣೆಯಲ್ಲಿ 13 ಮಂದಿ ಗೆಲುವು ಸಾಧಿಸಿದ್ದಾರೆ. ಶ್ರೀ ಗಣಪತಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ ಚುನಾವಣೆಯಲ್ಲಿ ಗೆದ್ದಂತ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ.
ಹೀಗಿದೆ ಗಣಪತಿ ಬ್ಯಾಂಕ್ ಚುನಾವಣೆಯಲ್ಲಿ ಗೆಲುವು ಸಾಧಿಸಿದಂತ ಅಭ್ಯರ್ಥಿಗಳ ಪಟ್ಟಿ
- ಶ್ರೀನಿವಾಸ್ ಮೇಸ್ತ್ರಿ, ಸಾಮಾನ್ಯ ವರ್ಗ, 786 ಮತಗಳು
- ಬಿ.ದೇವೇಂದ್ರ ಭೋಜಪ್ಪ, ಸಾಮಾನ್ಯ ವರ್ಗ, 765 ಮತಗಳು
- ಕೃಷ್ಣಮೂರ್ತಿ ಭಂಡಾರಿ, ಸಾಮಾನ್ಯ ವರ್ಗ, 746 ಮತಗಳು
- ಗಜಾನನ ಜೋಯ್ಸ್ ಎಸ್, ಸಾಮಾನ್ಯ ವರ್ಗ, 689 ಮತಗಳು
- ವಿ ಗುರು ( ಡಿಶ್ ಗುರು), ಸಾಮಾನ್ಯ ವರ್ಗ, 650 ಮತಗಳು
- ವೈ ಮೋಹನ (ಆಸ್ಪತ್ರೆ ಮೋಹನ್), ಸಾಮಾನ್ಯ ವರ್ಗ, 584 ಮತಗಳು
- ರಂಗಧೋಳ್ ವಿನಾಯಕ ರಾವ್, ಸಾಮಾನ್ಯ ವರ್ಗ, 562 ಮತಗಳು
- ನಾರಾಯಣ, ಪರಿಶಿಷ್ಟ ಜಾತಿ, 769 ಮತಗಳು
- ರಮೇಶ್ ಎಸ್ ಎಂ, ಪರಿಶಿಷ್ಟ ಪಂಗಡ, 565 ಮತಗಳು
- ವಿ.ಶಂಕರ್ ( ಮಾಸ್ಟರ್ ಶಂಕರ್ ), ಹಿಂದುಳಿದ ವರ್ಗ-ಎ, 622 ಮತಗಳು
- ದಳವಾಯಿ ಜಿ ಬಸಲಿಂಗಪ್ಪ, ಹಿಂದುಳಿದ ವರ್ಗ-ಬಿ, 620 ಮತಗಳು
- ಮಧು ಮಾಲತಿ ಕಲ್ಲಪ್ಪ, ಮಹಿಳಾ ವರ್ಗ, 539 ಮತಗಳು
- ಸರಸ್ವತಿ ನಾಗರಾಜ್, ಮಹಿಳಾ ಮೀಸಲಾತಿ, 535 ಮತಗಳು.
ಈ ಮೇಲ್ಕಂಡ ಅಭ್ಯರ್ಥಿಗಳು ಗಣಪತಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧಿಸಿ, ನೀಡಿದಂತ ಅಂಕಿ ಅಂಶದಂತೆ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಿನ ಮತಗಳಿಸುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ ಅಂತ ಚುನಾವಣಾಧಿಕಾರಿ ಅಧಿಕೃತ ಘೋಷಣೆ ಮಾಡಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
GOOD NEWS: ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ಅಪಘಾತ ಪರಿಹಾರ ಯೋಜನೆ ಜಾರಿ
ಡಿ.31ರಂದು ಅಲ್ಲಿ ಇಲ್ಲಿ ಯಾಕೆ? ‘ಫ್ಯಾಮಿಲಿ ಸಹಿತ’ ಇಲ್ಲಿಗೆ ಹೋಗಿ, ಹೊಸ ವರ್ಷಾಚರಣೆ ಮಾಡಿ
BREAKING: KPSC ಕೆಎಎಸ್ ಪರೀಕ್ಷೆಯಲ್ಲಿ ಮಹಾ ಎಡವಟ್ಟು: OMR ಶೀಟ್ ನೋಂದಣಿ ಸಂಖ್ಯೆಯೇ ಬದಲಾವಣೆ