ಬೀದರ್: ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಂತ ಗುತ್ತಿಗೆದಾರ ಸಚಿನ್ ಕೇಸನ್ನು ಸಿಐಡಿ ಅಧಿಕಾರಿಗಳ ತಂಡದಿಂದ ತನಿಖೆಯನ್ನು ಚುರುಕುಗೊಳಿಸಲಾಗಿದೆ. ಇಂದು ನೋಟಿಸ್ ನೀಡಿದ್ದರ ಹಿನ್ನಲೆಯಲ್ಲಿ ಐವರು ಆರೋಪಿಗಳು ಸಿಐಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಇವರನ್ನು ಬಂಧಿಸಲಾಗಿದೆ.
ಗುತ್ತಿಗೆದಾರ ಸಚಿನ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನವೇ ಡೆತ್ ನೋಟ್ ಬರೆದಿಟ್ಟಿದ್ದರು. ಆ ಡೆತ್ ನೋಟ್ ನಲ್ಲಿ ಎಂಟು ಮಂದಿಯ ಹೆಸರನ್ನು ಉಲ್ಲೇಖಿಸಲಾಗಿತ್ತು. ಈ ಹಿನ್ನಲೆಯಲ್ಲಿ ಜನವರಿ 6ರಂದು ತನಿಖಾ ತಂಡವಾದಂತ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಐವರು ಆರೋಪಿಗಳಿಗೆ ನೋಟಿಸ್ ನೀಡಿದ್ದರು.
ಸಿಐಡಿ ನೋಟಿಸ್ ಹಿನ್ನಲೆಯಲ್ಲಿ ಇಂದು ಬೀದರ್ ನ ರೈಲ್ವೆ ಇಲಾಖೆಯ ಕಚೇರಿಯಲ್ಲಿನ ಸಿಐಡಿ ಅಧಿಕಾರಿಗಳ ಕಚೇರಿಗೆ ಹಾಜರಾಗಿ, ವಿಚಾರಣೆಯನ್ನು ಎದುರಿಸಿದರು. ಆ ಮೂಲಕ ಗೋರಕನಾಥ ಸಜ್ಜನ್, ನಂದಕುಮಾರ್ ನಾಗಬುಜಂಗಿ, ರಾಜು ಕಪನೂರು, ರಾಮನಗೌಡ ಪಾಟೀಲ್ ಹಾಗೂ ಸತೀಶ್ ಎಂಬುವರು ವಿಚಾರಣೆ ಎದುರಿಸಿದರು.
ಈ ಬಳಿಕ ಐವರು ಆರೋಪಿಗಳನ್ನು ಸಿಐಟಿ ಅಧಿಕಾರಿಗಳು ವಿಚಾರಣೆಯ ಬಳಿಕ ಬಂಧಿಸಿರುವುದಾಗಿ ತಿಳಿದು ಬಂದಿದೆ. ಈ ಮೂಲಕ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸಲ್ಲಿ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಂತ 8 ಮಂದಿಯಲ್ಲಿ ಐವರನ್ನು ಸಿಐಡಿ ಬಂಧಿಸಿದೆ.
BREAKING: ಬೆಂಗಳೂರಿನ BBMP ಕಚೇರಿಗೆ ಉಪ ಲೋಕಾಯುಕ್ತ ದಿಢೀರ್ ಭೇಟಿ, ಪರಿಶೀಲನೆ
Electricity Bill: 2 ಬಿಲಿಯನ್ ರೂಪಾಯಿ ವಿದ್ಯುತ್ ಬಿಲ್ ಕಂಡು ಆಘಾತಕ್ಕೊಳಗಾದ ವ್ಯಕ್ತಿ!