ಕೆಎನ್ ಎನ್ ನ್ಯೂಸ್ ಡೆಸ್ಕ್ : ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್(S Jaishankar) ಅವರು ಅಮೆರಿಕದ ರೆಸ್ಟೋರೆಂಟ್ನಲ್ಲಿ ನಡೆದ ಘಟನೆಯನ್ನು ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೊದಲ್ಲಿ, ಜೈಶಂಕರ್ ಅವರು 2021 ರಲ್ಲಿ ಯುಎಸ್ಗೆ ಭೇಟಿ ನೀಡಿದ ಬಗ್ಗೆ ಮಾತನಾಡಿದ್ದಾರೆ. ಕೋವಿಡ್ ನಿರ್ಬಂಧಗಳ ನಡುವೆ ಪ್ರಯಾಣವು ಮತ್ತೆ ಪ್ರಾರಂಭವಾಯತು. ಈ ವೇಳೆ ಅಮೆರಿಕದಲ್ಲಿ ನೆಲೆಸಿರುವ ತನ್ನ ಮಗನೊಂದಿಗೆ ಒಂದು ರೆಸ್ಟೋರೆಂಟ್ಗೆ ಹೋಗಿದ್ದೆ. ಅಲ್ಲಿ ನಮಗೆ ಅರು ನಮ್ಮ ಕೋವಿಡ್ ಲಸಿಕೆ ಪ್ರಮಾಣಪತ್ರವನ್ನು ನೋಡಲು ತಿಳಿಸಿದರು. ಈ ವೇಳೆ ನಾನು ಮೊಬೈಲ್ನಲ್ಲಿದ್ದ ನನ್ನ ಸರ್ಟಿಫೀಕೇಟ್ಅನ್ನು ತೋರಿಸಿದೆ. ಆದ್ರೆ, ನನ್ನ ಮಗ ಕೇಬಿನಿಂದ ಪರ್ಸ್ ತೆಗೆದು ಅದರಲ್ಲಿ ಮಡಿಚಿಟ್ಟಿದ್ದ ಒಂದು ಕಾಗದವನ್ನು ಹೊರತೆಗೆದು ಇದು ನನ್ನ ಪ್ರಮಾಣಪತ್ರ ಎಂದು ತೋರಿಸಿದ! ಎಂದು ಹೇಳಿದ್ದಾರೆ.
ಜೈಶಂಕರ್ ಮುಗುಳ್ನಗುತ್ತಾ ತಮ್ಮ ಮಾತನ್ನು ಮುಂದುವರಿಸಿದರು, ʻನಾನು ಅವನ ಕೈಯ್ಯಲ್ಲಿದ್ದ ಕಾಗದವನ್ನು ನೋಡಿ, ಅಮೆರಿಕಾದವರು ಇನ್ನೂ ಇದೇ ಹಂತದಲ್ಲಿದ್ದಾರೆ ಎಂದುಕೊಂಡೆ ಎಂದು ನಕ್ಕರು!ʼ. ಇದನ್ನು ಕೇಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಚಪ್ಪಾಳೆ ತಟ್ಟುತ್ತಾ ಜೋರಾಗಿ ನಗುವುದನ್ನು ವಿಡಿಯೋದಲ್ಲಿ ನೋಡಬಹುದು.
Dr S Jaishankar, Min of External Affairs India went to a Restaurant with his son in the US and what happened next is hilarious 😂 pic.twitter.com/Cqfcw2ZowF
— Arun Pudur 🇮🇳 (@arunpudur) August 13, 2022
ಈ ಕ್ಲಿಪ್ಅನ್ನು ಟ್ವಿಟರ್ ಬಳಕೆದಾರರಾದ ಅರುಣ್ ಪುದೂರ್ ಅವರು ಹಂಚಿಕೊಂಡಿದ್ದಾರೆ. “ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಅವರು ಯುಎಸ್ನಲ್ಲಿರುವ ತಮ್ಮ ಮಗನೊಂದಿಗೆ ರೆಸ್ಟೋರೆಂಟ್ಗೆ ಹೋದಾಗ ನಡೆದದ್ದು ಬಹಳ ಉಲ್ಲಾಸದಾಯಕವಾಗಿದೆ” ಎಂದಿದ್ದಾರೆ.
ಟ್ವಿಟರ್ನಲ್ಲಿ ಈ ವೀಡಿಯೋ 300,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ.
BIGG NEWS: ಸಿಲಿಕಾನ್ ಸಿಟಿಯಲ್ಲಿ ಪೊಲೀಸ್ ಆಗಿಲ್ಲವೆಂದು ʼನಕಲಿ ಪೊಲೀಸ್ʼ ಆಗಿ ಕಳ್ಳತನ; ಆರೋಪಿ ಬಂಧನ