ಕೈವ್: ರಷ್ಯಾದ ಮಿಲಿಟರಿ ವಿಮಾನವೊಂದು ಸೋಮವಾರ ಉಕ್ರೇನ್ನ ಗಡಿಯ ಸಮೀಪವಿರುವ ನೈರುತ್ಯ ರಷ್ಯಾದ ಪಟ್ಟಣವಾದ ಯೆಸ್ಕ್ನ ಒಂಬತ್ತು ಅಂತಸ್ತಿನ ವಸತಿ ಕಟ್ಟಡಕ್ಕೆ ಅಪ್ಪಳಿಸಿದೆ. ಘಟನೆಯಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.
“ರಷ್ಯಾದ ಮಿಲಿಟರಿ ವಿಮಾನ ಒಂಬತ್ತು ಅಂತಸ್ತಿನ ವಸತಿ ಕಟ್ಟಡಕ್ಕೆ ಅಪ್ಪಳಿಸಿದ ಪರಿಣಾಮ ಕಟ್ಟಡವು ಬೆಂಕಿಯಿಂದ ಆವರಿಸಿದೆ. ಘಟನೆಯಲ್ಲಿ ಆರು ಜನರು ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಸೇರಿದಂತೆ 19 ಮಂದಿ ಗಾಯಗೊಂಡಿದ್ದಾರೆ” ಎಂದು ತುರ್ತು ಪರಿಸ್ಥಿತಿಗಳ ಸಚಿವಾಲಯದ ವಕ್ತಾರರು ಸೋಮವಾರ ತಡರಾತ್ರಿ ಮಾಹಿತಿ ನೀಡಿದ್ದಾರೆ.
ಮಿಲಿಟರಿ ಏರ್ಫೀಲ್ಡ್ನಿಂದ ತರಬೇತಿ ಹಾರಾಟದ ಸಮಯದಲ್ಲಿ ಅಪಘಾತ ಸಂಭವಿಸಿದೆ. ಟೇಕಾಫ್ ಮಾಡುವಾಗ ಎಂಜಿನ್ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪೈಲಟ್ಗಳು ವರದಿ ಮಾಡಿದ್ದಾರೆ. ಅದು ಕಟ್ಟಡಕ್ಕೆ ಅಪ್ಪಳಿಸಿದಾಗ ವಿಮಾನದ ಇಂಧನವು ಹೊತ್ತಿಕೊಂಡಿತು ಎಂದು ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
BIG NEWS : ರೈತರಿಗೆ ಗುಡ್ನ್ಯೂಸ್: ಪಿಎಂ ಕಿಸಾನ್ ಯೋಜನೆಯಡಿ 12ನೇ ಕಂತಿನ ಹಣ ಬಿಡುಗಡೆ | PM-Kisan
BIGG NEWS : ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗುವವರಿಗೆ `KSRTC’ಯಿಂದ ಗುಡ್ ನ್ಯೂಸ್ : 1500 ಹೆಚ್ಚುವರಿ ಬಸ್ ಸಂಚಾರ