ಕೈವ್ (ಉಕ್ರೇನ್): ಉಕ್ರೇನ್ನ ರಾಜಧಾನಿ ಕೈವ್ ಮೇಲೆ ಇಂದು ಮುಂಜಾನೆ ಡ್ರೋನ್ಗಳ ದಾಳಿ ನಡೆದಿದ್ದು, ಅನೇಕ ಸ್ಫೋಟಗಳಿಂದ ನಗರ ತತ್ತರಿಸಿ ಹೋಗಿದೆ ಎಂದು ಉಕ್ರೇನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಉಕ್ರೇನ್ನ ಅಧ್ಯಕ್ಷೀಯ ಕಚೇರಿಯ ಮುಖ್ಯಸ್ಥ ಆಂಡ್ರಿ ಯೆರ್ಮಾಕ್, ಕಾಮಿಕೇಜ್ ಡ್ರೋನ್ಗಳು ನಗರದ ಮೇಲೆ ದಾಳಿ ಮಾಡುತ್ತಿವೆ. ಇಂದು ಬೆಳಗ್ಗೆ ಸುಮಾರು 6:35 ರ ಸುಮಾರಿಗೆ ಕೈವ್ನಲ್ಲಿ ಸ್ಫೋಟದ ಶಬ್ದ ಕೇಳಿ ಬಂದಿದೆ. ನಂತ್ರ ದೇಶದ ಹೆಚ್ಚಿನ ಭಾಗಗಳಲ್ಲಿ ಮತ್ತೆ ಸ್ಫೋಟಗಳು ಸಂಭವಿಸಿವೆ ಎಂದು ಅವರು ತಿಳಿಸಿದ್ದಾರೆ.
ಘಟನಾ ಸ್ಥಳಗಳಲ್ಲಿ ಅಗ್ನಿಶಾಮಕ ದಳದವರು ಕಾರ್ಯನಿರ್ವಹಿಸುತ್ತಿದ್ದಾರೆ. ಹಲವಾರು ವಸತಿ ಕಟ್ಟಡಗಳು ಹಾನಿಗೊಳಗಾಗಿವೆ. ವೈದ್ಯರು ಸ್ಥಳದಲ್ಲೇ ಇದ್ದಾರೆ. ಇದಕ್ಕೆಲ್ಲಾ ರಷ್ಯಾನೇ ಕಾರಣ ಎಂದು ಆರೋಪಿಸಿದ್ದಾರೆ.
ಉಕ್ರೇನ್ ರಾಜಧಾನಿ ಮತ್ತು ದೇಶದಾದ್ಯಂತದ ನಗರಗಳ ಮೇಲೆ ರಷ್ಯಾ ಬೃಹತ್ ಕ್ಷಿಪಣಿ ದಾಳಿ ನಡೆದ ಒಂದು ವಾರದ ಬಳಿಕ ಈ ದಾಳಿಗಳು ಸಂಭವಿಸಿವೆ.
BIGG NEWS: ಗ್ರಾಹಕರಿಗೆ ಶಾಕಿಂಗ್ ನ್ಯೂಸ್; ಹಾಲಿನ ನಂತರ ಈರುಳ್ಳಿ ಬೆಲೆಯಲ್ಲಿ ಭಾರಿ ಏರಿಕೆ | onion prices rise
BIGG NEWS : ಮಳಲಿ ಮಸೀದಿ ವಿವಾದ : ಇಂದು ತೀರ್ಪು ಪ್ರಕಟಿಸಲಿರುವ ಮಂಗಳೂರು ಕೋರ್ಟ್