ಬೆಂಗಳೂರು: ಬಿಗ್ ಬಾಸ್ ಸೀಸನ್-12ರ ಗ್ರ್ಯಾಂಡ್ ಫಿನಾಲೆ ಆರಂಭಗೊಂಡಿದೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಂತ ರಘು ಕೊನೆಯ ಕ್ಷಣದಲ್ಲಿ ಮನೆಯಿಂದ ಹೊರಬಂದಿದ್ದಾರೆ. ಈ ಮೂಲಕ ಗ್ರ್ಯಾಂಡ್ ಫಿನಾಲೆಯಿಂದ ರಗಡ್ ರಘು ಔಟ್ ಆಗಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಬಳಿಯಲ್ಲಿರುವಂತ ಬಿಗ್ ಬಾಸ್ ಮನೆಯಲ್ಲಿ ಸೀಸನ್-12ರ ಗ್ರ್ಯಾಂಡ್ ಫಿನಾಲೆ ಆರಂಭಗೊಂಡಿದೆ. ಗೆಲುವಿನ ಮೆಟ್ಟಿಲೇರಲು ಕಾತುರದಿಂದಲೇ ಕಾಯುತ್ತಿದ್ದಂತ ಟಾಪ್ 5 ಪೈಕಿ ರಗಡ್ ರಘು ಮನೆಯಿಂದ ಹೊರ ಬಂದಿದ್ದಾರೆ.
ಬಿಗ್ ಬಾಸ್ ಸೀಸನ್-12ರ ಗ್ರ್ಯಾಂಡ್ ಫಿನಾಲೆಯ ಟೈಟಲ್ ವಿನ್ನಿಂಗ್ ಸನಿಹದಲ್ಲೇ ರಘು ಹೊರ ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ, ಅಶ್ವಿನಿ ಗೌಡ, ಕಾವ್ಯಾ ಹಾಗೂ ಗಿಲ್ಲಿ ನಟ ಉಳಿದುಕೊಂಡಿದ್ದಾರೆ.
ಕೊನೆಯ ಕ್ಷಣದಲ್ಲಿ ಬಿಗ್ ಬಾಸ್ ಸೀಸನ್-12 ಕನ್ನಡದ ಗ್ರ್ಯಾಂಡ್ ಫೀನಾಲೆಯಿಂದ ಹೊರ ಬಂದಿರುವಂತ ರಗಡ್ ರಘು ಅವರು 4ನೇ ರನ್ನರ್ ಅಪ್ ಆಗಿದ್ದಾರೆ. ಹೀಗಾಗಿ ರಘುಗೆ 3.50 ಲಕ್ಷ ಬಹುಮಾನ ಸಿಕ್ಕಿದೆ.
BREAKING: ಬಿಡದಿಯ ಬಿಗ್ ಬಾಸ್ ಮನೆಯ ಮುಂದೆ ಜನಜಂಗುಳಿ; ಪೊಲೀಸರಿಂದ ಲಾಠಿ ಚಾರ್ಜ್








