ಮಂಡ್ಯ: ಜಿಲ್ಲೆಯಲ್ಲಿ ಮದ್ದೂರಲ್ಲಿ ಗಣೇಶ ವಿಸರ್ಜನೆಯ ವೇಳೆಯಲ್ಲಿ ಕಲ್ಲು ತೂರಾಟ ಘಟನೆ ನಡೆದಿದೆ. ಅನ್ಯಕೋಮಿನವರು ಗಣೇಶ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಮಾಡಿದ್ದಾಗಿ ಆರೋಪಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಕಲ್ಲು ತೂರಾಟ ನಡೆಸಿದ್ದರಿಂದ ಹಲವರಿಗೆ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲ ಕಾಲ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಸ್ಥಳದಲ್ಲಿದ್ದಂತ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ, ಗಣೇಶ ಮೆರವಣಿಗೆ ಮುಂದುವರೆಸಲು ಅವಕಾಶ ಮಾಡಿಕೊಟ್ಟರು.
ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಚನ್ನೇಗೌಡ ಬಡಾವಣೆಯಲ್ಲಿ ಕೂರಿಸಿದ್ದಂತ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ವೇಳೆಯಲ್ಲಿ ಅನ್ಯ ಕೋಮಿನಿಂದ ಕಲ್ಲು ತೂರಾಟ ನಡೆಸಿರುವಂತ ಆರೋಪ ಕೇಳಿ ಬಂದಿದೆ. ಮಸೀದಿಯ ಮುಂಭಾಗದಲ್ಲಿ ಡಿಜೆ ಬಳಸಿ ನೃತ್ಯ ಮಾಡಿದಂತ ಸಂದರ್ಭದಲ್ಲಿ ಈ ಗಲಭೆ ಉಂಟಾಗಿದೆ. ಈ ವೇಳೆಯಲ್ಲಿ ಅನ್ಯಕೋಮಿನಿಂದ ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ್ದಾಗಿ ಹೇಳಲಾಗುತ್ತಿದೆ. ಹೀಗಾಗಿ ಪ್ರತಿಯಾಗಿ ಕಲ್ಲು ತೂರಾಟ ನಡೆಸಲಾಗಿದ್ದು ಹಲವರಿಗೆ ಗಾಯವಾಗಿದೆ ಎಂದು ಎನ್ನಲಾಗುತ್ತಿದೆ.
ಗಣೇಶ ಮೂರ್ತಿ ವಿಸರ್ಜನೆಯ ವೇಳೆಯಲ್ಲಿ ಉಂಟಾದಂತ ಗಲಭೆಯಲ್ಲಿ ಹಲವರು ಗಾಯಗೊಂಡಿದ್ದು, ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಗಲಭೆ ಖಂಡಿಸಿ ಹಿಂದೂ -ಮುಸ್ಲೀಂ ಮುಖಂಡರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ಮದ್ದೂರು ಪಟ್ಟಣದಾದ್ಯಂತ ಭಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ವರದಿ: ಗಿರೀಶ್ ರಾಜ್, ಮಂಡ್ಯ
ರಾಜ್ಯ ಮಟ್ಟದ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿ ಪಡೆದ ಸಾಗರದ ‘ಸರ್ಫರಾಜ್’ಗೆ ಕಾಂಗ್ರೆಸ್ ಮುಖಂಡರಿಂದ ಸನ್ಮಾನ
SHOCKING : ವಿವಾಹಿತನಿಂದ ನಿರಂತರ ಅತ್ಯಾಚಾರ : ಮಗುವಿಗೆ ಜನ್ಮ ನೀಡಿದ 11 ವರ್ಷದ ಬಾಲಕಿ.!