ಬೆಂಗಳೂರು: ಬೆಂಗಳೂರು ಏರ್ ಪೋರ್ಟ್ ನಲ್ಲಿ ಸೇನಾಧಿಕಾರಿಗಳಿಬ್ಬರು ಭದ್ರತಾ ಸಿಬ್ಬಂದಿ ಮತ್ತು ಸೇವಾ ಸಿಬ್ಬಂದಿಗೆ ಜೊತೆಗೆ ಗಲಾಟೆ ಮಾಡಿಕೊಂಡಿದ್ದಾರೆ. ಈ ಘಟನೆಯ ವೇಳೆ ಅವರಿಗೆ ಮನಬಂದಂತೆ ಥಳಿಸಿದ್ದು, ಸ್ಥಳದಲ್ಲಿ ಉದ್ವಗ್ನತೆ ಪರಿಸ್ಥಿರಿ ಎದುರಾಗಿದೆ.
ಇನ್ನು ಅವರಿಬ್ಬರು ಕುಡಿದ ಮತ್ತನಲ್ಲಿ ಇದ್ದರು ಎಂದು ಹೇಳಲಾಗಿದೆ. ತಮ್ಮ ಕಾರನ್ನು ವಿಐಪಿ ಲೇನ್ ನಲ್ಲಿ ಬಿಡುವಂತೆ ಭದ್ರತಾ ಸಿಬ್ಬಂದಿಗೆ ಒತ್ತಾಯಿಸಿದ್ದಾರೆ. ಇದಕ್ಕೆ ಅವರು ಒಪ್ಪದ ಕಾರಣ ಅವರ ಜೊತೆಗೆ ಗಲಾಟೆ ಮಾಡಿ ಅವರಿಗೆ ಹೊಡೆದಿದ್ದಾರೆ. ಇವರಿಬ್ಬರ ವಿರುದ್ಧ ಬೆದರಿಕೆ ಹಾಕಿದಲ್ಲದೇ ಹಲ್ಲೆ ಆರೋಪದಡಿ ಬಂಧಿಸಲಾಗಿದೆ. ನಂತರ ಜಾಮೀನು ಆಧಾರದ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಕಳೆದ ಶುಕ್ರವಾರದಂದು ಈ ಘಟನೆ ನಡೆದಿದ್ದು , ತಡವಾಗಿ ಬೆಳಕಿಗೆ ಬಂದಿದೆ.